ಪಿಎಲ್‌ಎ ಉಗ್ರರ ದಾಳಿಗೆ ಮೂವರು ಯೋಧರು ಹುತಾತ್ಮ, 4 ಮಂದಿಗೆ ಗಾಯ

Public TV
2 Min Read
Assam Rifles manipura PLA

ಚಾಂಡೇಲ್‌: ಮಣಿಪುರ – ಮ್ಯಾನ್ಮಾರ್‌ ಗಡಿಯಲ್ಲಿ ಉಗ್ರರ ದಾಳಿಗೆ ಅಸ್ಸಾಂ ರೈಫಲ್ಸ್‌ನ 4ನೇ ಘಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಕಳೆದ ರಾತ್ರಿ ಮ್ಯಾನ್ಮಾರ್‌ನಲ್ಲಿರುವ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಹೆಸರಿನ ಉಗ್ರರು ಸುಧಾರಿತ ಸ್ಫೋಟಕ ಸಾಮಾಗ್ರಿ(ಐಇಡಿ) ಬಳಸಿ ಕೃತ್ಯ ಎಸಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Assam Rifles manipura PLA 2

ಇಂಫಾಲದಿಂದ 100 ಕಿ.ಮೀ ದೂರದಲ್ಲಿ ಸೈನಿಕರು ವಾಹನದಲ್ಲಿ ಬರುತ್ತಿದ್ದಾಗ ಐಇಡಿ ಸ್ಫೋಟಿಸಿದ್ದಾರೆ. ಬಳಿಕ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಸ್ವಾತಂತ್ರ್ಯ ಬಂದ ನಂತರ ಮ್ಯಾನ್ಮಾರ್‌ ಗಡಿಯಲ್ಲಿ ಸುಮಾರು 750 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. 2017ರ ಅಸ್ಸಾಂ ರೈಫಲ್ಸ್‌ ಯೋಧರ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 6 ಮಂದಿ ಪಿಎಲ್‌ಎ ಉಗ್ರರ ಮೇಲೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು.

Assam Rifles manipura 4

ಗಲ್ವಾನ್‌ ಘರ್ಷಣೆಯ ಬಳಿಕ ‘ಪಿಎಲ್‌ಎʼ ಪದ ಹೆಚ್ಚು ಬಳಕೆಯಾಗುತ್ತಿದೆ. ಚೀನಾದ ಸೇನೆಯನ್ನು ಪೀಪಲ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಎಂದು ಕರೆಯಲಾಗುತ್ತದೆ. ಆದರೆ ಆ ಪಿಎಲ್‌ಎಗೂ ಮ್ಯಾನ್ಮಾರ್‌ನಲ್ಲಿರುವ ಉಗ್ರ ಸಂಘಟನೆಗೆ ನೇರವಾಗಿ ಯಾವುದೇ ಸಂಬಂಧವಿಲ್ಲ. ಆದರೆ ಈ ಹಿಂದೆ ದೇಶದಲ್ಲಿರುವ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರಗಳು ಸರಬರಾಜು ಆಗುತ್ತಿದೆ ಎಂದು ಮ್ಯಾನ್ಮಾರ್‌ ನೇರವಾಗಿ ಹೇಳಿತ್ತು.

ರಷ್ಯಾದ ಸರ್ಕಾರಿ ಟಿವಿ ಚಾನೆಲ್ ಒಂದಕ್ಕೆ ಇತ್ತೀಚೆಗೆ ಮ್ಯಾನ್ಮಾರ್‌ನ ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್ ಸಂದರ್ಶನ ನೀಡಿದ್ದರು. ಈ ವೇಳೆ ದೇಶದೊಳಗಿನ ಬಂಡುಕೋರ ಗುಂಪುಗಳಿಗೆ ‘ಬಲಾಢ್ಯ’ ರಾಷ್ಟ್ರ ಸಹಕಾರ ನೀಡುತ್ತಿದೆ. ಉಗ್ರರು ಚೈನಾ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಉಗ್ರರನ್ನು ಮಟ್ಟ ಹಾಕಲು ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ತಿಳಿಸಿದ್ದರು.

Myanmar China

ಚೀನಾದ ಗಡಿಯ ಪಶ್ಚಿಮ ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳಾದ ಅರಾಕನ್ ಆರ್ಮಿ (ಎಎ) ಮತ್ತು ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್‌ಎಸ್‌ಎ) ಯನ್ನುಉಲ್ಲೇಖಿಸಿ ಮಿನ್ ಆಂಗ್ ಹೇಲಿಂಗ್, ಈ ಉಗ್ರ ಸಂಘಟನೆಯನ್ನು ‘ಬಲಾಢ್ಯ ರಾಷ್ಟ್ರʼವೊಂದು ಬೆಂಬಲಿಸುತ್ತದೆ ಎಂದಿದ್ದರು.

ಆಗ್ನೇಯ ಏಷ್ಯಾದ ಭಾಗದಲ್ಲಿ ಉಗ್ರರಿಗೆ ಚೀನಾ ಸಹಾಯ ಮಾಡುತ್ತದೆ ಎನ್ನುವ ಆರೋಪ ಹೊಸದಲ್ಲ. ವಿಶ್ವದ ನಂಬರ್‌ಒನ್‌ ಪಟ್ಟ ಏರಲು ಹವಣಿಸುತ್ತಿರುವ ಚೀನಾ ಪಾಕಿಸ್ತಾನ ಸೇನೆಗೆ ಸಹಕಾರ ನೀಡುವ ನೆಪದಲ್ಲಿ ಉಗ್ರರಿಗೂ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತದೆ ಎಂಬ ಆರೋಪವಿದೆ.

Share This Article
Leave a Comment

Leave a Reply

Your email address will not be published. Required fields are marked *