ನವದೆಹಲಿ: ಇಡೀ ವಿಶ್ವವವನ್ನು ಬೆಚ್ಚಿ ಬೀಳಿಸಿದ ಕೊರೊನಾ ಸೋಂಕು ಮಾನವರಿಗೆ ತಗುಲುವ ಮುನ್ನ ದಶಕಗಳಿಂದ ಬಾವಲಿಗಳ ದೇಹದಲ್ಲಿತ್ತು. ಆದರೆ ಅದನ್ನು ಕಂಡುಹಿಡಿಯಲಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್‍ಗೆ 40 ರಿಂದ 70 ವರ್ಷಗಳ ಮೊದಲು ಬಾವಲಿಗಳಲ್ಲಿ ಕಂಡುಬಂದಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಬಹುಶಃ ಈ ವೈರಸ್ ಈಗ ಮನುಷ್ಯರನ್ನು ತಲುಪಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ನೇಚರ್ ಮೈಕ್ರೋ ಬಯಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯೊಂದರಲ್ಲಿ ಕೆಲಸ ಮಾಡಿದ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಡ್ ರಾಬರ್ಟ್ಸ್‌ನ್ ಪ್ರಕಾರ, ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ಸಾರ್ಸ್-ಕೋವಿ 2 ವೈರಸ್ ಬಾವಲಿಗಳಲ್ಲಿ ಕಂಡುಬರುವ ವೈರಸ್‍ಗೆ ತಳಿಗೆ ಹತ್ತಿರದಲ್ಲಿದೆ. ಆದರೆ ಎರಡು ತಳಿಗಳಿಗೂ ದಶಕಗಳ ವ್ಯತ್ಯಾವಿದೆ. ವೈರಸ್ ಬಹಳ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ.
ಆದರೆ ಈ ವೈರಸ್ ಯಾವಾಗ ಮತ್ತು ಹೇಗೆ ಮನುಷ್ಯರಲ್ಲಿ ಬಂತು ಎಂಬುದು ಇನ್ನೂ ತಿಳಿದಿಲ್ಲ. ಈ ಸಾಮಾನ್ಯ ವೈರಸ್ ಬಾವಲಿಗಳಲ್ಲಿ ಕಂಡುಬರುತ್ತದೆ ಎಂದು ನಾವು ನಂಬಿದ್ದೇವೆ. ಆದ್ದರಿಂದ ನಮಗೆ ಹೆಚ್ಚು ತೀಕ್ಷ್ಣವಾದ ಅಧ್ಯಯನ ಅವಶ್ಯಕತೆ ಇದೆ. ನಾವು ಅದನ್ನು ಹೆಚ್ಚು ಮೇಲ್ವಿಚಾರಣೆ ಮಾಡಬೇಕು ಎಂದು ರಾಬರ್ಟ್ಸ್‌ನ್ ಹೇಳಿದ್ದಾರೆ. ಇದನ್ನೂ ಓದಿ: ಹಂದಿಗಳಿಗೆ ವೈರಸ್ ಚುಚ್ಚಿ ವೆಟ್ ಮಾರುಕಟ್ಟೆಗೆ ಮಾರಾಟ. ಚೀನಾ ಸಂಶೋಧನೆ ಬಗ್ಗೆ ಸ್ಫೋಟಕ ವರದಿ
ಭವಿಷ್ಯದಲ್ಲಿ ಮತ್ತಷ್ಟು ಸಾಂಕ್ರಾಮಿಕ ರೋಗಗಳನ್ನು ಹರಡದಿರಲು, ನಾವು ಮಾನವರಿಗೆ ಬಂದಿರುವ ಸೋಂಕಿನ ಜೊತೆ ಕಾಡು ಬಾವಲಿಗಳ ಮಾದರಿಯನ್ನು ಸಹ ಪರೀಕ್ಷೆ ಮಾಡಬೇಕಾಗುತ್ತದೆ. ಈ ವೈರಸ್‍ಗಳು ದಶಕಗಳವರೆಗೆ ಇದ್ದರೇ ಬಾವಲಿಗಳು ಕಾಲುಗಳ ಮೂಲಕ ಇತರ ಪ್ರಾಣಿಗಳಿಗೆ ಹರಡಿರಬೇಕು. ಈ ಮೂಲಕ ಮಾನವನಿಗೆ ಹರಡಿರಬಹುದು ಎಂದು ಪ್ರೊಫೆಸರ್ ಡೇವಿಡ್ ರಾಬರ್ಟ್ಸ್‌ನ್ ತಿಳಿಸಿದ್ದಾರೆ.