ನನ್ನ ವಿರುದ್ಧ ಇಡೀ ಗ್ಯಾಂಗ್ ಕೆಲಸ ಮಾಡ್ತಿದೆ: ಎ.ಆರ್.ರೆಹಮಾನ್

Public TV
1 Min Read
AR Rahman

-ಸ್ವಜನಪಕ್ಷಪಾತದ ಬಗ್ಗೆ ರೆಹಮಾನ್ ಮಾತು

ಮುಂಬೈ: ಮ್ಯೂಸಿಕ್ ಮಾಂತ್ರಿಕ ಎ.ಆರ್. ರಹಮಾನ್ ಮೊದಲ ಬಾರಿಗೆ ಬಾಲಿವುಡ್ ನಲ್ಲಿಯ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್ ಅವರನ್ನ ಸಹ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತವನ್ನು ಎದುರಿಸಿದ್ದಾರೆ. ಇಡೀ ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿತ್ತು. ಹಾಗಾಗಿ ನಾನು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ:  ಓ ನನ್ನ ಕಂದ, ಬಂಗಾರವೇ ಕ್ಷಮಿಸು ಬಿಡು: ಸುಶಾಂತ್‍ಗೆ ಅಕ್ಕನ ಪತ್ರ

AR Rahman 1

ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕೇಳುಗರೊಂದಿಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಸಂಗೀತ ನೀಡಿರುವ ಸಿನಿಮಾಗಳು ಚೆನ್ನಾಗಿಲ್ಲ ಎಂದು ಹೇಳಲಾರೆ. ನನ್ನ ವಿರುದ್ಧ ಷಡ್ಯಂತ್ರ ರಚಿಸುತ್ತಿದ್ದ ಗುಂಪು ತಪ್ಪು ಸಂದೇಶಗಳನ್ನು ರವಾನಿಸುತ್ತಿತ್ತು. ನನ್ನ ಬಗ್ಗೆ ಅಪಪ್ರಚಾರ ಮಾಡೋದರಲ್ಲಿ ಆ ಗುಂಪು ಕೆಲಸ ಮಾಡುತ್ತಿತ್ತು. ಒಮ್ಮೆ ಮುಖೇಶ್ ಛಾಬ್ರಾ ಹಾಡುಗಳಿಗಾಗಿ ನನ್ನ ಬಳಿ ಬಂದಿದ್ದರು. ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದೆ. ನನ್ನ ಜೊತೆ ಮಾತನಾಡುತ್ತಾ, ನಿಮ್ಮ ಬಳಿ ಹೋಗಬಾರದು ಅಂತ ಹಲವರು ಒತ್ತಡ ಹಾಕಿರುವ ವಿಷಯ ತಿಳಿಸಿದರು. ಇದನ್ನೂ ಓದಿ:

Sushant Singh Rajput 2

ಅಂದು ದೀಪಕ್ ಛಾಬ್ರಾ ಮಾತು ಕೇಳಿದಾಗ ಇದೇ ಕಾರಣಕ್ಕೆ ನಾನು ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ ಎಂಬ ವಿಷಯ ಮನವರಿಕೆ ಆಯ್ತು. ಒಂದು ಗುಂಪು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದ ಪರಿಣಾಮ ಕಡಿಮೆ ಬಜೆಟ್ ಚಿತ್ರ (ಡಾರ್ಕ್ ಮೂವಿ)ಗಳಿಗೆ ಸಂಗೀತ ನೀಡಿದ್ದೇನೆ. ಅವರು ತಮಗೆ ಗೊತ್ತಿಲ್ಲದೇ ಬೇರೆಯವರಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡ್ತೇನೆ: ಕಂಗನಾ

ar rahman 2

ಇತ್ತೀಚೆಗೆ ನಿಧನವಾಗಿರುವ ಸುಶಾಂತ್ ಸಿಂಗ್ ರಜಪೂತ್ ನಟನೆಯ ದಿಲ್ ಬೇಚೇರಾ ಸಿನಿಮಾದ ಹಾಡಿಗೆ ಸಂಗೀತ ಸಂಯೋಜನೆ ಮಾಡಲು ರೆಹಮಾನ್ ಒಪ್ಪಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *