– 8 ಜಿಲ್ಲೆಗಳಲ್ಲಿ ನೂರರ ಗಡಿ ದಾಟಿದ ಕೊರೊನಾ
– ಬೆಂಗಳೂರಲ್ಲಿ 2156 ಪ್ರಕರಣ ಪತ್ತೆ
ಬೆಂಗಳೂರು: ರಾಜ್ಯದಲ್ಲಿಂದು ಸಹ ಕೊರೊನಾ ಸ್ಫೋಟವಾಗಿದ್ದು, ಇವತ್ತು 4,120 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63,772ಕ್ಕೆ ಏರಿಕೆಯಾಗಿದ್ದು, 39,370 ಸಕ್ರಿಯ ಪ್ರಕರಣಗಳಿವೆ.
ಇಂದು 1,290 ಜನರು ಕೊರೊನಾದಿಂದ ಗುಣಮುಖರಾಗಿದ್ದು, ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.36.1 ರಷ್ಟಿದೆ. ಇಂದು ರಾಜ್ಯದಲ್ಲಿ 91 ಸಾವಾಗಿದ್ದು, ಮರಣ ಪ್ರಮಾಣ ಶೇ.2.8 ರಷ್ಟಿದೆ.
ಬೆಂಗಳೂರಿನಲ್ಲಿ ಇವತ್ತು ಮತ್ತೆ ಕೊರೊನಾ ಎರಡು ಸಾವಿರದ ಗಡಿ ದಾಟಿದ್ದು, 2,156 ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಇವತ್ತು 253 ಜನ ಗುಣಮುಖರಾಗಿದ್ದು, ನಗರದಲ್ಲಿ 24,316 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ 36 ಜನರನ್ನು ಕೊರೊನಾ ಬಲಿ ಪಡೆದಿದ್ದು, ಮರಣ ಪ್ರಮಾಣ ಶೇ.2.8 ಇದೆ. ಹಾಗೆ ಚೇತರಿಕೆ ಪ್ರಮಾಣ ಶೇ.36.1 ರಷ್ಟಿದೆ.
ಇಂದಿನ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಬಳ್ಳಾಪುರ 135, ಉಡುಪಿ 134, ಧಾರವಾಡ 126, ಮೈಸೂರು 110, ಶಿವಮೊಗ್ಗ 104, ಬೆಳಗಾವಿ 87, ಬಳ್ಳಾರಿ 73, ಬೆಂಗಳೂರು ಗ್ರಾಮಾಂತರ 70, ಕಲಬುರಗಿ 69, ಉತ್ತರ ಕನ್ನಡ 69, ದಾವಣಗೆರೆ 62, ಬಾಗಲಕೋಟೆ 60, ಹಾವೇರಿ 54, ಬೀದರ್ 45, ಹಾಸನ 43, ಚಿಕ್ಕಮಗಳೂರು 41, ರಾಯಚೂರು 32, ಗದಗ 30, ರಾಮನಗರ 29, ಕೋಲಾರ 25, ಚಾಮರಾಜನಗರ 25, ತುಮಕೂರು 19, ಕೊಪ್ಪಳ 19, ಚಿತ್ರದುರ್ಗ 17, ಕೊಡಗು 13, ಯಾದಗಿರಿ 10 ಹಾಗೂ ಮಂಡ್ಯ 07 ಪ್ರಕರಣಗಳು ವರದಿಯಾಗಿವೆ.