ಜೈಪುರ:: ದಿನದಿಂದ ದಿನಕ್ಕೆ ರಾಜಸ್ಥಾನ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆಯುತ್ತಿದ್ದು ಇಂದು ಮತ್ತೊಂದು ಹಂತಕ್ಕೆ ಹೋಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಸಂಚು ನಡೆಸಿದ್ದಾರೆ ಎಂಬ ಆಡಿಯೋ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸ್ವಪಕ್ಷದ ಸಿಎಂ ವಿರುದ್ಧ ಬಂಡಾಯದ ಹೂಡಿದ್ದ ಶಾಸಕ ಭನ್ವರ್ ಲಾಲ್ ಶರ್ಮಾ ಸೇರಿ ಕೇಂದ್ರ ಸಚಿವ ಗಜೇಂದ್ರ ಶೇಖಾವತ್, ಉದ್ಯಮಿ ಸಂಜಯ್ ಜೈನ್ ಸರ್ಕಾರ ಕೆಡವಲು ಸಂಚು ರೂಪಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಆರೋಪ ಮಾಡಿದ ಕೆಲ ಗಂಟೆಗಳಲ್ಲೇ ರಾಜಸ್ಥಾನ ಪೊಲೀಸರು ಕೇಂದ್ರ ಸಚಿವ ಶೇಖಾವತ್ ಮತ್ತು ಬಿಜೆಪಿ ನಾಯಕ ಸಂಜಯ್ ಜೈನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಸಂಜಯ್ ಜೈನ್‍ನನ್ನು ಬಂಧಿಸಿದ್ದಾರೆ. ಆದರೆ ಈ ಆರೋಪಗಳನ್ನು ಬಿಜೆಪಿ ನಾಯಕರು ಅಲ್ಲಗೆಳೆದಿದ್ದಾರೆ.
Last evening, two sensational and shocking audio tapes surfaced through the media. These audio tapes allegedly reveal the conversation of Union Cabinet Minister Shri Gajendra Singh Shekhawat, Congress MLA Shri Bhanwar Lal Sharma and BJP leader Mr. Sanjay Jain: Shri @rssurjewala
— Congress (@INCIndia) July 17, 2020
ಕಾಂಗ್ರೆಸ್ ಪಕ್ಷದ ಈಗಾಗಲೇ ಆರೋಪಿಸಿರುವ ಇಬ್ಬರು ಶಾಸಕರನ್ನು ಪಕ್ಷದಿಂದ ಬಹಿಷ್ಕಾರ ಮಾಡಿ, ಪ್ರಾಥಮಿಕ ಸದಸ್ಯತ್ವವನ್ನು ರದ್ದು ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಆರೋಪಗಳನ್ನು ತಿರಸ್ಕರಿಸಿರುವ ಸಚಿವ ಶೇಖಾವತ್, ಈ ವಿಚಾರದಲ್ಲಿ ಯಾವುದೇ ತನಿಖೆಗೂ ಸಿದ್ಧ. ಆಡಿಯೋದಲ್ಲಿ ಕೇಳಿ ಬಂದಿರುವ ಧ್ವನಿ ನನ್ನದಲ್ಲ. ವಿಚಾರಣೆಗೆ ಕರೆದರೆ ಹಾಜರಾಗುಲು ಸಿದ್ಧಿವಿರುವುದಾಗಿ ತಿಳಿಸಿದ್ದಾರೆ.
पैसों की सौदेबाजी व विधायकों की निष्ठा बदलवाकर राजस्थान की कांग्रेस सरकार गिराने की मंशा व साजिश साफ है।
यह लोकतंत्र के इतिहास का काला अध्याय है!
इसलिए हमारी मांग है ???????? pic.twitter.com/rOVBK9UdjH
— Randeep Singh Surjewala (@rssurjewala) July 17, 2020
ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಸಖತ್ ವೈರಲ್ ಆಗಿದೆ. ಆದರೆ ಮಾಧ್ಯಮಗಳ ಎದುರು ಕಾಂಗ್ರೆಸ್ ಪಕ್ಷ ನಾಯಕರು ಅಧಿಕೃತವಾಗಿ ಆಡಿಯೋವನ್ನು ಪ್ರಸ್ತುತ ಪಡಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ರಣದೀಪ್ ಸುರ್ಜೆವಾಲಾ ಈ ಕುರಿತು ಪ್ರತಿಕ್ರಿಯೆ ನೀಡಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಇಬ್ಬರು ನಾಯಕರು ಮಾತಕತೆ ನಡೆಸಿದ ಆಡಿಯೋ ವೈರಲ್ ಆಗಿದೆ. ಅದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಬಿಜೆಪಿ ನಾಯಕ ಸಂಜಯ್ ಜೈನ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕ ಭನ್ವರ್ ಲಾಲ್ ಶರ್ಮಾ ಪಕ್ಷದ ಶಾಸಕರನ್ನು ಖರೀದಿ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.