ಬೆಂಗ್ಳೂರಲ್ಲಿ 14 ದಿನ ಲಾಕ್‍ಡೌನ್ ಅಗತ್ಯ: ಬಿಬಿಎಂಪಿ ಮೇಯರ್

Public TV
1 Min Read
mayore

ಬೆಂಗಳೂರು: ಕೊರೊನಾ ಚೈನ್ ಲಿಂಕ್ ಕಟ್ ಆಗಬೇಕಾದರೆ ಲಾಕ್‍ಡೌನ್ ಆಗಬೇಕಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಯರ್ ಗೌತಮ್, ಈಗಾಗಲೇ ಕೊರೊನಾ ಚೈನ್ ಲಿಂಕ್ ಕಟ್ ಆಗುವ ಪ್ರಕ್ರಿಯೆ ಶುರುವಾಗಿದೆ. ಸಾಮಾನ್ಯವಾಗಿ ಕ್ವಾರಂಟೈನ್ ಅಂದರೆ 14 ದಿನ. ಆದರೆ ಇತ್ತೀಚೆಗೆ ಏಳು ದಿನಗಳಾಗಿದೆ. ಹೀಗಾಗಿ ಯಾರು ಎಷ್ಟು ದಿನ ಕ್ವಾರಂಟೈನ್ ಆಗಿ ಹೊರಗೆ ಬಂದು ಓಡಾಡುತ್ತಿದ್ದಾರೆ ಎಂದು ನಮಗೆ ಗೊತ್ತಿಲ್ಲ ಎಂದರು.

corona Virus 6 e1590856813393

ಸಂಪೂರ್ಣವಾಗಿ 14 ದಿನ ಎಲ್ಲರೂ ಮನೆಯಲ್ಲಿದ್ದರೆ ಒಂದು ಕಡೆ ಈ ಚೈನ್ ಲಿಂಕ್ ಕಟ್ ಆಗಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಹೀಗಾಗಿ ಕೊರೊನಾ ಚೈನ್ ಲಿಂಕ್ ಕಟ್ ಆಗಬೇಕಾದರೆ ಲಾಕ್‍ಡೌನ್ ಅಗತ್ಯವಾಗಿದೆ. ಆದರೆ ಸರ್ಕಾರ ಇದರ ಬಗ್ಗೆ ಇನ್ನೂ ಒಳ್ಳೆಯ ಚಿಂತನೆ ಮಾಡಬಹುದು ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.

ನನ್ನ ಪಿಎಗೆ ಕೊರೊನಾ ಪಾಸಿಟಿವ್ ಆಗಿತ್ತು. ಹೀಗಾಗಿ ನಾನು ಕ್ವಾರಂಟೈನ್ ಆಗಿ ಮನೆಯಿಂದ ಹೊರಗೆ ಬಂದಿದ್ದೇನೆ. 14 ದಿನ ಕಟ್ಟು-ನಿಟ್ಟಾಗಿ ಲಾಕ್‍ಡೌನ್ ಮಾಡಿ. ಆಗ ಕೊರೊನಾ ಚೈನ್ ಲಿಕ್ ಕಟ್ ಆಗುತ್ತದೆ ಎಂದು ಜನರು ಕೂಡ ಹೇಳುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಮುಂದುವರಿಸುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ ಎಂದರು.

vlcsnap 2020 07 17 11h28m02s217

ಸದ್ಯ ನಗರದಲ್ಲಿ ಸಾಕಷ್ಟು ಜನ ಓಡಾಡುತ್ತಿದ್ದಾರೆ. ಇದು ಕಡಿಮೆ ಆಗಬೇಕು ಅಂದರೆ ಲಾಕ್‍ಡೌನ್ ಮುಂದುವರಿಸಬೇಕು. ಆದರೆ ಪೂರ್ಣ ಬಂದ್ ಆಗಿ ಬಿಟ್ಟರೆ ಜನರು ಕೂಡ ಭಯ ಪಡುತ್ತಾರೆ. ಲಾಕ್‍ಡೌನ್ ಮಾಡಬೇಕಾದದರೆ ಏನೇನು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಚಿಂತನೆ ಮಾಡಬೇಕಿದೆ ಎಂದು ಗೌತಮ್ ಕುಮಾರ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *