ಗದಗ: ಶನಿವಾರ ಜಿಲ್ಲೆಯಲ್ಲಿ 40 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ಹೆಲ್ತ್ ಬುಲೆಟಿನ್‍ನಲ್ಲಿ ವರದಿ ಬಂದಿದೆ.
ಈ 40 ಸೋಂಕಿತರ ಪೈಕಿ 39 ಜನ ಸೋಂಕಿತರು ಮಾತ್ರ ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಓರ್ವ ಮಹಿಳೆ ಆರೋಗ್ಯ ಇಲಾಖೆಗೆ ತಪ್ಪು ವಿಳಾಸ ನೀಡಿ ಯಾಮಾರಿಸಿದ್ದಾಳೆ. ಶನಿವಾರ ಸೋಂಕು ದೃಢಪಟ್ಟ ನಂತರ ಮಹಿಳೆ ಕೊಟ್ಟ ವಿಳಾಸ ಹಿಡಿದು ಹೊರಟ ಆರೋಗ್ಯ ಇಲಾಖೆಗೆ ಶಾಕ್ ಆಗಿದೆ.
ಯಾಕೆಂದರೆ ಮಹಿಳೆ ಕೊಟ್ಟ ವಿಳಾಸದಲ್ಲಿ ಆ ಮಹಿಳೆ ಇಲ್ಲ. ತಪ್ಪು ಫೋನ್ ನಂಬರ್ ಜೊತೆ ತಪ್ಪು ವಿಳಾಸ ಕೊಟ್ಟು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾಳೆ. ಕೊರೊನಾ ಪಾಸಿಟಿವ್ ದೃಢವಾಗಿ 24ಗಂಟೆ ಕಳೆದರೂ ಸೋಂಕಿತ ಮಹಿಳೆ ಇನ್ನುವರೆಗೂ ಪತ್ತೆಯಾಗಿಲ್ಲ. ಇದರಿಂದ ಈಗ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಸೋಂಕಿತ ಮಹಿಳೆಯನ್ನು ಹುಡುಕಲು ಆರೋಗ್ಯ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿವೆ.