ಗದಗ: ಕೊರೊನಾ ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಯಾವುದೇ ಸಭೆ- ಸಮಾರಂಭಗಳನ್ನು ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಜನ ಬರ್ತ್ ಡೇ ಪಾರ್ಟಿಯಂತಹ ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತನೇ ಗುಂಡು-ತುಂಡಿನ ಭರ್ಜರಿ ಪಾರ್ಟಿ ಮಾಡಿ ಸುದ್ದಿಯಾಗಿದ್ದಾರೆ.
ಹೌದು. ಗದಗದ ಶ್ರೀನಿವಾಸ ಭವನದಲ್ಲಿ ಬಿಜೆಪಿ ಮುಖಂಡ ಶಿವನಗೌಡ ಎಸ್.ಎಚ್ ಅವರು ಹುಟ್ಟುಹಬ್ಬದ ಪ್ರಯುಕ್ತ ಗುಂಡು ತುಂಡು ಪಾರ್ಟಿ ಆಯೋಜಿಸಿದ್ದಾರೆ. ಕೊವಿಡ್ ನಡುವೆಯೇ ಅದ್ಧೂರಿ ಬರ್ತ್ ಡೇ ಮಾಡಿಕೊಳ್ಳುವ ಮೂಲಕ ಸಚಿವ ಆಪ್ತ 144 ಕಲಂ ಉಲ್ಲಂಘನೆ ಮಾಡಿದ್ದಾರೆ.
ಇತ್ತ ಪಾರ್ಟಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮರೆತು ನೂರಾರು ಮಂದಿ ಭಾಗಿಯಾಗಿದ್ದಾರೆ. ಎಣ್ಣೆಯ ಗಮ್ಮತ್ತಿನಲ್ಲಿ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ನಿಷೇಧಾಜ್ಞೆ ನಡುವೆಯೇ ಸಚಿವ ಶ್ರೀರಾಮುಲು ಆಪ್ತ ಬೇಜವಾಬ್ದಾರಿ ತೋರಿದ್ದು, ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.