ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುವರರ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಇಂದು ರಾಜ್ಯದಲ್ಲಿ 21 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 293ಕ್ಕೇರಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ 40 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯ ಅನ್ವಯ, ಬೆಂಗಳೂರಿನಲ್ಲಿ 5, ಚಿಕ್ಕಬಳ್ಳಾಪುರ ಮತ್ತು ಕಲಬುರಗಿ ತಲಾ 3, ವಿಜಯಪುರ, ಶಿವಮೊಗ್ಗದಲ್ಲಿ ತಲಾ 2, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ರಾಯಚೂರು, ಬೀದರ್, ದಾವಣಗೆರೆ, ಹಾಸನದಲ್ಲಿ ತಲಾ 1 ಸಾವಿನ ಪ್ರಕರಣ ದಾಖಲಾಗಿದೆ.
ರಾಜ್ಯದ ಕೋವಿಡ್-19 ಆಸ್ಪತ್ರೆಗಳಲ್ಲಿ 201 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ಮಹಾನಗರವೊಂದರಲ್ಲೇ 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವನ್ನಪ್ಪಿದವರ ವಿವರ:
1) ರೋಗಿ-9879: ಬಳ್ಳಾರಿಯ 50 ವರ್ಷದ ಮಹಿಳೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಡಯಾಲಿಸ್‍ಗಾಗಿ ಜೂನ್ 24 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 2 ರಂದು ಸಾವನ್ನಪ್ಪಿದ್ದಾರೆ.
2) ರೋಗಿ-9915: ಚಿಕ್ಕಬಳ್ಳಾಪುರದ 58 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆಯಿಂದ ಜೂನ್ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 29 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
3) ರೋಗಿ-10975: ಬೆಂಗಳೂರಿನ 73 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆಯಿಂದ ಜೂನ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 3ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
4) ರೋಗಿ-12139: ವಿಜಯಪುರದ 56 ಪುರುಷ. ಉಸಿರಾಟ ಸಮಸ್ಯೆ ಮತ್ತು ಎದೆನೋವಿನಿಂದ ಜೂನ್ 27ರಂದು ನಿವಾಸದಲ್ಲೇ ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು.
5) ರೋಗಿ-13258: ಚಿಕ್ಕಬಳ್ಳಾಪುರದ 55 ವರ್ಷದ ಪುರುಷ. ರೋಗ ಲಕ್ಷಣವಿಲ್ಲದೇ ಕ್ಯಾನ್ಸರ್ ಸಮಸ್ಯೆಯಿಂದ ಜೂನ್ 28 ರಂದು ಸಾವನ್ನಪ್ಪಿದ್ದರು.
6) ರೋಗಿ-14025: ಬೆಂಗಳೂರಿನ 63 ವರ್ಷದ ವೃದ್ಧ. ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರು ಜೂನ್ 03 ರಂದು ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು.
7) ರೋಗಿ-14399: ಶಿವಮೊಗ್ಗದ 52 ವರ್ಷದ ಪುರುಷ. ಬೆಂಗಳೂರಿನ ಪ್ರಯಾಣದ ಹಿನ್ನೆಲೆ. ಕೆಮ್ಮು, ಶೀತದಿಂದ ಬಳಲುತ್ತಿದ್ದರು. ಮಧುಮೇಹ ಸಮಸ್ಯೆಂ ಹೊಂದಿದ್ದ ಇವರು ಜೂನ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 2 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
8) ರೋಗಿ-14453: ಬೆಂಗಳೂರಿನ 54 ವರ್ಷದ ಪುರುಷ. ವಿಷಮ ಶೀತ ಜ್ವರ, ಉಸಿರಾಟದ ಮಸ್ಯೆಯಿಂದ ಬಳಲುತ್ತಿದ್ದವರನ್ನು ಜೂನ್ 29 ರಂದು ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ಪಲಿಸದೆ ಜುಲೈ 3 ರಂದು ಸಾವನ್ನಪ್ಪಿದ್ದರು.
9) ರೋಗಿ-15170: ಬೆಂಗಳೂರಿನ 87 ವರ್ಷದ ವೃದ್ಧ. ವಿಷಮ ಶೀತ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳುತ್ತಿದ್ದವರನ್ನು ಜೂನ್ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಜುಲೈ 2 ರಂದು ಸಾವನ್ನಪ್ಪಿದ್ದರು.
10) ರೋಗಿ-15395: ಚಿಕ್ಕಬಳ್ಳಾಪುರದ 60 ವರ್ಷದ ವೃದ್ಧ. ಜ್ವರ ಮತ್ತು ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಜೂನ್ 30 ರಂದು ಸಾವನ್ನಪ್ಪಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು.
11) ರೋಗಿ-15463: ಕಲಬುರಗಿಯ 58 ವರ್ಷದ ಪುರುಷ. ವಿಷಮ ಶೀತ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಜೂನ್ 30 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
12) ರೋಗಿ-15571: ವಿಜಯಪುರದ 65 ವರ್ಷದ ಮಹಿಳೆ. ತೀವ್ರ ಉಸಿರಾಟದ ಸಮಸ್ಯೆ. ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದವರನ್ನು ಜೂನ್ 30 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 2 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ರು.
13) ರೋಗಿ-15653: ಹಾಸನದ 75 ವರ್ಷದ ವೃದ್ಧೆ. ವಿಷಮ ಶೀತ ಜ್ವರ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದವನ್ನು ಜೂನ್ 28 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 3 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
14) ರೋಗಿ-15733: ಬೆಂಗಳೂರಿನ 73 ವರ್ಷದ ವೃದ್ಧೆ. ಜ್ವರ ಮತ್ತು ಉಸಿರಾಟದ ಸಮಸ್ಯೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಜುಲೈ 2 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 3 ರಂದು ಸಾವನ್ನಪ್ಪಿದ್ದಾರೆ.
15) ರೋಗಿ-16675: ದಾವಣಗೆರೆಯ 80 ವರ್ಷದ ಪುರುಷ. ತೀವ್ರ ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜೂನ್ 24 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 2 ರಂದು ಸಾವನ್ನಪ್ಪಿದ್ದಾರೆ.
16) ರೋಗಿ-16785: ಕಲಬುರಗಿಯ 25 ವರ್ಷದ ಯುವತಿ. ವಿಷಮ ಶೀತ ಜ್ವರದಿಂದ ಬಳಲುತ್ತಿದ್ದ ಯುವತಿ ಜೂನ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 3 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
17) ರೋಗಿ-16820: ಬೀದರ್ 62 ವರ್ಷದ ವೃದ್ಧ. ಹೈದರಾಬಾದ್ ಪ್ರಯಾಣದ ಹಿನ್ನೆಲೆ. ಜ್ವರದಿಂದ ಜುಲೈ 2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 3 ರಂದು ಸಾವನ್ನಪ್ಪಿದ್ದಾರೆ.
18) ರೊಗಿ-18073: ಶಿವಮೊಗ್ಗದ 70 ವರ್ಷದ ವೃದ್ದೆ. ತೀವ್ರ ಉಸಿರಾಟದ ಸಮಸ್ಯೆ, ಜ್ವರ ದಿಂದ ಜುಲೈ 1 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 2 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
19) ರೋಗಿ-18220: ಬೆಂಗಳೂರು ಗ್ರಾಮಾಂತರದ 75 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆಯಿಂದ ಜೂನ್ 30 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 1 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
20) ರೋಗಿ-18391: ಕಲಬುರಗಿಯ 46 ವರ್ಷದ ಮಹಿಳೆ. ವಿಷಮ ಶೀತ ಜ್ವರ, ಉಸಿರಾಟದ ಸಮಸ್ಯೆಯಿಂದ ಜೂನ್ 30 ರಂದು ಆಸ್ಪತ್ರೆಗೆ ದಾಖಲಾಗಿದ್ರು. ಜುಲೈ 1 ರಂದು ಸಾವನ್ನಪ್ಪಿದ್ದಾರೆ.
21) ರೋಗಿ-18416: ರಾಯಚೂರಿನ 48 ವರ್ಷದ ಪುರುಷ. ಯಾದಗಿರಿ ಪ್ರಯಾಣದ ಹಿನ್ನೆಲೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಜೂನ್ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.