Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಗಳು ನಾಪತ್ತೆಯಾದ ತಕ್ಷಣ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್- 14ರ ಪುತ್ರಿಯ ರಹಸ್ಯ ಬಯಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಗಳು ನಾಪತ್ತೆಯಾದ ತಕ್ಷಣ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್- 14ರ ಪುತ್ರಿಯ ರಹಸ್ಯ ಬಯಲು

Bengaluru City

ಮಗಳು ನಾಪತ್ತೆಯಾದ ತಕ್ಷಣ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್- 14ರ ಪುತ್ರಿಯ ರಹಸ್ಯ ಬಯಲು

Public TV
Last updated: June 26, 2020 10:32 am
Public TV
Share
2 Min Read
couple 5
SHARE

– ಇನ್‍ಸ್ಟಾಗ್ರಾಂ ಗೆಳೆಯನಿಗಾಗಿ 14ರ ಬಾಲೆ ಎಸ್ಕೇಪ್
– ಬೆಂಗಳೂರಿನ ಏರ್‌ಪೋರ್ಟಿನಲ್ಲೇ ತಂದೆಗೆ ಸಿಕ್ಕಿಬಿದ್ಳು

ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ಹೈದರಾಬಾದ್‍ಗೆ ಪರಾರಿಯಾಗುತ್ತಿದ್ದ 14 ವರ್ಷದ ಹುಡುಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಯ ತಂದೆಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ತಂದೆ ಸೋಶಿಯಲ್ ಮೀಡಿಯಾದಲ್ಲಿ ಮಗಳ ಖಾತೆಯನ್ನು ಹ್ಯಾಕ್ ಮಾಡಿದಾಗ ಹೈದರಾಬಾದ್‍ಗೆ ಪರಾರಿಯಾಗುವ ಪ್ಲಾನ್ ಬಹಿರಂಗವಾಗಿದೆ.

ತಂದೆಯ ದೂರಿನ ಮೇರೆಗೆ ದಕ್ಷಿಣ ಸಿಇಎನ್ (ಸೈಬರ್ ಕ್ರೈಂ ಪೊಲೀಸ್‍ ಠಾಣೆ) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಹುಡುಗಿಯ ಇನ್‍ಸ್ಟಾಗ್ರಾಂ ಮೂಲಕ ಪರಿಯಚವಾಗಿದ್ದ ಹುಡುಗನಿಗಾಗಿ ಹುಡುಕುತ್ತಿದ್ದಾರೆ.

instagram

ಏನಿದು ಪ್ರಕರಣ?
ಹುಡುಗಿ ಉತ್ತರಹಳ್ಳಿಯ ಎಜಿಎಸ್ ಲೇಔಟ್ ನಿವಾಸಿಯಾಗಿದ್ದು, ಬೆಂಗಳೂರಿನ ಹೆಸರಾಂತ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಹುಡುಗಿಯ ತನ್ನ ಮೊಬೈಲ್ ಫೋನ್‍ನಲ್ಲಿ ಇನ್‍ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಸದಾ ಸಕ್ರಿಯಳಾಗಿದ್ದಳು. ನಂತರ ಇನ್‍ಸ್ಟಾಗ್ರಾಂ ಮೂಲಕ ವಿಶಾಲ್ ಎಂಬಾತನ ಪರಿಚಯವಾಗಿದೆ. ಆತನೊಂದಿಗೆ ಪ್ರತಿದಿನ ಚಾಟ್ ಮಾಡುತ್ತಿದ್ದಳು. ಕೆಲವೇ ದಿನಗಳಲ್ಲಿ ಇಬ್ಬರು ಪ್ರೀತಿಸುತ್ತಿದ್ದು, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ವಿಶಾಲ್ ತಾನು ಹೈದರಾಬಾದ್ ಮೂಲದವನು, ನಾನು ನಿನ್ನ ಜೊತೆ ಇರಲು ಇಷ್ಟಪಡುತ್ತೇನೆ ಎಂದು ಹುಡುಗಿಗೆ ನಂಬಿಸಿದ್ದಾನೆ.

Can lust and love coexist in relationship

ಹುಡುಗಿ ಕೂಡ ಗೆಳೆಯನೊಂದಿಗೆ ವಾಸಿಸುಲು ತನ್ನ ಕುಟುಂಬವನ್ನು ಬಿಡಲು ನಿರ್ಧರಿಸಿದ್ದಳು. ಅದರಂತೆಯೇ ಜೂನ್ 8 ರಂದು ಬೆಳಗ್ಗೆ ಸುಮಾರು 10.30ಕ್ಕೆ ಸಂಗೀತ ತರಗತಿಗೆಂದು ಮನೆಯಿಂದ ಹೋಗಿದ್ದಾಳೆ. ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಳೆ. ಇತ್ತ ತುಂಬಾ ಸಮಯವಾದರೂ ಮನೆಗೆ ಮಗಳು ಬರಲಿಲ್ಲ ಎಂದು ಪೋಷಕರು ಆತಂಕಗೊಂಡಿದ್ದರು.

ಕೆಲವು ದಿನಗಳಿಂದ ಮಗಳ ನಡವಳಿಕೆಯ ಬದಲಾವಣೆಯ ಬಗ್ಗೆ ತಂದೆ ಗಮನಿಸಿದ್ದರು. ಹೀಗಾಗಿ ಮಗಳು ನಾಪತ್ತೆಯಾದ ತಕ್ಷಣ ಆಕೆಯ ಇನ್‍ಸ್ಟಾಗ್ರಾಂ ಖಾತೆಯನ್ನು ಡಿಕೋಡ್ ಮಾಡಿದ್ದಾರೆ. ಈ ವೇಳೆ ಮಗಳು ವಿಶಾಲ್ ಜೊತೆ ಚಾಟ್ ಮಾಡುತ್ತಿರುವುದು ಗೊತ್ತಾಗಿದೆ. ಅಲ್ಲದೆ ಆತನೊಂದಿಗೆ ತನ್ನ ಖಾಸಗಿ ಫೋಟೋಗಳನ್ನು ಸಹ ಹಂಚಿಕೊಂಡಿದ್ದಳು. ಕೊನೆಯ ಚಾಟ್‍ನಲ್ಲಿ ವಿಶಾಲ್ ಹೈದರಾಬಾದ್‍ಗೆ ಬರುವಂತೆ ತಿಳಿಸಿರುವುದು ಮತ್ತು ಆಕೆಗೆ ಟಿಕೆಟ್ ಕೂಡ ಕಾಯ್ದಿರಿಸಿರುವ ಬಗ್ಗೆ ತಂದೆ ತಿಳಿದುಕೊಂಡಿದ್ದಾರೆ.

mobile secret 1

ಕೂಡಲೇ ತಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ಅಲ್ಲಿ ಮಗಳನ್ನು ನೋಡಿದ್ದಾರೆ. ತಕ್ಷಣ ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಬುದ್ಧಿವಾದ ಹೇಳಿದ್ದಾರೆ. ನಂತರ ಪೋಷಕರು ಜೂನ್ 17 ರಂದು ದಕ್ಷಿಣ ಸಿಇಎನ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.

ನಕಲಿ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್ ಕಾರ್ಡ್
ವಿಶಾಲ್ ಆಕೆಯೊಂದಿಗೆ ತುಂಬಾ ದಿನಗಳಿಂದ ಸಂಪರ್ಕದಲ್ಲಿದ್ದನು. ಅಲ್ಲದೇ ಆಕೆಗೆ 18 ವರ್ಷ ವಯಸ್ಸಾಗಿದೆ ಎಂದು ತೋರಿಸಲು ವಿಶಾಲ್ ಆಕೆಯ ಹೆಸರಿನಲ್ಲಿ ನಕಲಿ ಎಸ್‍ಎಸ್‍ಎಲ್‍ಸಿ ಮಾರ್ಕ್ಸ್ ಕಾರ್ಡ್ ಕೂಡ ತಯಾರಿಸಿದ್ದನು. 15 ಫೋಟೋಗಳು, ಆಧಾರ್ ಕಾರ್ಡ್ ಮತ್ತು 10,000 ರೂ. ತರುವಂತೆ ಹುಡುಗಿಗೆ ತಿಳಿಸಿದ್ದನು. ಆಕೆಯೂ ಕೂಡ ಆತನ ಹೇಳಿದಂತೆ ಎಲ್ಲವನ್ನು ತೆಗೆದುಕೊಂಡು ಹೋಗುತ್ತಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

kia

ಆತನ ವಯಸ್ಸು ಅಥವಾ ಗುರುತಿನ ಬಗ್ಗೆ ಯಾವುದೇ ವಿವರ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ 468 (ಮೋಸ), ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತರಗತಿಗಳು ಆನ್‍ಲೈನ್‍ನಲ್ಲಿ ನಡೆಯುತ್ತಿದೆ. ಹೀಗಾಗಿ ಪೋಷಕರು ಹೆಚ್ಚಿನ ಜವಾಬ್ದಾರಿಯಾಗಿ ತಮ್ಮ ಮಕ್ಕಳನ್ನು ಗಮನಿಸುತ್ತಿರಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

TAGGED:airportbengaluruHyderabadinstagramlovepolicePublic TVಇನ್‍ಸ್ಟಾಗ್ರಾಂಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಪಬ್ಲಿಕ್ ಟಿವಿಪೊಲೀಸ್ಬೆಂಗಳೂರುಲವ್ಹೈದರಾಬಾದ್
Share This Article
Facebook Whatsapp Whatsapp Telegram

Cinema news

yash
40ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿ ʻಮಾಸ್ಟರ್‌ಪೀಸ್‌ʼ ರಾಕಿಭಾಯ್‌
Cinema Latest Main Post Sandalwood
Thalapathy Vijay Jana Nayagan
ವಿಜಯ್‌ ಫ್ಯಾನ್ಸ್‌ಗೆ ಶಾಕ್‌; ಜ.9 ಕ್ಕೆ ‘ಜನನಾಯಗನ್‌’ ರಿಲೀಸ್‌ ಆಗಲ್ಲ
Cinema Latest Main Post South cinema
Supreme Court and Ramya
ಪುರುಷರ ಮನಸ್ಸನ್ನು ಅರ್ಥ ಮಾಡ್ಕೊಳ್ಳಕ್ಕೆ ಆಗಲ್ಲ, ಹಾಗಾದ್ರೆ ಎಲ್ಲರನ್ನೂ ಜೈಲಿಗೆ ಹಾಕ್ಬೇಕಾ? – ರಮ್ಯಾ ವಿವಾದಾತ್ಮಕ ಪೋಸ್ಟ್
Latest Sandalwood Top Stories
yash 4
ನಿಮ್ಮನ್ನ ನೋಡೋಕೆ ನಾನೂ ಕಾಯ್ತಿದ್ದೀನಿ ಎಂದ ಯಶ್
Cinema Latest Sandalwood Top Stories

You Might Also Like

Kogilu Layout
Bengaluru City

PUBLiC TV Exclusive | ಕೋಗಿಲು ಲೇಔಟ್ ನಿರಾಶ್ರಿತರ ಲಿಸ್ಟ್ ಔಟ್; 76 ಕುಟುಂಬಗಳಿರೋದು 6 ತಿಂಗಳಿಂದಷ್ಟೇ

Public TV
By Public TV
25 minutes ago
Tiger Accused
Chamarajanagar

ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಕೇಸ್‌ – ʻಶಿಕಾರಿʼ ರಾಜ ಗೋವಿಂದ ಅರೆಸ್ಟ್‌

Public TV
By Public TV
49 minutes ago
Bengaluru Traffic
Bengaluru City

ಮಿತಿಮೀರಿದ ಟ್ರಾಫಿಕ್ ಸಮಸ್ಯೆಗೆ ಜನ ಹೈರಾಣು – ಅಡ್ಜಸ್ಟ್ ಮಾಡಿಕೊಳ್ಳಿ ಎಂದ ಸಚಿವರು!

Public TV
By Public TV
1 hour ago
Raichur 2
Districts

ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಿದ್ದ ನುಗ್ಗೆ ಪೌಡರ್ – ಉತ್ತಮ ಫಲಿತಾಂಶ ಕಂಡ ಯೋಜನೆಗೆ ಬಜೆಟ್ ಕೊರತೆ

Public TV
By Public TV
1 hour ago
Madhav Gadgil
Latest

ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ನಿಧನ

Public TV
By Public TV
1 hour ago
Donald Trump
Latest

ಅಮೆರಿಕದ ಉತ್ಪನ್ನಗಳನ್ನು ಮಾತ್ರ ವೆನೆಜುವೆಲಾ ಖರೀದಿಸಬೇಕು: ಟ್ರಂಪ್‌ ಕಟ್ಟಪ್ಪಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?