ರಕ್ಷಣೆಯ ಮೊದಲ ಹೆಜ್ಜೆ- ಸೋನಾಕ್ಷಿ ಸಿನ್ಹಾ ಟ್ವಿಟ್ಟರ್‌ನಿಂದ ಔಟ್

Public TV
1 Min Read
sonakshi sinha online

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಇಸ್‍ಸ್ಟಾಗ್ರಾಮ್‍ನಿಂದ ಟ್ವಿಟ್ಟರ್‌ವರೆಗೆ ಪ್ರತಿ ಪ್ಲಾಟ್ಫಾರ್ಮ್ ನಲ್ಲೂ ತಮ್ಮ ಅಭಿಪ್ರಾಯಗಳೊಂದಿಗೆ ಫೋಟೋ, ವಿಡಿಯೋ ಹಾಗೂ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈಗ ಸೋನಾಕ್ಷಿ ಟ್ವಿಟ್ಟರ್‌ನಿಂದ ದೂರವಾಗಿದ್ದಾರೆ. ನಟಿ ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

33 ವರ್ಷದ ನಟಿ ಸೋನಾಕ್ಷಿ ಸಿನ್ಹಾ ಶನಿವಾರ ಸಂಜೆ ಟ್ವಿಟ್ಟರ್ ನಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು. ಜೊತೆಗೆ “ನಿಮ್ಮ ವಿವೇಕವನ್ನು ಕಾಪಾಡುವ ಮೊದಲ ಹೆಜ್ಜೆ ನಕಾರಾತ್ಮಕತೆಯಿಂದ ದೂರವಿರುವುದು. ಈ ದಿನಗಳಲ್ಲಿ ಅದಕ್ಕಿಂತ ಹೆಚ್ಚಿನದ್ದೇನೂ ಇಲ್ಲ. ಟ್ವಿಟರ್ ಚಲೋ, ನಾನು ಆಫ್ ಆಗಿದ್ದೇನೆ. ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತಿದ್ದೇನೆ. ಹುಡುಗರೇ, ಪೀಸ್ ಔಟ್” ಎಂದು ಬರೆದಿದ್ದರು. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ತಮ್ಮ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ. ಜೊತೆಗೆ ಅದರ ಸ್ಕ್ರೀನ್‍ಶಾಟ್ ತೆಗೆದು “ಬೆಂಕಿಯಲ್ಲಿ, ನಾವು ನಮ್ಮ ವಿನೋದದಲ್ಲಿ. ಬಾಯ್ ಬಾಯ್ ಟ್ವಿಟ್ಟರ್” ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/CBp5HA5AcpP/?utm_source=ig_embed

ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ನೆಟ್ಟಿಗರು ಅನೇಕ ಸ್ಟಾರ್ ನಟ, ನಟಿಯರು ಹಾಗೂ ನಿರ್ದೇಶಕರನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗೆ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ನಟ್ಟಿಗರು ಹೆಚ್ಚಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇದಕ್ಕೂ ಮುನ್ನ ಅಂದ್ರೆ ಕಳೆದ ವರ್ಷ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ “ಕೌನ್ ಬನೇಗಾ ಕರೋಡಪತಿ”ಯಲ್ಲಿ ಕೇಳಲಾಗಿದ್ದ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ವಿಫಲವಾದ ನಂತರವೂ ನೆಟ್ಟಿಗರು ಸೋನಾಕ್ಷಿ ಅವರನ್ನು ಟ್ರೋಲ್ ಮಾಡಿದ್ದರು. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೋನಾಕ್ಷಿ ಸಿನ್ಹಾ, “ಆ ಘಟನೆ ನಡೆದು ಸುಮಾರು ಐದರಿಂದ ಆರು ತಿಂಗಳಾಗಿದೆ. ಆದರೂ ನೆಟ್ಟಿಗರು ನನ್ನನ್ನು ಟ್ರೋಲ್ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದಿದ್ದರು.

https://www.instagram.com/p/B7DUjteA0_1/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *