ಪ್ರಿಯಕರನನ್ನು ವರಿಸಿದ ‘ಅರಗಿಣಿ’ ಖ್ಯಾತಿಯ ನಟಿ

Public TV
2 Min Read
NAVYA RAO FINAL

ಬೆಂಗಳೂರು: ಕೊರೊನಾ, ಲಾಕ್‍ಡೌನ್ ನಡುವೆಯೂ ಅನೇಕರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಕಿರುತೆರೆ ನಟಿ ನವ್ಯಾ ರಾವ್ ತಮ್ಮ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ನವ್ಯಾ ರಾವ್ ಪುನರ್ವಿವಾಹ, ಅರಗಿಣಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಇದೀಗ ತಮ್ಮ ಪ್ರಿಯಕರ ವರುಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮವಾರ ಸರಳವಾಗಿ ಕುಟುಂಬಸ್ಥರ ಮುಂದೆ ಮದುವೆಯಾಗಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಾಲಿಗ್ರಾಮ ಪಾರ್ಟಿ ಹಾಲ್‍ನಲ್ಲಿ ನವ್ಯಾ ಮತ್ತು ವರುಣ್ ಮದುವೆ ನಡೆದಿದೆ.

vlcsnap 2020 06 16 09h30m24s40

2020 ಮಾರ್ಚ್ 18ರಂದು ಬೆಂಗಳೂರಿನ ನಂದನಾ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ಸ್ನೇಹಿತರು, ಮನೆಯವರು, ಸಂಬಂಧಿಕರ ಮುಂದೆ ನವ್ಯಾ ಮತ್ತು ವರುಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗ್ರ್ಯಾಂಡ್ ಆಗಿ ಮದುವೆಯಾಗಬೇಕು ಎಂದು ಪ್ಲಾನ್ ಕೂಡ ಮಾಡಿಕೊಂಡಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈ ಜೋಡಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇವರ ಮದುವೆಗೆ ಕುಟುಂಬಸ್ಥರು, ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದು, ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ.

Capture 4

ನವ್ಯಾ ಅವರ ಹಳದಿ ಕಾರ್ಯಕ್ರಮ ಕೂಡ ತುಂಬ ಸಿಂಪಲ್ ಆಗಿ ಭಾನುವಾರ ಸ್ನೇಹಿತರು, ಆತ್ಮೀಯರ ಮಧ್ಯೆ ನಡೆದಿತ್ತು. ಇವರ ಹಳದಿ ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ನವ್ಯಾ ಮತ್ತು ಅವರ ಸ್ನೇಹಿತರು ಹಂಚಿಕೊಂಡಿದ್ದರು. ವಿಶೇಷ ಅಂದರೆ ನವ್ಯಾ ಮತ್ತು ವರುಣ್ ಇವರಿಬ್ಬರ ಪರಿಚಯ ಆಗಿ ಕೇವಲ 8 ತಿಂಗಳು ಕಳೆದಿತ್ತು. ಅಷ್ಟು ಬೇಗನೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ.

navya rao 788x600 1

ನವ್ಯಾ ಸ್ನೇಹಿತರೊಬ್ಬರ ಮದುವೆಯಲ್ಲಿ ವರುಣ್‍ನನ್ನು ಭೇಟಿ ಮಾಡಿದ್ದರು. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಯಾಗಿ ವರುಣ್, ನವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಆಗ ನವ್ಯಾ ಕೂಡ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ. ಎರಡು ಮನೆಯವರು ಕೂಡ ಖುಷಿಯಿಂದ ಒಪ್ಪಿಕೊಂಡು ಮದುವೆ ಮಾಡಿಸಿದ್ದಾರೆ.

1 3

ನಟಿ ನವ್ಯಾ ರಾವ್ 2013ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಗಿಣಿ’ ಸೀರಿಯಲ್‍ನಲ್ಲಿ ಅಭಿನಯಿಸಿದ್ದರು. ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ನಟಿ ಮೇಘನಾ ಮತ್ತು ಹರೀಶ್ ನಟಿಸಿದ್ದರು. ನೆಗೆಟಿವ್ ಪಾತ್ರದಲ್ಲಿ ಹೀರೋ ಸಿದ್ದಾರ್ಥ್ ಗರ್ಲ್ ಫ್ರೆಂಡ್ ಆಗಿ ನವ್ಯಾ ರಾವ್, ಪೂಜಾ ಸಿಂಧ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿದ್ದಾರ್ಥ್ ಮತ್ತು ಖುಷಿಯ ಮಧ್ಯೆ ವಿಲನ್ ಆಗಿ ಪೂಜಾ ಸಿಂಧ್ಯಾ ತೆರೆ ಮೇಲೆ ಮಿಂಚಿದ್ದರು.

https://www.instagram.com/p/CBYSyGwlLWN/?igshid=10gqhns9cbpdz

ನಟಿ ನವ್ಯಾ ಮೊದಲಿಗೆ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಅವರಿಗೆ ‘ಅರಗಿಣಿ’ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಳ್ಳಲು ಅವಕಾಶ ಬಂದಿತ್ತು. ಈ ಮೂಲಕ ನವ್ಯಾ ಕಿರುತೆರೆಗೆ ಕಾಟ್ಟಿದ್ದರು. ನವ್ಯಾ ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್‍ನಲ್ಲೂ ಅಭಿನಯಿಸಿದ್ದಾರೆ. ಸದ್ಯಕ್ಕೆ ನವ್ಯಾ ‘ರಾಮಸೀತಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ವರುಣ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಸಿನಿಮಾವೊಂದರಲ್ಲಿ ನಟಿಸಿದ್ದರು. ಹೀಗಾಗಿ ಮದುವೆ ನಂತರ ನವ್ಯಾ ನಟಿಸಲು ಯಾವುದೇ ಆಕ್ಷೇಪವಿಲ್ಲ ಎಂದು ವರುಣ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *