ಬಣ್ಣದ ಲೋಕದ 3 ನಟಿಯರ ಜೊತೆ ಸುಶಾಂತ್ ಹೆಸ್ರು ಥಳಕು

Public TV
2 Min Read
Sushant 2

-ಲವ್, ಬ್ರೇಕಪ್, ಗಾಸಿಪ್

ಮುಂಬೈ: ಸಾವಿರಾರು ಜನರನ್ನು ಕೈ ಬೀಸಿ ಕರೆಯುವ ಬಣ್ಣದ ಲೋಕ ಅಪ್ಪಿ ಒಪ್ಪಿಕೊಳ್ಳುವುದು ಕೆಲವರನ್ನ ಮಾತ್ರ. ಅಂತರ ಅದೃಷ್ಟವಂತರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಹ ಒರ್ವ ಅಂದ್ರೆ ತಪ್ಪಾಗಲಾರದು. ಯಾವುದೇ ಗಾಡ್ ಫಾದರ್ ಇಲ್ಲದೇ ಬಾಲಿವುಡ್ ನಲ್ಲಿ ಬೆಳೆದ ನಟರ ಪೈಕಿಯಲ್ಲಿ ಸುಶಾಂತ್ ಸಹ ಒಬ್ಬರು. ಸಣ್ಣ ಪಾತ್ರವಾದರೂ ಸರಿ ನಾನು ನಟಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಸುಶಾಂತ್ ಬಾರದ ಲೋಕಕ್ಕೆ ಪಯಣ ಬೆಳೆಸುವ ಮೂಲಕ ಅಪಾರ ಅಭಿಮಾನಿಗಳು, ಬಂಧು ಮಿತ್ರರಿಗೆ ಶಾಕ್ ನೀಡಿ ಚಿರ ನಿದ್ರೆಗೆ ಜಾರಿದ್ದಾರೆ. 11 ವರ್ಷಗಳ ಸಿನಿ ಕೆರಿಯರ್ ನಲ್ಲೂ ಸುಶಾಂತ್ ಹೆಸರು ಥಳಕು ಹಾಕಿಕೊಂಡಿತ್ತು. ಸುಶಾಂತ್ ಬಹಿರಂಗವಾಗಿಯೇ ಓರ್ವ ನಟಿಗೆ ಪ್ರಪೋಸ್ ಮಾಡಿ ನಂತ್ರ ಬೇಕ್ರಪ್ ಮಾಡಿಕೊಂಡ ವಿಚಾರ ಎಲ್ಲರಿಗೂ ಗೊತ್ತಿರುವ ವಿಷಯ.

dc Cover f5gl3d0i2pog0pg77791pp5167 20170703163652.Medi .jpeg

1. ಅಂಕಿತಾ ಲೋಕಂಡೆ:
ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಸುಶಾಂತ್‍ಗೆ ಜೊತೆಯಾಗಿದ್ದು ನಟಿ ಅಂಕಿತಾ ಲೋಕಂಡೆ. ಮಾನವ್ ಮತ್ತು ಅರ್ಚನಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಮಹಿಳಾ ಮಣಿಗಳ ಹಾಟ್ ಫೇವರೇಟ್ ಆಗಿತ್ತು. ಧಾರಾವಾಹಿಯಲ್ಲಿ ಮುಗ್ಧ ಮನಸ್ಸಿನ ಯುವಕನ ಪಾತ್ರ ನೋಡುಗರಿಗೆ ಅಯ್ಯೋ ಅನ್ನುವಂತೆ ಮಾಡುತ್ತಿತ್ತು. ತೆರೆಯ ಮೇಲೆ ಒಂದಾಗಿದ್ದ ಸುಶಾಂತ್ ಮತ್ತು ಅರ್ಚನಾ ರಿಯಲ್ ಲೈಫ್‍ನಲ್ಲಿ ನಾವು ಒಂದಾಗುತ್ತೇವೆ ಅಂತಾ ಹೇಳಿಕೊಂಡಿದ್ದರು. ರಿಯಾಲಿಟಿ ಶೋ ವೇದಿಕೆಯಲ್ಲಿ ಎಲ್ಲರೆದುರೇ ಅಂಕಿತಾಗೆ ಸುಶಾಂತ್ ಪ್ರಪೋಸ್ ಮಾಡಿದ್ದರು. ಧಾರಾವಾಹಿ ಆರಂಭವಾದ ಒಂದು ವರ್ಷದಲ್ಲಿ ಹಿರಿತೆರೆ ಸುಶಾಂತ್ ನನ್ನು ಕೈ ಬೀಸಿ ಕರೆದಿತ್ತು. ಧಾರಾವಾಹಿಯಿಂದ ಹೊರ ಬಂದ ಸುಶಾಂತ್ ಸಿನಿಮಾಗಳಲ್ಲಿ ಬ್ಯುಸಿ ಆದ್ರು. ಇತ್ತ ಅಂಕಿತಾ ಧಾರಾವಾಹಿಯಲ್ಲಿ ಉಳಿದ್ರು. ಹೀಗೆ ದೂರವಾದ ಇಬ್ಬರು ಕೆಲ ದಿನಗಳ ಬಳಿಕ ಬ್ರೇಕಪ್ ಮಾಡಿಕೊಂಡರು. ಕೆಲ ದಿನಗಳ ಬಳಿಕ ಅಂಕಿತಾ, ನನ್ನನ್ನು ಸುಶಾಂತ್‍ನ ಎಕ್ಸ್ ಗರ್ಲ್ ಫ್ರೆಂಡ್ ಅಂತಾ ಕರಿಬೇಡಿ ಅಂತ ಹೇಳಿದ್ದರು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ನಟನೆಯ ಟಾಪ್ 5 ಹಾಡುಗಳು

Sushant Singh Rajput Kriti Sanon

2. ಕೃತಿ ಸನನ್:
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಧಾರಿತ ಸಿನಿಮಾದಲ್ಲಿ ನಟಿಸಿದ ಬಳಿಕ ಸುಶಾಂತ್ ಜೀವನ ಸಂಪೂರ್ಣ ಬದಲಾಗಿತ್ತು. ಧೋನಿ ಸಿನಿಮಾದ ನಂತರ ತೆರೆಕಂಡ ಚಿತ್ರ ರಾಬ್ತಾ. ಸಿನಿಮಾ ಸೂಪರ್ ಹಿಟ್ ಪಟ್ಟಿಗೆ ಸೇರದಿದ್ರೂ ಚಿತ್ರದಲ್ಲಿಯ ಕೃತಿ ಸನನ್ ಮತ್ತು ಸುಶಾಂತ್ ಕೆಮಿಸ್ಟ್ರಿ ನೋಡುಗರಿಗೆ ಇಷ್ಟವಾಗಿತ್ತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು, ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದಾರೆ. ಅಂಕಿತಾ ಬ್ರೇಕಪ್ ಬಳಿಕ ಸುಶಾಂತ್ ಬಾಳಲ್ಲಿ ಕೃತಿ ಎಂಬ ಶೀರ್ಷಿಕೆಯಡಿ ಹಲವು ಲೇಖನಗಳು ಪ್ರಕಟವಾದವು. ಕೆಲವು ದಿನ ಇಬ್ಬರು ಪರಸ್ಪರ ಒಪ್ಪಿಗೆ ಬ್ರೇಕಪ್ ಮಾಡಿಕೊಂಡು ದೂರವಾದ್ರೂ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದವು. ಆದ್ರೆ ಇಬ್ಬರು ಎಲ್ಲಿಯೂ ತಮ್ಮ ಪ್ರೇಮದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ.

riya sushant 5d2840f4b1d20

3. ರಿಯಾ ಚಕ್ರವರ್ತಿ:
ಕೆಲವು ದಿನಗಳಿಂದ ಸುಶಾಂತ್ ಸಿಂಗ್ ಹೆಸರು ನಟಿ ರಿಯಾ ಚಕ್ರವರ್ತಿಯೊಂದಿಗೆ ಕೇಳಿ ಬಂದಿತ್ತು. ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಹಲವೆಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲಾರಭಿಸಿದ್ದರು. ಸುಶಾಂತ್ ಮದುವೆ ಆಗ್ತಿದ್ದಾರೆ ಅಂತಾ ನ್ಯೂಸ್ ಹರಿದಾಡಿದ್ದುಂಟು. ಈಗತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ರಿಯಾ, ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಹೆಚ್ಚು ಆಸಕ್ತಿ ತೋರಿದ್ದರು. ಹಾಗಾಗಿ ಮದುವೆಗೆ ಹಿಂದೇಟು ಹಾಕಿದ್ದರಂತೆ. ಇಲ್ಲಿ ಸಹ ಸುಶಾಂತ್ ತಮ್ಮ ಪ್ರೀತಿಯನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *