ಸುಶಾಂತ್ ಸಿಂಗ್ ರಜಪೂತ್ ನಟನೆಯ ಟಾಪ್ 5 ಹಾಡುಗಳು

Public TV
2 Min Read
sushanth singh

ಬೆಂಗಳೂರು: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಶಾಂತ್ ತಮ್ಮದೇ ಸ್ಟೈಲ್, ಡ್ಯಾನ್ಸ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತನ್ನ ಮುಗ್ಧ ನಗುವಿನ ಮೂಲಕವೇ ಧಾರಾವಾಹಿಗೆ ಎಂಟ್ರಿ ನೀಡಿದ್ದ ಸುಶಾಂತ್, ಯಾವುದೇ ಗಾಡ್ ಫಾದರ್ ಗಳಿಲ್ಲದೇ ಚಿತ್ರರಂಗದ ಬೇಡಿಕೆ ನಟರಲ್ಲಿ ಒಬ್ಬರಾಗಿದ್ದರು.

ಒಂದು ಸಿನಿಮಾ ಹಿಟ್ ಆಗಬೇಕಾದ್ರೆ ಡ್ಯಾನ್ಸ್, ಆ್ಯಕ್ಟಿಂಗ್, ಫೈಟಿಂಗ್ ಎಲ್ಲ ಕಲೆಗಳನ್ನು ಕಲಾವಿದರು ಮೈಗೂಡಿಸಿಕೊಂಡಿರಬೇಕು. ಕಟ್ಟು ಮಸ್ತಾದ ದೇಹ ಹೊಂದಿದ್ದ ಸುಶಾಂತ್ ಡ್ಯಾನ್ಸ್ ನೋಡೋದು ಒಂದು ಚೆಂದ. ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಡ್ಯಾನ್ಸ್ ಮೂಲಕ ಕಾಣಿಸಿಕೊಳ್ಳುತ್ತಿದ್ದ ಸುಶಾಂತ್ ಭಿನ್ನ ಭಿನ್ನ ವರ್ಗದ ನೋಡುಗರನ್ನ ಸೆಳೆಯುತ್ತಿದ್ದರು. ಕೈ ಪೋ ಚೇ ಮೂಲಕ ಗಾಳಿಪಟ ಹಾರಿಸುತ್ತಾ ಬಂದ ಸುಶಾಂತ್ ಸಿನಿಮಾಗಳು ನೂರು ಕೋಟಿ ಪಟ್ಟಿಯಲ್ಲಿವೆ. ಸುಶಾಂತ್ ನಟನೆಯ ಸಿನಿಮಾದ ಟಾಪ್ 5 ಹಾಡುಗಳು ಇಲ್ಲಿವೆ.

sushant new 1494917166

1. ತೇರೇ ಮೇರೇ ಬೀಚ್ ಮೇ ಕ್ಯಾ ಹೈ (ಶುದ್ಧ ದೇಸಿ ರೊಮ್ಯಾನ್ಸ್): ನಿರ್ದೇಶಕ ಮನೀಶ್ ಶರ್ಮಾ ಹೊಸ ಕಲಾವಿದರ ತಂಡ ಕಟ್ಟಿಕೊಂಡು ಶುದ್ಧ ದೇಸಿ ರೊಮ್ಯಾನ್ಸ್ ಕಥೆ ನಿರ್ಮಿಸಿದ್ದರು. ಸುಶಾಂತ್ ಜೊತೆಯಾಗಿ ಪರಿಣಿತಿ ಚೋಪ್ರಾ ಮತ್ತು ವಾಣಿ ಕಪೂರ್ ಜೊತೆಯಾಗಿ ನಟಿಸಿದ್ದರು. ಸಿನಿಮಾದ ‘ತೇರೇ ಮೇರೇ ಬೀಚ್ ಮೇ ಕ್ಯಾ ಹೈ’ ಡ್ಯೂಯೆಟ್ ಸಾಂಗ್ ಹಿಟ್ ಆಗಿತ್ತು. ಪರಿಣಿತಿ ಮತ್ತು ಸುಶಾಂಗ್ ಕೆಮಿಸ್ಟ್ರಿ ವರ್ಕೌಟ್ ಆಗಿತ್ತು. ಯುಟ್ಯೂಬ್ ನಲ್ಲಿ ಈ ಹಾಡು ಇದುವರೆಗೂ 3 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

2. ಚಾರ್ ಕದಮ್ (ಪಿಕೆ): ಇಂಡಸ್ಟ್ರಿಗೆ ಬಂದ ಕೆಲವೇ ವರ್ಷಗಳಲ್ಲಿ ನಟ ಆಮೀರ್ ಖಾನ್ ನಟನೆಯ ‘ಪಿಕೆ’ಯಲ್ಲಿ ಪ್ರಮುಖ ಪಾತ್ರವನ್ನು ಸುಶಾಂತ್ ತಮ್ಮದಾಗಿಸಿಕೊಂಡಿದ್ದರು. ಸಿನಿಮಾದಲ್ಲಿ ಹೀಗೆ ಬಂದು ಹೋಗುವ ಸುಶಾಂತ್ ಎಲ್ಲರನ್ನು ತಮ್ಮ ಸಹಜ ನಟನೆಯ ಮೂಲಕ ಸೆಳೆದಿದ್ದರು. ಚಿತ್ರದಲ್ಲಿ ಸುಶಾಂತ್ ಗೆ ಜೊತೆಯಾಗಿ ಅನುಷ್ಕಾ ಶರ್ಮಾ ನಟಿಸಿದ್ದರು. ಇಬ್ಬರ ಜೋಡಿಯಲ್ಲಿ ಮೂಡಿ ಬಂದ ರೊಮ್ಯಾಂಟಿಕ್, ಮೆಲೋಡಿ ಹಾಡು ‘ಚಾರ್ ಕದಮ್’ ಸೂಪರ್ ಹಿಟ್ ಆಗಿತ್ತು. ಯುಟ್ಯೂಬ್ ನಲ್ಲಿ 1.9 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ.

3. ಬೇಸಬರಿಯಾಂ(ಧೋನಿ) : ಸುಶಾಂತ್‍ಗೆ ಎಂ.ಎಸ್.ಧೋನಿ ಸಿನಿಮಾ ದೊಡ್ಡ ತಿರುವನ್ನು ನೀಡಿತ್ತು. ಇಡೀ ದೇಶದೆಲ್ಲಡೆ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಅರ್ಮಾನ್ ಮಲೀಕ್ ಧ್ವನಿಯಲ್ಲಿ ಮೂಡಿ ಬಂದ ಬೇಸಬರಿಯಾಂ ಹಾಡು ಇಂದಿಗೂ ಎಷ್ಟೋ ಜನರ ಫೇವರಿಟ್. ಯುಟ್ಯೂಬ್ ನಲ್ಲಿ 1.7ಕೋಟಿಗೂ ಅಧಿಕ ವ್ಯೂವ್ ಪಡೆದಿರೋ ಹಾಡು ಅಮಾನ್ ಮಲೀಕ್ ಸಂಯೋಜನೆಯಲ್ಲಿ ಮೂಡಿ ಬಂದಿತ್ತು.

4. ಕೌನ್ ತುಜೇ (ಧೋನಿ): ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಜೀವನಾಧಾರಿತ ಸಿನಿಮಾದ ಎಲ್ಲ ಹಾಡುಗಳು ಸಂಗೀತ ಪ್ರಿಯರಿಗೆ ಹಿತವಾದ ಸಾಂಗ್‍ಗಳಲ್ಲಿ ಒಂದಾಗಿವೆ. ಪಲಕ್ ಮುಚ್ಚಲ್ ಹಾಡಿರೋ ಕೌನ್ ತುಜೇ ಹಾಡು ಬಹುತೇಕರ ರಿಂಗ್ ಟೋನ್ ಆಗಿತ್ತು. ಹಾಡು 2.6 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಇದೇ ಚಿತ್ರದ ‘ಜಬ್ ತಕ್’ ಹಾಡು ಸುಶಾಂತ್ ನಟನೆಯ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿದೆ.

5. ಮೈ ತೇರಾ ಬಾಯ್‍ಫ್ರೆಂಡ್ (ರಾಬ್ತಾ): ಮೈ ತೇರಾ ಬಾಯ್‍ಫ್ರೆಂಡ್ ಹಾಡಿನಲ್ಲಿ ಸುಶಾಂತ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಂತು ನಿಜ. ಸಿಕ್ಸ್ ಪ್ಯಾಕ್ ಮೂಲಕ ಎಂಟ್ರಿ ಕೊಟ್ಟಿದ್ದ ಸುಶಾಂತ್ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *