ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಕಡಿದ ಬಾಳೆದಿಂಡಿನಲ್ಲಿ ಮತ್ತೊಂದು ಬಾಳೆ ಗೊನೆ ಮೂಡಿದೆ.
ಮಾಕೋನಹಳ್ಳಿ ಗ್ರಾಮದ ಕೃಷ್ಣೇಗೌಡರು ತೋಟದಲ್ಲಿ ಕಾಫಿ ಗಿಡಗಳ ಮಧ್ಯೆ ಬಾಳೆಗಿಡವನ್ನೂ ಕಡಿದು ಹಾಕಿದ್ದರು. ಕಾಫಿ ಗಿಡಕ್ಕೆ ಬಾಳೆ ಗಿಡದ ನೆರಳು ಹೆಚ್ಚಾಯಿತೆಂದು ಬಾಳೆಗೊನೆ ಕಿತ್ತ ಬಳಿಕ ನೆಲ ಮಟ್ಟದಿಂದ ಸುಮಾರು ಎರಡ್ಮೂರು ಅಡಿ ಎತ್ತರಕ್ಕೆ ಬಾಳೆಗಿಡವನ್ನ ಕಡಿದು ಹಾಕಿದ್ದಾರೆ. ಕಡಿದ ಆ ಬಾಳೆಗಿಡದ ಬರಿ ದಿಂಡಿನಲ್ಲಿ ಮತ್ತೊಂದು ಬಾಳೆಗೊನೆ ಅರಳಿರೋದು ನೋಡುಗರಲ್ಲಿ ವಿಸ್ಮಯ ಹುಟ್ಟಿಸಿದೆ.
ಕಡಿದ ಬಾಳೆಗಿಡದಲ್ಲಿ ಒಂದೇ ಒಂದು ಬಾಳೆ ಎಲೆ ಚಿಗುರದಿದ್ದರೂ ಕೂಡ ಗೊನೆ ಮಾತ್ರ ಮೂಡಿರೋದು ಕೃಷ್ಣೇಗೌಡರ ಜೊತೆ ನೋಡುಗರಿಗೂ ಆಶ್ಚರ್ಯ ಮೂಡಿಸಿದೆ. ಬಾಳೆಗೊನೆ ನೋಡಲು ಗ್ರಾಮಸ್ಥರು ಆಗಮಿಸಿ ಪ್ರಕೃತಿಯ ವಿಸ್ಮಯಕ್ಕೆ ಆಶ್ಚರ್ಯ ಚಕಿತರಾಗುತ್ತಿದ್ದಾರೆ.