– ವಿಡಿಯೋ ನೋಡಿ, ನೀವು ಟ್ರೈ ಮಾಡಿ
ನವದೆಹಲಿ: ಇಂಟರ್ನೆಟ್‍ನಲ್ಲಿ ನಾವು ಅನೇಕ ಆಸಕ್ತಿದಾಯಕ ವಿಷಯಗಳನ್ನ ತಿಳಿದುಕೊಳ್ಳಬಹುದಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿಯೊಂದಿಗೆ ಮನರಂಜನೆಯನ್ನೂ ನೀಡುತ್ತವೆ.
ಕೊರೊನಾ ಲಾಕ್‍ಡೌನ್‍ನಿಂದಾಗಿ ಅನೇಕರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೃಜನಾತ್ಮಕ ವಿಡಿಯೋಳು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಈ ಪೈಕಿ ಘಾನಾ ಪಾಲ್ಬಿಯರ್ಸ್ ಅಂತ್ಯಕ್ರಿಯೆಯ ನೃತ್ಯ ಮಾಡುವ ವಿಡಿಯೋಗಳನ್ನು ಅನೇಕ ಟ್ರೋಲ್ ಪೇಜ್‍ಗಳು ಬಳಸಿದ್ದವು.
@zhukeyev.nЛайк если знаешь этот трек ???? #рекомендации #тикток #врек #хочуврек #рекамендация #рек #топ #вреки #танцы
ಅಂತ್ಯಕ್ರಿಯೆ ವಿಡಿಯೋಗಳು ಹಳೆಯದಾಗಿದ್ದರೂ ಕೊರೊನಾ ವೈರಸ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದಾಗ ಅವುಗಳು ಮತ್ತೆ ವೈರಲ್ ಆಗಿದ್ದವು. ಅದರಲ್ಲೂ ಮ್ಯೂಸಿಕ್ ಮತ್ತು ನೃತ್ಯವು ನೆಟ್ಟಿಗರ ಮನಸ್ಸಿಗೆ ತಟ್ಟಿದ್ದವು. ಒಂದೇ ರೀತಿಯಾಗಿ ಬಹಳಷ್ಟು ಮ್ಯೂಸಿಕ್‍ಗಳನ್ನು ರೆಡಿ ಮಾಡಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವು ಕೂಡ ಅನೇಕ ನೆಟ್ಟಿಗರ ಮನ ಗೆದ್ದಿದ್ದವು.
ಘಾನಾ ಅಂತ್ಯಕ್ರಿಯೆ ವಿಡಿಯೋದಲ್ಲಿ ಕೇಳಿ ಬರುವ ಮ್ಯೂಸಿಕ್ ಅನ್ನು ನಿಮ್ಮ ನೀವೇ ನುಡಿಸಿ ಮೊಬೈಲ್‍ನಲ್ಲಿ ಆನಂದಿಸಬಹುದು. ಹೌದು… ನಿಮ್ಮ ಮೊಬೈಲ್ ಕೀಪ್ಯಾಡ್ ಸೌಂಡ್ ಇಟ್ಟುಕೊಂಡು ನಂಬರ್ ಡೈಲ್ ಮಾಡಿದರೆ ಘಾನಾ ಅಂತ್ಯಕ್ರಿಯೆಯೆ ಮೆರವಣಿಗೆಯ ಮ್ಯೂಸಿಕ್ ಕೇಳಿ ಬರುತ್ತದೆ. ಇಂತಹ ಪ್ರಯೋಗದ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೀವು ಒಮ್ಮೆ ಟ್ರೈ ಮಾಡಿ ನೋಡಿ.
@euneeew