ಆರು ನಾಯಿಗಳಿಗಾಗಿ 9.6 ಲಕ್ಷ ರೂ. ಖರ್ಚು ಮಾಡಿ ಜೆಟ್ ಬುಕ್

Public TV
1 Min Read
pjimage 37

ಮುಂಬೈ: ತನ್ನ ಸಾಕು ನಾಯಿಗಳಿಗಾಗಿ ಮುಂಬೈ ಮೂಲದ ಮಹಿಳೆ ಬರೋಬ್ಬರಿ 9.6 ಲಕ್ಷ ರೂ. ಖರ್ಚು ಮಾಡಿ ಖಾಸಗಿ ಜೆಟ್ ಬುಕ್ ಮಾಡಿದ್ದಾರೆ. ವಿಮಾನ ಜೂನ್ ಮಧ್ಯ ವಾರದಲ್ಲಿ ಟೇಕಾಫ್ ಆಗಲಿದೆ. ಸಾಕು ನಾಯಿಗಳು ದೆಹಲಿಯಿಂದ ಮುಂಬೈಗೆ ಪ್ರಯಾಣ ಬೆಳೆಸಲಿವೆ.

25 ವರ್ಷದ ದೀಪಿಕಾ ಸಿಂಗ್ ಜೆಟ್ ಕಾಯ್ದಿರಿಸಿದ ಮಹಿಳೆ. ಈಗಾಗಲೇ ನಾಲ್ವರು ತಮ್ಮ ನಾಯಿಗಳನ್ನು ಕರೆತರಲು ಸಹಿ ಮಾಡಿದ್ದಾರೆ. ಇನ್ನಿಬ್ಬರು ಸಹಿ ಮಾಡಿದ್ರೆ ನಾಯಿಗಳಾಗಿ ವಿಮಾನ ಬುಕ್ ಆಗಲಿದೆ. ಇದರಿಂದ ಖರ್ಚು ಕಡಿಮೆ ಆಗಲಿದೆ ಎಂದು ಹೇಳುತ್ತಾರೆ.

unnamed

ದೆಹಲಿಯಲ್ಲಿರುವ ಕುಟುಂಬಸ್ಥರಿಗಾಗಿ ವಿಮಾನ ಬುಕ್ ಮಾಡುತ್ತಿದ್ದೆ. ಆದ್ರೆ ಅವರ ಸಾಕು ನಾಯಿಗಳನ್ನು ಜೊತೆಗೆ ಕರೆತರಲು ಅನುಮತಿ ಸಿಗಲಿಲ್ಲ. ಪ್ರಾಣಿಗಳಿಗೂ ಅವುಗಳ ಕುಟುಂಬಸ್ಥರಿಂದ ದೂರ ಮಾಡಬಾರದು. ಹಾಗಾಗಿ ಅವುಗಳಿಗಾಗಿ ವಿಶೇಷ ಚಾರ್ಟೆಡ್ ಜೆಟ್ ಬುಕ್ ಮಾಡಬೇಕೆಂಬ ಐಡಿಯಾ ಬಂತು ಎಂದು ದೀಪಿಕಾ ಹೇಳಿದ್ದಾರೆ.

flight

ಬೆಕ್ಕು, ಪಕ್ಷಿ, ನಾಯಿ ಸೇರಿದಂತೆ ಕೆಲವು ಸಾಕು ಪ್ರಾಣಿಗಳನ್ನ ವಿಮಾನದಲ್ಲಿ ಕರೆತರಲು ಅನುಮತಿ ನೀಡಲಾಗುತ್ತದೆ. ಆರು ಆಸನಗಳ ಸಾಮಾರ್ಥ್ಯವುಳ್ಳ ವಿಮಾನ ಬುಕ್ ಮಾಡಲು ದೀಪಿಕಾ ಖಾಸಗಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕ ಮಾಡಿದ್ದರು. ಸಂಸ್ಥೆ ಸಹ ನಾಯಿಗಳನ್ನು ಟೇಕಾಫ್ ಮಾಡಲು ಒಪ್ಪಿಕೊಂಡಿದೆ. ಒಂದು ಆಸನಕ್ಕೆ 1.6 ಲಕ್ಷ ರೂ. ಪಾವತಿ ಮಾಡಬೇಕು. ಒಟ್ಟು ಆರು ಆಸನಿಗಳಿಗೆ ದೀಪಿಕಾ 9.6 ಲಕ್ಷ ರೂ. ಪಾವತಿಸಲು ಸಿದ್ಧರಾಗಿದ್ದಾರೆ.

Share This Article