– 25 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದ ಕಳ್ಳ ಅರೆಸ್ಟ್
ಬೆಂಗಳೂರು: ಏಕಾಂಗಿಯಾಗಿ ಮನೆಗಳ್ಳತ ಮಾಡಿ ಬಂದ ದುಡ್ಡಲ್ಲಿ ಯುವತಿಯರ ಜೊತೆ ಮೋಜು ಮಸ್ತಿ ಮಾಡುತ್ತಿದ್ದ ಕಳ್ಳನನ್ನು ಬೆಂಗಳೂರಿನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಜ ಅಲಿಯಾಸ್ ಪುಳಂಗ ಮಂಜ ಎಂದು ಗುರತಿಸಲಾಗಿದೆ. ಮೂಲತಃ ಮಂಡ್ಯದವನಾದ ಮಂಜ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಜೊತೆಗೆ ಬೀಗ ಹಾಕಿದ ಮನೆಗಳು ಕಂಡರೆ ಅವುಗಳಿಗೆ ಏಕಾಂಗಿಯಾಗಿಯೇ ಕನ್ನ ಹಾಕುತ್ತಿದ್ದ. ಲಾಕ್‍ಡೌನ್ ನಡುವೆಯೂ ಬರೋಬ್ಬರಿ 25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಸ್ತುಗಳನ್ನು ಮಂಜ ಕಳ್ಳತನ ಮಾಡಿದ್ದ.
ಪೊಲೀಸರಿಗೆ ಸುಳಿವು ಸಿಗದಿರಲಿ ಎಂದು ಏಕಾಂಗಿಯಾಗಿ ಕಳ್ಳತನ ಮಾಡುತ್ತಿದ್ದ ಮಂಜ, ಕದ್ದ ವಸ್ತುಗಳನ್ನು ಗೆಳೆಯರ ಮೂಲಕ ಅಡವಿಡಿಸುತ್ತಿದ್ದ. ಎಲ್ಲರ ಬಳಿ ನಾನು ಊರಿನಲ್ಲಿ ತುಂಬ ರಿಚ್ ಎಂದು ಹೇಳಿಕೊಂಡಿದ್ದ. ಕಳ್ಳ ಮಾಲನ್ನು ಅಡವಿಡಲೆಂದೆ ಹೊಸ ಹೊಸ ಗೆಳೆಯರನ್ನ ಮಾಡಿಕೊಳ್ಳುತ್ತಿದ್ದ. ಈ ಹಿಂದೆ ಕೂಡ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ. ಸದ್ಯ ಆರೋಪಿಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಮಾಡಿದ್ದ ಹಣದಲ್ಲಿ ಯುವತಿಯರ ಜೊತೆ ಮೋಜು ಮಸ್ತಿ ಮಾಡುತ್ತಿದ್ದ ಆರೋಪಿ, ಅದರಲ್ಲಿ ವಕೀಲರಿಗೆ ಒಂದಷ್ಟು ಹಣ ಎತ್ತಿಡುತ್ತಿದ್ದ. ಸದ್ಯ ಆರೋಪಿಯ ಬಂಧನದಿಂದ 8 ಪ್ರಕಣಗಳು ಪತ್ತೆಯಾಗಿವೆ. ಬಂಧಿತನಿಂದ 25 ಲಕ್ಷ ಹಣ, ಚಿನ್ನಾಭರಣ, ಐದು ಬೈಕ್, 1 ಕಾರು ವಶಪಡಿಸಿಕೊಳ್ಳಲಾಗಿದೆ. ಮಂಜನನ್ನು ಸದ್ಯ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.