ಅನೈತಿಕ ಸಂಬಂಧ ಬೇಡ, ಸೆಕ್ಸ್ ವೇಳೆ ಮಾಸ್ಕ್ ಧರಿಸಿ- ತಜ್ಞರ ಸಲಹೆ

Public TV
2 Min Read
Mask

– ಅಧ್ಯಯನ ತಂಡದಿಂದ ಜನರಿಗೆ ಸಲಹೆ

ಲಂಡನ್: ಜೋಡಿಗಳು ಲೈಂಗಿಕ ಕ್ರಿಯೆ ನಡೆಸುವಾಗ ಮಾಸ್ಕ್ ಧರಿಸಿದ್ರೆ ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.

ವಿಶ್ವದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಜೋಡಿಗಳು ಲೈಂಗಿಕ ಸಂಪರ್ಕ ನಡೆಸುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೆಕ್ಸ್ ಮುನ್ನ ಕಿಸ್ ಮಾಡೋದರಿಂದ ದೂರವಿರಿ. ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸೋದು ಉತ್ತಮ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹೇಳಿದೆ.

mask a

ಕೊರೊನಾ ಸೋಂಕು ಹೇಗೆ ತಗುಲುತ್ತೆ ಎಂಬುವುದೇ ಗೊತ್ತಾಗುತ್ತಿಲ್ಲ. ಅಪರಿಚಿತರೊಂದಿಗೆ ತಿರುಗಾಟ, ಸಂಪರ್ಕ ಬೆಳೆಸೋದು ಈ ದಿನಗಳಲ್ಲಿ ಅಪಾಯಕಾರಿ. ಜೋಡಿ ಒಂದೇ ಮನೆಯಲ್ಲಿ ವಾಸವಾಗಿದ್ರೆ ಸೆಕ್ಸ್ ನಡೆಸಬಹುದು. ಈ ರೀತಿಯ ಕ್ರಮಗಳನ್ನು ಅನುಸರಿಸೋದರಿಂದ ಸೋಂಕು ತಗಲುವ ಸಾಧ್ಯತೆಗಳು ಕಡಿಮೆ. ಜನರು ಸಹ ಸೋಂಕು ನಿಯಂತ್ರಿಸುವದಕ್ಕಾಗಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಅಧ್ಯಯನ ತಂಡ ತನ್ನ ವರದಿಯಲ್ಲಿ ಪ್ರಕಟಿಸಿದೆ.

Couple 7

ಚೀನಾದ ಡಾ.ಜ್ಯಾಕ್ ಟರ್ಬನ್ ನೇತೃತ್ವದ ವಿದ್ಯಾರ್ಥಿಗಳ ತಂಡ ಲೈಂಗಿಕ ಕ್ರಿಯೆ ಮೂಲಕ ಕೊರೊನಾ ಹರಡುತ್ತಾ ಎಂಬುದರ ಬಗ್ಗೆ ಅಧ್ಯಯನ ನಡೆಸಿತ್ತು. ಈ ಸಂಬಂಧ ಕೊರೊನಾದಿಂದ ಗುಣಮುಖರಾದ 38 ಪುರುಷರ ವೀರ್ಯವನ್ನು ತಂಡ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಿತ್ತು. ಕೊರೊನಾದಿಂದ ಗುಣಮುಖರಾದ ಶೇ.16ರಷ್ಟು ಪುರುಷರ ವೀರ್ಯದಲ್ಲಿ ಕೊರೊನಾ ವೈರಸ್ ಸೋಂಕು ಇರೋದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಅಧ್ಯಯನ ತಂಡ ಸಾರ್ವಜನಿಕರಿಗೆ ಕೆಲವೊಂದು ಸಲಹೆಗಳನ್ನು ನೀಡಿತ್ತು.

condom

ಕೊರೊನಾದಿಂದ ಗುಣಮುಖರಾದ ಮೇಲೆ ಸುಮಾರು 30 ದಿನಗಳವರೆಗೆ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳಬೇಕು. ಕಿಸ್ ಮಾಡುವಾಗ ಲಿಪ್‍ಲಾಕ್ ಆಗೋದರಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರೋದರಿಂದ ಚುಂಬನದಿಂದ ದೂರಿವಿರಿ. 30 ದಿನಗಳ ನಂತರ ಸೆಕ್ಸ್ ನಂತರ ಸುರಕ್ಷಿತ ಲೈಂಗಿಕ ಕ್ರಿಯೆ (ಕಾಂಡೋಮ್ ಬಳಕೆ) ನಡೆಸಬಹುದು. ಇನ್ನು ಮಹಿಳೆಯರು ಸಹ ಕೊರೊನಾ ಸಮಯದಲ್ಲಿ ಗರ್ಭಧರಿಸೋದು ಅಪಾಯ. ಹಾಗಾಗಿ ತಾಯಿಯಾಗುವ ಆಸೆಯನ್ನು ಸ್ವಲ್ಪ ದಿನ ಮುಂದೂಡಿದ್ರೆ ಒಳಿತು ಎಂದು ತಿಳಿಸಿದೆ.

condom

 

ಮೇನಲ್ಲಿ ಡಚ್ ಸರ್ಕಾರ ಕೊರೊನಾ ಲಾಕ್‍ಡೌನ್ ನಲ್ಲಿ ನೀವು ಒಂಟಿಯಾಗಿದ್ದರೆ ಸಂಗಾತಿಯನ್ನು ಹುಡುಕಿಕೊಳ್ಳಿ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಕೊರೊನಾ ಸೋಂಕಿಗೆ ಒಳಪಡದೇ ಮನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಇರಿ ಎಂದು ಹೇಳಿತ್ತು. ಇದರ ನಡುವೆ ಇಂಗ್ಲೆಂಡ್ ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಬದಲಾವಣೆಯನ್ನು ತಂದಿದ್ದು, ಅಕ್ರಮ ಸಂಬಂಧವನ್ನು ಬ್ಯಾನ್ ಮಾಡಿ ಆದೇಶಿಸಿದೆ. ಈ ನಿಯಮದ ಪ್ರಕಾರ ಮನೆಯಲ್ಲಿ ಜೊತೆಯಾಗಿದ್ದರೆ ಮಾತ್ರ ಲೈಂಗಿಕ ಕ್ರಿಯೆ ನಡೆಸಬೇಕು. ಹೊರಗಿನ ವ್ಯಕ್ತಿ ಅಥವಾ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಕಾನೂನಿಗೆ ವಿರುದ್ಧವಾಗಲಿದೆ ಎಂದು ತನ್ನ ಕೊರೊನಾ ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *