ಮದ್ವೆಯಾದ್ರೆ ಮಾತ್ರ ಲಂಡನ್‍ಗೆ ಕರ್ಕೊಂಡು ಹೋಗು- ಬಿಗ್ ಬಿಗೆ ಆರ್ಡರ್ ಮಾಡಿದ್ದ ತಂದೆ

Public TV
3 Min Read
amitabh jaya bachchan

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಾಂಪತ್ಯಕ್ಕೆ ಇಂದಿಗೆ 47 ವರ್ಷಗಳು. ಇನ್ನು ಮೂರು ವರ್ಷ ಕಳೆದೆ ಸುವರ್ಣ ಮಹೋತ್ಸವವನ್ನು ಈ ದಂಪತಿ ಆಚರಿಸಿಕೊಳ್ಳಲಿದ್ದಾರೆ. 47ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಬಿಗ್ ತಮ್ಮ ಪ್ರೀತಿಯ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಪರೂಪದ ಘಟನೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

13zanjeer unforgettable scenes11

ಬಿಗ್ ಬಿ ಅವರದ್ದು ಲವ್ ಮ್ಯಾರೇಜ್ ಎಂಬುದು ತಿಳಿದಿರುವ ವಿಚಾರ. ಬಾಲಿವುಡ್‍ನಲ್ಲಿ ಬಿಗ್ ಬಿ ಹಾಗೂ ಜಯಾ ಆದರ್ಶ ದಂಪತಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಆ ಮಟ್ಟಕ್ಕೆ ತಮ್ಮ ಪ್ರೀತಿಯನ್ನು ಕಾಪಾಡಿಕೊಂಡಿದ್ದಾರೆ. ಅಂದಹಾಗೆ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಭೇಟಿಯಾಗಿದ್ದು 1970ರಲ್ಲಿ ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್‍ನಲ್ಲಿ ಆದರೆ ಇದು ಲವ್ ಆ್ಯಟ್ ಫಸ್ಟ್ ಸೈಟ್ ಅಲ್ಲ. ಬದಲಿಗೆ ಮ್ಯಾಗಜಿನ್ ಕವರ್ ಫೋಟೋದಲ್ಲಿ ಅವರನ್ನು ನೋಡಿದ್ದರಂತೆ. ಭೇಟಿಯಾದ ಆರಂಭದಲ್ಲಿ ಇಬ್ಬರೂ ಅಟ್ರ್ಯಾಕ್ಟ್ ಆಗಿದ್ದರಂತೆ. ಆದರೆ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು, 1972ರಲ್ಲಿ ಶುರುವಾದ ಎಕ್ ನಜರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ.

amitabh jaya

ಸ್ವತಃ ಜಯಾ ಬಚ್ಚನ್ ಅವರೇ ತಮ್ಮ ಲವ್ ಸ್ಟೋರಿ ಕುರಿತು ಮಾತನಾಡಿದ್ದು, ಗುಡ್ಡಿ ಸೆಟ್‍ನಲ್ಲಿ ಅವರನ್ನು ಪರಿಚಯ ಮಾಡಿಕೊಂಡಿದ್ದೆ. ನಂತರ ಅವರಿಗೆ ಮಾರುಹೋದೆ. ನಂತರ ಹರಿವನ್ಶಿರಾಯ್ ಬಚ್ಚನ್ ಅವರ ಮಗ ಎಂದು ತಿಳಿಯಿತು. ಅವರು ತುಂಬಾ ವಿಭಿನ್ನವಾಗಿದ್ದಾರೆ ಅನಿಸಿತು. ಇದನ್ನು ಹೇಳಿದಾಗ ಜನ ನನ್ನನ್ನು ನೋಡಿ ನಕ್ಕಿದ್ದರು. ನಾನು ನನ್ನ ಮನದಾಳವನ್ನು ಅವರಿಗೆ ಹೇಳಿದೆ. ನಾನು ಊಹಿಸಿದ್ದಕ್ಕಿಂತಲೂ ದೊಡ್ಡದಾಗಿಯೇ ಮಾಡುತ್ತಾರೆ ಎಂದು ಊಹಿಸಿದರೂ, ಅವರು ಸಾಮಾನ್ಯ ಹೀರೋ ಆಗಿರಲಿಲ್ಲ. ಹೀಗಾಗಿ ಅವರನ್ನು ಶೀಘ್ರದಲ್ಲೇ ಪ್ರೀತಿಸುತ್ತೇನೆ ಅನಿಸಿತು. ನಂತರ ಇಬ್ಬರೂ ಜೊತೆಯಾದೆವು ಎಂದು ಪ್ರೀತಿಯ ಕುರಿತು ವಿವರಿಸಿದ್ದಾರೆ.

ಬಿಗ್ ಬಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ಈ ಮೂಲಕ ಅಭಿಮಾನಿಗಳಿಗೆ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲಸ ದಿನಗಳ ಹಿಂದೆ ಜಯಾ ಬಚ್ಚನ್ ಹಾಗೂ ತಮ್ಮ ಕುಟುಂಬದ ಜೊತೆಗೆ ಕಾಲ ಕಳೆದಿದ್ದನ್ನು ವಿಡಿಯೋವನ್ನು ಹಂಚಿಕೊಂಡಿದ್ದರು.

ಇದೀಗ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಮೂಲಕ ಲಾಕ್‍ಡೌನ್ ಸಮಯದಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ನೆನಪಿಸಿಕೊಂಡಿದ್ದಾರೆ. ಫೋಟೋಗಳಿಗೆ ಸಾಲುಗಳನ್ನು ಬರೆದಿರುವ ಅವರು, ಇಂದಿಗೆ 47 ವರ್ಷಗಳಾಯಿತು, ಜೂನ್ 3, 1973ರಲ್ಲಿ ನಾವು ವಿವಾಹವಾದೆವು. ಇದಕ್ಕೂ ಮೊದಲು ನಾವು ಕೆಲ ಸ್ನೇಹಿತರೊಂದಿಗೆ ಮೊದಲ ಬಾರಿಗೆ ಲಂಡನ್‍ಗೆ ಹೋಗಲು ನಮ್ಮ ತಂದೆಯ ಬಳಿ ಕೇಳಿದೆವು. ಆಗ ನಮ್ಮ ತಂದೆ ಯಾರೊಂದಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ್ದರು. ಯಾರೆಂದು ಹೇಳಿದಾಗ ಅವರು, ನೀನು ಅಲ್ಲಿಗೆ ಹೋಗುವುದಕ್ಕೂ ಮೊದಲು ಅವಳನ್ನು ವಿವಾಹವಾಗು. ಅಲ್ಲಿಯವರೆಗೆ ನೀನು ಎಲ್ಲಿಗೂ ಹೋಗುವಂತಿಲ್ಲ ಎಂದಿದ್ದರು. ನನ್ನ ತಂದೆಯ ಆಜ್ಞೆಯನ್ನು ಪಾಲಿಸಿದೆ ಎಂದಿದ್ದಾರೆ. ಅಲ್ಲದೆ ಅದೇ ದಿನ ವಿವಾಹವಾಗಿ ಅಂದೇ ಜೊತೆಯಾಗಿ ಇಬ್ಬರೂ ಲಂಡನ್‍ಗೆ ಹೋಗಿದ್ದರಂತೆ.

ಅಮಿತಾಬ್ ಬಚ್ಚನ್ ಅವರು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *