ಲಾಕ್‍ಡೌನ್ ಎಫೆಕ್ಟ್: ಕಡಿಮೆಯಾದ ಅಪಘಾತಗಳು- ರಾಯಚೂರಿನಲ್ಲಿ 94 ಲಕ್ಷ ರೂ. ದಂಡ ವಸೂಲಿ

Public TV
1 Min Read
WhatsApp Image 2020 05 27 at 4.49.50 AM

ರಾಯಚೂರು: ಕೋವಿಡ್-19  ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕಿನಿಂದ ಸಾಕಷ್ಟು ಸಾವುಗಳು ಸಹ ಸಂಭವಿಸಿವೆ. ನಿಜ, ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಅಲ್ಲದೇ ಸಾವು, ಗಾಯಾಳುಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ.

ರಾಯಚೂರು ಜಿಲ್ಲೆಯೊಂದರಲ್ಲೇ ಪೊಲೀಸ್ ಇಲಾಖೆ ದಾಖಲೆಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ 40ಕ್ಕೂ ಹೆಚ್ಚು ಜನರ ಪ್ರಾಣ ಉಳಿದಿವೆ. 2019 ರಲ್ಲಿ ಜನವರಿಯಿಂದ ಮೇ ತಿಂಗಳಲ್ಲಿ ಒಟ್ಟು 125 ಭೀಕರ, 180 ಸಾಮಾನ್ಯ ಒಟ್ಟು 305 ಅಪಘಾತಗಳು ಸಂಭವಿಸಿದ್ದು, 138 ಜನ ಸಾವನ್ನಪ್ಪಿದ್ದಾರೆ. 461 ಜನ ಅಪಘಾತಗಳಿಂದ ಗಾಯಗೊಂಡಿದ್ದಾರೆ.

WhatsApp Image 2020 05 27 at 4.49.52 AM

2020ರಲ್ಲಿ ಕೊರೊನಾದಿಂದಾಗಿ ಅಂಕಿ ಸಂಖ್ಯೆಯ ಲೆಕ್ಕದಲ್ಲಿ ಬಹಳ ವ್ಯತ್ಯಾಸವಾಗಿದೆ. ಈ ವರ್ಷ ಜನವರಿಯಿಂದ ಮೇ ವರೆಗೆ 91 ಭೀಕರ, 226 ಸಾಮಾನ್ಯ ಸೇರಿದಂತೆ ಒಟ್ಟು 226 ಅಪಘಾತಗಳು ಸಂಭವಿಸಿದೆ. ಈ ಅಪಘಾತಗಳಲ್ಲಿ 98 ಜನ ಸಾವನ್ನಪ್ಪಿದ್ದು, 317 ಜನ ಗಾಯಗೊಂಡಿದ್ದಾರೆ. ಜನವರಿ, ಫೆಬ್ರವರಿ ಮಾತ್ರ ಅಧಿಕ ಅಪಘಾತಗಳು ಸಂಭವಿಸಿದ್ದು, ಮಾರ್ಚ್‍ನಿಂದ ಅಪಘಾತ ಹಾಗೂ ಸಾವಿನ ಸಂಖ್ಯೆ ಇಳಿದಿದೆ.

ಅಪಘಾತಗಳ ಸಂಖ್ಯೆ ಲಾಕ್ ಡೌನ್ ಸಮಯದಲ್ಲಿ ಇಳಿಕೆಯಾಗಿದೆ. ಆದರೆ ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಿಂದ ವಸೂಲಿಯಾದ ದಂಡದ ಪ್ರಮಾಣ ಮಾತ್ರ ಗಣನೀಯವಾಗಿ ಹೆಚ್ಚಿದೆ. ಲಾಕ್‍ಡೌನ್ ಸಮಯದಲ್ಲಿ ಅನಗತ್ಯವಾಗಿ ಜನ ಓಡಾಡಿದ್ದರಿಂದ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. 2019ರ ಜನವರಿಯಿಂದ ಏಪ್ರಿಲ್ ವರೆಗೆ 39,547 ಪ್ರಕರಣ ದಾಖಲಾಗಿದ್ದು, 55 ಲಕ್ಷ 32 ಸಾವಿರದ 150 ರೂ. ದಂಡ ವಸೂಲಿಯಾಗಿದೆ. 2020ರ ಜನವರಿಯಿಂದ ಏಪ್ರಿಲ್ ವರೆಗೆ 25,572 ಪ್ರಕರಣಗಳು ದಾಖಲಾಗಿದ್ದು 94 ಲಕ್ಷ 77 ಸಾವಿರದ 400 ರೂಪಾಯಿ ದಂಡ ವಸೂಲಿಯಾಗಿದೆ.

RCR LOCKDOWN 1

Share This Article
Leave a Comment

Leave a Reply

Your email address will not be published. Required fields are marked *