ಉಡುಪಿ: ಮಹಾರಾಷ್ಟ್ರದಿಂದ ಬಂದು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ಒಂಬತ್ತು ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120ಕ್ಕೆ ಏರಿದೆ.
ದೃಢಪಟ್ಟ ಸೋಂಕಿತರು ಎಲ್ಲರೂ ಮುಂಬಯಿಯಿಂದ ಬಂದವರೇ ಆಗಿದ್ದಾರೆ. ಉಡುಪಿಗೆ ಬಂದು ಸರ್ಕಾರಿ, ಖಾಸಗಿ ಕ್ವಾರಂಟೈನ್ ವಾಸದಲ್ಲಿ ಇರುವವರೇ ಆಗಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಸೋಂಕಿತರ ಪೈಕಿ ಆರು ಮಂದಿ ಪುರುಷರು ಇಬ್ಬರು ಮಹಿಳೆಯರು ಮತ್ತು ಒಂಬತ್ತು ವರ್ಷದ ಬಾಲಕನಲ್ಲಿ ಕೋವಿಡ್ 19 ಇರುವುದು ಸಾಬೀತಾಗಿದೆ.
ಸೋಂಕಿತರನ್ನು ಹಂತ ಹಂತವಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಗೆ ಶಿಫ್ಟ್ ಮಾಡುತ್ತೇವೆ ಮತ್ತು ಚಿಕಿತ್ಸೆ ಆರಂಭಿಸುತ್ತೇವೆ ಎಂದು ಡಿಸಿ ಮಾಹಿತಿ ನೀಡಿದರು. ವಿದೇಶ ಮತ್ತು ಮಹಾರಾಷ್ಟ್ರದಿಂದ ಬಂದು ಹದಿನೈದು ದಿನ ಕಳೆದರೂ ಕೆಲವರ ಕ್ವಾರಂಟೈನ್ ಮುಕ್ತರಾಗಿಲ್ಲ. ವೈದ್ಯಕೀಯ ವರದಿಗಳು ಜಿಲ್ಲಾಡಳಿತದ ಕೈ ಸೇರದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿ ಮುಗಿದರೂ ದಿಗ್ಬಂಧನದಲ್ಲಿ ಇರುವ ಪರಿಸ್ಥಿತಿ ಹಲವರಿಗೆ ಉಂಟಾಗಿದೆ.