ಧಾರವಾಡದಲ್ಲಿ ಧಾರಾಕಾರ ಮಳೆ- ಧರೆಗುರುಳಿದ ಮರಗಳು, ವಾಹನಗಳು ಜಖಂ

Public TV
1 Min Read
dwd rain 2

ಧಾರವಾಡ: ಧಾರವಾಡದಲ್ಲಿ ಇಂದು ಭಾರೀ ಗಾಳಿ ಹಾಗೂ ಮಳೆಯಾಗಿದ್ದು, ಹಲವು ಅವಾಂತರ ಸೃಷ್ಟಿಸಿದೆ.

WhatsApp Image 2020 05 22 at 7.00.32 PM

ವರುಣನ ಅಬ್ಬರಕ್ಕೆ ನಗರದ ವಿವಿಧೆಡೆ ಮರಗಳು ಧರೆಗುರುಳಿದ್ದು, ಮರಗಳಡಿ ವಾಹನಗಳು ಸಿಲುಕಿ ಜಖಂ ಆಗಿವೆ. ನಗರದ ಸೈದಾಪುರ ಗೌಡರ ಓಣಿಯಲ್ಲಿ ಮನೆ ಮೇಲೆ ಮರ ಬಿದ್ದಿದ್ದು, ಸಿಬಿಟಿ ಬಳಿಯ ಅಂಜುಮನ್ ಕಾಂಪ್ಲೆಕ್ಸ್ ಎದುರು ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡೆತಡೆಯಾಯಿತು.

vlcsnap 2020 05 22 21h12m02s163

ನಗರದ ಟೊಲ್ ನಾಕಾ ರಸ್ತೆ ಮಳೆಯಿಂದ ಹಳ್ಳದಂತಾಗಿತ್ತು. ತುಂಬಿ ಹರಿಯುತ್ತಿರುವ ನೀರಿನಲ್ಲಿ ಬೈಕ್‍ಗಳು ಸಿಲುಕಿ ತೇಲುತ್ತಿದ್ದವು. ಕೆಲ ಹೊತ್ತು ಮಳೆ ನೀರು ರಸ್ತೆಗೆ ಬಂದಿದ್ದರಿಂದ ಧಾರವಾಡ-ಹುಬ್ಬಳ್ಳಿ ಮತ್ತು ಕಲಘಟಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಮಳೆಯ ಅವಾಂತರದಿಂದಾಗಿ ಧಾರವಾಡ ಜನತೆ ತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *