ಉತ್ತರ ಕರ್ನಾಟಕದಲ್ಲಿ ಎರಡು ದಿನ ಉಷ್ಣಾಂಶ ಭಾರೀ ಏರಿಕೆ

Public TV
0 Min Read
Weather

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಇನ್ನು ಎರಡು ದಿನ ಉಷ್ಣಾಂಶ ಭಾರೀ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

41-43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಲಿದೆ. ಮುಂದಿನ ಎರಡು ದಿನಗಳ ಕಾಲ ಈ ಉಷ್ಣಾಂಶ ಇರಲಿದೆ. ವಿಶೇಷವಾಗಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 3:30ರವರೆಗೆ ರೈತರು ಮತ್ತು ಜನ ಸಾಮಾನ್ಯರು ಹೊರಬರದೇ ಇರುವುದು ಉತ್ತಮ ಎಂದು ಕೇಂದ್ರ ಹವಾಮಾನ ಇಲಾಖೆ ಸಲಹೆ ನೀಡಿದೆ.

hot weather

ಸಾಧಾರಣವಾಗಿ ಮಾರ್ಚ್ ಮೊದಲ ವಾರದಿಂದೇ ಉಷ್ಣಾಂಶ ಏರಿಕೆಯಾಗುತ್ತದೆ. ಆದರೆ ಈ ಬಾರಿ ದೇಶದಲ್ಲಿ ಎಲ್ಲೂ ಜಾಸ್ತಿ ಉಷ್ಣಾಂಶ ಏರಿಕೆಯಾಗಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *