ಐ ಆ್ಯಮ್ ಬ್ಯಾಕ್- 53ರ ‘ಯುವಕ’ ಟೈಸನ್

Public TV
1 Min Read
Mike Tyson A

ವಾಷಿಂಗ್ಟನ್: 80ರ ದಶಕದಲ್ಲಿ ಬಾಕ್ಸಿಂಗ್ ಜಗತ್ತನ್ನು ಆಳಿದ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ 15 ವರ್ಷಗಳ ನಂತರ ಅಖಾಡಕ್ಕೆ ಮರಳಲಿದ್ದಾರೆ.

ಮೈಕ್ ಟೈಸನ್ ಅವರು ದೇಣಿಗೆ ನೀಡುವುದಕ್ಕಾಗಿ ಕೆಲವು ಪಂದ್ಯಗಳನ್ನು ಆಡಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಾಕ್ಸಿಂಗ್ ಅಭ್ಯಾಸದ ವಿಡಿಯೋ ಹಂಚಿಕೊಂಡು, ‘ಐ ಆ್ಯಮ್ ಬ್ಯಾಕ್’ ಎಂದು ಹೇಳಿದ್ದಾರೆ.

mike tyson

ವಿಡಿಯೋದಲ್ಲಿ ಟೈಸನ್ ಅವರ ಪಂಚಿಂಗ್ ಸ್ಟೈಲ್, ಬಿರುಸಿನ ಹೊಡೆತಗಳನ್ನು ಕಾಣಬಹುದಾಗಿದೆ. ಟೈಸನ್ ಶಕ್ತಿ ಮತ್ತು ವೇಗವನ್ನು ನೋಡಿದರೆ ಅವರು ಇನ್ನೂ ಡಬ್ಲ್ಯೂಬಿಎ, ಡಬ್ಲ್ಯೂಬಿಸಿ ಮತ್ತು ಐಬಿಎಫ್ ಪ್ರಶಸ್ತಿಗಳನ್ನು ಗೆಲ್ಲಲು ಅಭ್ಯಾಸ ಮಾಡುತ್ತಿದ್ದಾರೆ ಎನ್ನುವಂತಿದೆ.

53 ವರ್ಷದ ಟೈಸನ್ ಅವರು ಚಾರಿಟಿಗಾಗಿ ಹಣವನ್ನು ಠೇವಣಿ ನೀಡಲು ಬಯಸಿದ್ದಾರೆ. ಈ ಹಣದಿಂದ ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು, ಬಡವರಿಗೆ ಸಹಾಯ ಮಾಡಲು ಟೈಸನ್ ಮುಂದಾಗಿದ್ದಾರೆ. ಹೀಗಾಗಿ ಅವರು ಮುಂದಿನ ಪಂದ್ಯಕ್ಕಾಗಿ ನಿರಂತರ ಅಭ್ಯಾಸ ನಡೆಸಿದ್ದಾರೆ. ಟೈಸನ್ ಕೊನೆಯ ಬಾರಿಗೆ ಕೆವಿನ್ ಮೆಕ್‍ಬ್ರೈಡ್ ವಿರುದ್ಧ 2005 ರಲ್ಲಿ ಆಡಿದ್ದರು. ಅವರು ತಮ್ಮ 20 ವರ್ಷಗಳ ವೃತ್ತಿಜೀವನವನ್ನು ಸೋಲಿನೊಂದಿಗೆ ನಿಲ್ಲಿಸಿದ್ದರು. ಈ ಮತ್ತೆ ಕಮ್‍ಬ್ಯಾಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

https://www.instagram.com/p/CADjPgOl_Nw/

ಟೈಸನ್ 50 ಪಂದ್ಯಗಳನ್ನು 44 ಪಂದ್ಯಗಳಲ್ಲಿ ಗೆದ್ದಿದ್ದಾರೆ. ಅವರನ್ನು ಆಲ್ ಟೈಮ್ ಗ್ರೇಟ್ ಬಾಕ್ಸರ್ ಎಂದು ಕರೆಯಲಾಗುತ್ತದೆ. ಟೈಸನ್ 1986ರಲ್ಲಿ ಅಂದ್ರೆ ತಮ್ಮ 20ನೇ ವಯಸ್ಸಿನಲ್ಲಿ ಟ್ರೆವರ್ ಬೆಬೆರಿಚ್ ಅವರ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಕಿರಿಯ ಹೆವಿವೇಯ್ಟ್ ಚಾಂಪಿಯನ್ ಎನಿಸಿಕೊಂಡಿದ್ದರು. ಈ ದಾಖಲೆ ಇಂದಿಗೂ ಅವರ ಹೆಸರಿನಲ್ಲೇ ಇದೆ.

Share This Article
Leave a Comment

Leave a Reply

Your email address will not be published. Required fields are marked *