ಗ್ರೀನ್ ಝೋನ್ ಯಾದಗಿರಿಯಲ್ಲಿ ದಂಪತಿಗೆ ಸೋಂಕು – ಪೊಲೀಸರಿಂದ ಲಾಠಿ ಚಾರ್ಜ್ ಶುರು

Public TV
2 Min Read
YGR 5

– ರೋಗಿಗಳ ಟ್ರಾವೆಲ್ ಹಿಸ್ಟರಿ ಹೀಗಿದೆ?

ಯಾದಗಿರಿ: ಗ್ರೀನ್ ಝೋನ್ ಯಾದಗಿರಿಗೂ ಕೂಡ ಮಹಾಮಾರಿ ಕೊರೊನಾ ಕಾಲಿಟ್ಟಿದ್ದು, ಇಂದು ಒಂದೇ ದಿನ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಪೋಲಿಸರು ಫುಲ್ ಚಾರ್ಜ್ ಆಗಿದ್ದಾರೆ.

ಜಿಲ್ಲೆಯ ಸುರಪುರದ ದಂಪತಿಗೆ ಕೊರೊನಾ ಪಾಸಿಟಿವ್ ಇರುವುದು ಧೃಡಪಟ್ಟಿದೆ. ರೋಗಿ 867 ಮತ್ತು 868 ಗಂಡ- ಹೆಂಡತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಯಾದಗಿರಿಯಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಇಂದು 2 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಡಳಿತದಿಂದ ಕೊರೊನಾ ರೋಗಿಗಳ ಟ್ರಾವೆಲ್ ಹಿಸ್ಟರಿ ಬಿಡುಗಡೆ ಮಾಡಲಾಗಿದೆ.

YGR 1 3

ರೋಗಿಗಳ ಟ್ರಾವೆಲ್ ಹಿಸ್ಟರಿ ಹೀಗಿದೆ.
ಮಾರ್ಚ್ ತಿಂಗಳಲ್ಲಿ ಗುಜರಾತಿನ ಅಹಮದಾಬಾದ್ ನಗರಕ್ಕೆ ಸುರಪುರದ ಮೂವರು ತೆರಳಿದ್ದರು. ಲಾಕ್‍ಡೌನ್‍ನಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಮೇ 9 ರಂದು ಒಂದು ಲಾರಿಯ ಮೂಲಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೈವೇ ರಸ್ತೆಯಲ್ಲಿ ಬಂದಿಳಿದಿದ್ದಾರೆ. ಅಲ್ಲಿಂದ ಕಾರಿನ ಮೂಲಕ ಸುರಪುರ ತಾಲೂಕಿನ ಜ್ವರ ತಪಾಸಣಾ ಕೇಂದ್ರಕ್ಕೆ ನೇರವಾಗಿ ಆಗಮಿಸಿದ್ದಾರೆ. ಮೂವರ ಜೊತೆಗೆ ಒಬ್ಬ ವಾಹನ ಚಾಲಕನ ಆರೋಗ್ಯ ತಪಾಸಣೆ ಕೈಗೊಂಡು ಗಂಟಲಿನ ದ್ರವವನ್ನು ಸಂಗ್ರಹಿಸಲಾಗಿದೆ.

ಒಟ್ಟು ನಾಲ್ವರ ಗಂಟಲಿನ ದ್ರವವನ್ನು ಕೋವಿಡ್-19 ಪರೀಕ್ಷೆಗಾಗಿ ಕಲಬುರಗಿಗೆ ಕಳುಹಿಸಲಾಗಿತ್ತು. ಇವರ ಪೈಕಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇನ್ನುಳಿದ ಇಬ್ಬರದು ನೆಗೆಟಿವ್ ಬಂದಿದೆ. ಇದೀಗ ಎಲ್ಲರನ್ನೂ ಯಾದಗಿರಿ ನಗರದ ಹೊರ ವಲಯದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

vlcsnap 2020 05 12 13h49m29s33

ಪೊಲೀಸರಿಂದ ಲಾಠಿ ಚಾರ್ಜ್ ಆರಂಭ:
ಸುರಪುರದಲ್ಲಿ ಒಂದೇ ದಿನ ಎರಡು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೋಲಿಸರು ಫುಲ್ ಚಾರ್ಜ್ ಆಗಿದ್ದಾರೆ. ಈಗಾಗಲೇ ಸುರಪುರ ಪಟ್ಟಣ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಸೀಲ್‍ಡೌನ್ ನಿಯಮ ಉಲ್ಲಂಘನೆ ಮಾಡಿ ಸುರಪುರನಲ್ಲಿ ಜನರ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಪೊಲೀಸರು ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುತ್ತಿರುವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಇದು ಹೊಸ ತಲೆ ನೋವಾಗಿ ಪರಿಣಾಮಿಸಿದೆ. ಹೀಗಿದ್ದರೂ ಸೀಲ್‍ಡೌನ್ ಆದೇಶ ಉಲ್ಲಂಘನೆ ಮಾಡಿ ಜನರ ಸಂಚಾರ ಮಾಡುತ್ತಿದ್ದಾರೆ. ಇದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಗರದ ವಿವಿಧೆಡೆ ಸಂಚಾರ ಮಾಡಿ ಜನರನ್ನು ಮನೆಗೆ ಕಳುಹಿಸಲು ಪೊಲೀಸರು ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *