ಹೋಟೆಲ್‌ನಲ್ಲಿ ಕ್ವಾರಂಟೈನ್- ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್

Public TV
1 Min Read
SMG HOTEL 1

ಚಿಕ್ಕಮಗಳೂರು: ಹೋಟೆಲ್‍ನ ಕ್ವಾರಂಟೈನ್ ಘಟಕ ಮಾಡುತ್ತಾರೆಂದು ವಿಷಯ ತಿಳಿದು ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಕೋಟೆ ಬಡಾವಣೆಯಲ್ಲಿರೋ ವೈಟ್ ಫೆದರ್ ಹೋಟೆಲ್‍ನಲ್ಲಿ ವಿದೇಶ ಹಾಗೂ ಹೊರರಾಜ್ಯ ಬಂದ ಪ್ರಯಾಣಿಕರಿಗೆ ಕ್ವಾರಂಟೈನ್ ಘಟಕಕ್ಕೆ ಜಿಲ್ಲಾಡಳಿತ ಚಿಂತಿಸಿತ್ತು. ಈ ವಿಷಯ ತಿಳಿದ ಕೂಡಲೇ ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇತ್ತ ಈ ಹೋಟೆಲ್‍ನಲ್ಲಿ ಕ್ವಾರಂಟೈನ್ ಘಟಕ ಮಾಡಲು ಸ್ಥಳೀಯರು ಕೂಡ ವಿರೋಧ ವ್ಯಕ್ತಪಡಿಸಿ ಇಲ್ಲ ಕ್ವಾರಂಟೈನ್ ಮಾಡೋದು ಬೇಡ ಎಂದಿದ್ದಾರೆ.

SMG HOTEL

ನಗರದೊಳಗಿರುವ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡೋದು ಬೇಡ. ಇದು ಜನವಸತಿ ಪ್ರದೇಶ ಮಕ್ಕಳು, ವಯೋವೃದ್ಧರು ಓಡಾಡುತ್ತಾರೆ. ಆದ್ದರಿಂದ ಇಲ್ಲಿ ಕ್ವಾರಂಟೈನ್ ಮಾಡೋದು ಬೇಡ. ಕ್ವಾರಂಟೈನ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ನಗರದ ಹೊರಭಾಗದಲ್ಲೂ ಸಾಕಷ್ಟು ಹೋಟೆಲ್, ಹೋಂ ಸ್ಟೇ, ರೆಸಾರ್ಟ್‍ಗಳಿವೆ ಅಲ್ಲಿ ಕ್ವಾರಂಟೈನ್ ಮಾಡಿ. ನಗರದೊಳಗಿನ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಿದರೆ ಜನರಲ್ಲಿರುವ ಆತಂಕ ಹೆಚ್ಚಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಹೋಟೆಲ್ ಮುಂಭಾಗದ ಮೆಟ್ಟಿಲುಗಳ ಮೇಲೆ ಕೂತು ಪ್ರತಿಭಟನೆ ಕೂಡ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *