ಮುಂಬೈ: 10 ಕೆ.ಜಿ ಚಿನ್ನ ಧರಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಗೋಲ್ಡ್ ಮ್ಯಾನ್ 39 ವರ್ಷದ ಸಾಮ್ರಾಟ್ ಮೊಜ್ ಹೃದಯಾಘಾತದಿಂದ ಇತ್ತೀಚೆಗಷ್ಟೆ ನಿಧನರಾಗಿದ್ದಾರೆ.
ಸಾಮ್ರಾಟ್‍ಗೆ ಹೃದಯಾಘಾತವಾಗಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊರೊನಾನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಶನಿವಾರ ಸಾಮ್ರಾಟ್ ಅಂತಿಮ ವಿಧಿ-ವಿಧಿಗಳನ್ನು ಪುಣೆಯ ಯರವಾಡದಲ್ಲಿ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಕೆಲವೇ ಜನರು ಹಾಜರಿದ್ದರು.
ಮೃತ ಸಾಮ್ರಾಟ್ ನಗರದ ಪ್ರಸಿದ್ಧ ಉದ್ಯಮಿಯಾಗಿದ್ದು, ಸುಮಾರು 8 ರಿಂದ 10 ಕೆ.ಜಿ ಚಿನ್ನವನ್ನು ಧರಿಸುತ್ತಿದ್ದರು. ಕುತ್ತಿಗೆಯಲ್ಲಿ ದಪ್ಪ ದಪ್ಪ ಸರಗಳು, ಕೈಯಲ್ಲಿ ದಪ್ಪದ ಬ್ರಾಸ್‍ಲೈಟ್ ಮತ್ತು ವಿವಿಧ ರೀತಿ ಉಂಗುರಗಳನ್ನು ಧರಿಸಿಕೊಂಡು ತಿರುಗಾಡುತ್ತಿದ್ದರು. ಹೀಗಾಗಿ ಜನರು ‘ಗೋಲ್ಡ್ ಮ್ಯಾನ್’ ಎಂಬ ಕರೆಯುತ್ತಿದ್ದರು.
ಇತ್ತೀಚೆಗಷ್ಟೆ ಸಾಮ್ರಾಟ್ ತಮ್ಮ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯ ತೆರೆಯಲಾಗಿದೆ ಎಂದು ಪುಣೆ ಪೊಲೀಸರಿಗೆ ದೂರು ನೀಡಿದ್ದರು. ಸಾಮ್ರಾಟ್ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಅಗಲಿದ್ದಾರೆ. ಸಾಮ್ರಾಟ್‍ರಂತೆ 9-10 ಕೆ.ಜಿ ಚಿನ್ನವನ್ನು ಧರಿಸುತ್ತಿದ್ದ ಉದ್ಯಮಿಗಳಿದ್ದಾರೆ.
ಎಂಎನ್‍ಎಸ್ ಶಾಸಕ ರಮೇಶ್ ಎಂಬವರು ಕೂಡ ಇದೇ ರೀತಿ ಚಿನ್ನ ಧರಿಸುತ್ತಿದ್ದರು. 2011ರಲ್ಲಿ ರಮೇಶ್ ಹೃದಯಾಘಾದಿಂದ ಮೃತಪಟ್ಟಿದ್ದಾರೆ. ಇನ್ನೂ ದತ್ತಾತ್ರೇಯ ಪುಂಗೆ ಎಂಬವರು ‘ಚಿನ್ನದ ಅಂಗಿಯನ್ನು’ ಧರಿಸುವ ಮೂಲಕ ಹೆಸರುವಾಸಿಯಾಗಿದ್ದರು. ಇವರು ಧರಿಸುತ್ತಿದ್ದ ಅಂಗಿ ಸುಮಾರು 3.5 ಕಿ.ಗ್ರಾಂ ತೂಕವಿತ್ತು. 1.29 ಕೋಟಿ ಮೌಲ್ಯದ ಅಂಗಿಯನ್ನು ಇವರು 2012ರಲ್ಲಿ ಖರೀದಿಸಿದ್ದರು. ದುರದೃಷ್ಟವಶಾತ್ ಜುಲೈ 2016ರಲ್ಲಿ ದುರ್ಷ್ಕಮಿಗಳು ಕೊಲೆ ಮಾಡಿದ್ದಾರೆ.