ಪೇದೆ ವರದಿ ನೆಗೆಟಿವ್- ಆರೋಗ್ಯ ಇಲಾಖೆ ಎಡವಟ್ಟಿಗೆ ಶಾಸಕ ನರೇಂದ್ರ ಆಕ್ರೋಶ

Public TV
1 Min Read
MLA

ಚಾಮರಾಜನಗರ: ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಪೊಲೀಸ್ ಪೇದೆ ಕೊರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಟೆಸ್ಟ್ ನಡೆದರೂ ವರದಿ ನೆಗೆಟಿವ್ ಬಂದಿದೆ. ಇದರಿಂದ ಚಾಮರಾಜನಗರಕ್ಕೆ ಒಂದು ಬಿಗ್ ರಿಲೀಫ್ ಕೂಡ ಸಿಕ್ಕಿದ್ದು, ಆದರೆ ಶಾಸಕ ನರೇಂದ್ರ ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ಆಸ್ಪತ್ರೆ, ಲ್ಯಾಬ್ ಗಳಲ್ಲಿ ನಡೆಯುತ್ತಿರೋ ಟೆಸ್ಟ್ ಗಳಿಂದ ಎಡವಟ್ಟಾಗ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ. ಪೊಲೀಸ್ ಪೇದೆ ವರದಿ ಪಾಸಿಟಿವ್ ಬಂದ ತಕ್ಷಣ ಎಲ್ಲರಿಗೂ ಆತಂಕವಿತ್ತು. ಕೊರೊನಾ ಮುಕ್ತ ಚಾಮರಾಜನಗರಕ್ಕೆ ಕೊರೊನಾ ಎಂಟ್ರಿ ಕೊಡುತ್ತಾ ಅನ್ನೋ ಪ್ರಶ್ನೆ ಮೂಡಿತ್ತು. ಆ ವರದಿಯ ನಂತರ ಚಾಮರಾಜನಗರದ ಹನೂರು ತಾಲೂಕಿನ ಬೆಳ್ತೂರು, ಉದ್ದನೂರು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

5877475 012420 wls coronavirus 10p vid

ಯಾರು ಕೂಡ ಊರಿನಿಂದ ಹೊರಬಾರದಂತೆ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೆ ಪೇದೆ ಪ್ರಾಥಮಿಕ, ಸೆಕೆಂಡರಿ ಸಂಪರ್ಕ ಹೊಂದಿದವರನ್ನು ಅಂಬೇಡ್ಕರ್ ಭವನದಲ್ಲಿ ಕ್ವಾರಂಟೈನ್ ಗೆ ಒಳಪಡಿಸಬೇಕಾಯಿತು. 9 ತಿಂಗಳ ಪುಟ್ಟ ಮಗುವಿನಿಂದ ವಯೋವೃದ್ಧರು ಕೂಡ ಕೊರೊನಾ ಭೀತಿಗೆ ಒಳಗಾಗಿದ್ದರು.

ಬೆಳ್ತೂರು ಗ್ರಾಮಸ್ಥರನ್ನು ಭಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವರದಿ ನೆಗೆಟಿವ್ ಬಂದಿರುವುದರಿಂದ ಸಮಾಧಾನ ಸಿಕ್ಕಿದೆ. ಆದರೆ ಇಷ್ಟೊಂದು ಆತಂಕಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದರು.

mla 1

ಲ್ಯಾಬ್ ಟೆಸ್ಟ್ ಗೆ ಒಳಗಾಗಿದ್ದರು ಕೂಡ ಸರ್ಕಾರಿ ನೌಕರನಿಗೆ ತಪ್ಪು ಎಸಗಿರೋ ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಪೊಲೀಸ್ ಎಂಬ ಏಕೈಕ ಕಾರಣದಿಂದ ಚೆಕ್ ಪೋಸ್ಟ್ ದಾಟಿ ಬರಲೂ ನೆರವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಪರವಾನಿಗೆ ಇಲ್ಲದೆ ಬರುವವರನ್ನು ಯಾವುದೇ ಕಾರಣಕ್ಕೂ ಜಿಲ್ಲೆಯ ಒಳಗಡೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *