ಮುಂಬೈ: ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಬಡವರಿಗೆ ಸಹಾಯ ಮಾಡಿದವರಿಗೆ ತಮ್ಮ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯೋ ಚಾನ್ಸ್ ಸಿಗುತ್ತೆ ಎಂದಿದ್ದಾರೆ.
ಹೌದು. ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋಪ್ರಾ ಅಬಿಮಾನಿಗಳಿಗೆ ಒಂದು ಸ್ಪೆಷಲ್ ಅವಕಾಶ ನೀಡಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡುವುದು ಅಥವಾ ಯಾವುದೇ ಸಹಾಯ ಮಾಡಿದರೆ ಅವರೊಂದಿಗೆ ಪರಿಣಿತಿ ಚೋಪ್ರಾ ಕಾಫಿ ಕುಡಿಯುತ್ತಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪರಿಣಿತಿ, ವೆಬ್‍ಲಿಂಕ್ ಒಂದನ್ನು ನೀಡಿ ಅದಕ್ಕೆ ಲಾಗಿನ್ ಆಗಿ ದಿನಗೂಲಿ ನೌಕರರಿಗೆ ಸಹಾಯ ಮಾಡಿ ನನ್ನೊಂದಿಗೆ ಕಾಫಿ ಡೇಟ್ ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ.
https://www.instagram.com/p/B_1m88KFfVI/
ವರ್ಚುಯಲ್ ಕಾಫಿ ಡೇಟ್:
ಐಡಿಯಾ ಏನೋ ಚೆನ್ನಾಗಿದೆ. ಆದ್ರೆ ಲಾಕ್‍ಡೌನ್‍ನಲ್ಲಿ ಹೇಗಪ್ಪಾ ಪರಿಣಿತಿ ಜೊತೆ ಕಾಫಿ ಕುಡಿಯೋದು? ಹೋಟೆಲ್, ರೆಸ್ಟೋರೆಂಟ್‍ಗಳೆಲ್ಲಾ ತೆರೆದಿಲ್ಲವಲ್ಲಾ ಅಂತ ಪ್ರಶ್ನೆ ಕಾಡೋದು ಸಾಮಾನ್ಯ. ಇದಕ್ಕೆ ಉತ್ತರ ವರ್ಚುಯಲ್ ಡೇಟ್. ಪರಿಣಿತಿ ಜೊತೆ ಕಾಫಿ ಡೇಟ್ ವರ್ಚುಯಲ್ ಆಗಿರಲಿದೆ. ಅಂದರೆ ಪರಿಣಿತಿ ಮತ್ತು ಸಹಾಯ ಮಾಡಿದ ವ್ಯಕ್ತಿ ಅಂತರ್ಜಾಲದ ಮೂಲಕವೇ ಜೊತೆಯಾಗಿ ಕಾಫಿ ಸವಿಯುತ್ತಾ ಕೆಲ ಸಮಯ ಕಳೆಯಲಿದ್ದಾರೆ.
ಪರಿಣಿತಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆಂದೇ ಅವರು ಈ ಕಾಫಿ ಡೇಟ್ ಐಡಿಯಾ ಮುಂದೆ ತಂದಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಸಹಾಯ ಮಾಡಿದವರು ಪರಿಣಿತಿ ಜೊತೆ ವರ್ಚುಯಲ್ ಕಾಫಿ ಕುಡಿಯಬಹುದಾಗಿದೆ.
ಪರಿಣಿತಿ ಅಭಿನಯದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಸಂದೀಪ್-ಪಿಂಕಿ ಫರಾರ್, ಸೈನಾ, ಲೂಡೋ, ಇಂದೂ ಕಿ ಜವಾನಿ, ಶಕುಂತಲಾ ದೇವಿ, ಕೋಡ್ ನೇಮ್ ಅಬ್ದುಲ್ ಸಿನಿಮಾಗಳು ಲಾಕ್‍ಡೌನ್ ಮುಕ್ತಾಯಗೊಂಡ ಬಳಿಕ ತೆರೆಕಾಣಲಿದೆ ಎನ್ನಲಾಗಿದೆ.