ಇಂದು 19 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 692ಕ್ಕೇರಿಕೆ

Public TV
3 Min Read
Corona news

-ಬಾಗಲಕೋಟೆಯಲ್ಲಿ ಗರ್ಭಿಣಿಯಿಂದ 13 ಮಂದಿಗೆ ಕೊರೊನಾ ಸೋಂಕು
-ಬೆಂಗಳೂರಿನ ಡೆಲಿವರಿ ಬಾಯ್‍ಗೆ ಕೊರೊನಾ

ಬೆಂಗಳೂರು: ಇಂದು 19 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 692ಕ್ಕೇರಿಕೆಯಾಗಿದೆ. ಇಂದು ಒಂದೇ ದಿನ ಬಾಗಲಕೋಟೆಯಲ್ಲಿ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ಬಾಗಲಕೋಟೆಯಲ್ಲಿ 13, ಬೆಂಗಳೂರು 2, ದಕ್ಷಿಣ ಕನ್ನಡ 3 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿ (ರೋಗಿ 607)ಯಿಂದಲೇ 13 ಮಂದಿಗೆ ಸೋಂಕು ತಗುಲಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

Corona new a

ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನಿ(ರೋಗಿ ನಂಬರ್ 654)ಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡೋದು ಮತ್ತು ಆತನ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Karnataka Corona

ಸೋಂಕಿತರ ವಿವರ:
1. ರೋಗಿ 674: ದಕ್ಷಿಣ ಕನ್ನಡದ 11 ವರ್ಷದ ಬಾಲಕಿ. ರೋಗಿ ನಂಬರ್ 536ರ ಜೊತೆ ಸಂಪರ್ಕ
2. ರೋಗಿ 675: ದಕ್ಷಿಣ ಕನ್ನಡದ 35 ವರ್ಷದ ಮಹಿಳೆ. ರೋಗಿ 536ರ ಜೊತೆ ಸಂಪರ್ಕದಲ್ಲಿದ್ದರು.
3. ರೋಗಿ 676: ದಕ್ಷಿಣ ಕನ್ನಡದ ಬಂಟ್ವಾಳದ 16 ವರ್ಷದ ಬಾಲಕಿ. ರೋಗಿ ನಂಬರ್ 390ರ ಜೊತೆ ಸಂಪರ್ಕ
4. ರೋಗಿ 677: ಬೆಂಗಳೂರಿನ 40 ವರ್ಷದ ಮಹಿಳೆ. ರೋಗಿ ನಂಬರ್ 654ರ ಜೊತೆ ಸಂಪರ್ಕದಲ್ಲಿದ್ದರು.
5. ರೋಗಿ 678: ಬೆಂಗಳೂರಿನ 25 ವರ್ಷದ ಯುವಕ. ರೋಗಿ ನಂಬರ್ 654ರ ಜೊತೆ ಸಂಪರ್ಕದಲ್ಲಿದ್ದರು.
6. ರೋಗಿ 679: ಕಲಬುರಗಿಯ 52 ವರ್ಷದ ಪುರುಷ. ರೋಗಿ 610ರ ಜೊತೆ ಸಂಪರ್ಕದಲ್ಲಿದ್ದರು.
7. ರೋಗಿ 680: ಬಾಗಲಕೋಟೆಯ ಬದಾಮಿ ತಾಲೂಕಿನ 18 ವರ್ಷದ ಯುವತಿ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
8. ರೋಗಿ 681: ಬಾಗಲಕೋಟೆಯ ಬದಾಮಿ ತಾಲೂಕಿನ 45 ವರ್ಷದ ಪುರುಷ. ರೋಗಿ ನಂಬರ್ 607ರ ಜೊತೆ ಸಂಪರ್ಕ.
9. ರೋಗಿ 682: ಬಾಗಲಕೋಟೆಯ ಬದಾಮಿ ತಾಲೂಕಿನ 55 ವರ್ಷದ ಪುರುಷ. ರೋಗಿ ನಂಬರ್ 607ರ ಜೊತೆ ಸಂಪರ್ಕ.
10. ರೋಗಿ 683: ಬಾಗಲಕೋಟೆಯ ಬದಾಮಿ ತಾಲೂಕಿನ 26 ವರ್ಷದ ಯುವಕ. ರೋಗಿ ನಂಬರ್ 607ರ ಜೊತೆ ಸಂಪರ್ಕ.

Corona Virus

11. ರೋಗಿ 684: ಬಾಗಲಕೋಟೆಯ ಬದಾಮಿ ತಾಲೂಕಿನ 47 ವರ್ಷದ ಪುರುಷ. ರೋಗಿ ನಂಬರ್ 607ರ ಜೊತೆ ಸಂಪರ್ಕ.
12. ರೋಗಿ 685: ಬಾಗಲಕೋಟೆಯ ಬದಾಮಿ ತಾಲೂಕಿನ 30 ವರ್ಷದ ಮಹಿಳೆ. ರೋಗಿ ನಂಬರ್ 607ರ ಜೊತೆ ಸಂಪರ್ಕ.
13. ರೋಗಿ 686: ಬಾಗಲಕೋಟೆಯ ಬದಾಮಿ ತಾಲೂಕಿನ 15 ವರ್ಷದ ಬಾಲಕ. ರೋಗಿ ನಂಬರ್ 607ರ ಜೊತೆ ಸಂಪರ್ಕ.
14. ರೋಗಿ 687: ಬಾಗಲಕೋಟೆಯ ಬದಾಮಿ ತಾಲೂಕಿನ 40 ವರ್ಷದ ಮಹಿಳೆ. ರೋಗಿ ನಂಬರ್ 607ರ ಜೊತೆ ಸಂಪರ್ಕ.
15. ರೋಗಿ 688: ಬಾಗಲಕೋಟೆಯ ಬದಾಮಿ ತಾಲೂಕಿನ 23 ವರ್ಷದ ಯುವಕ. ರೋಗಿ ನಂಬರ್ 607ರ ಜೊತೆ ಸಂಪರ್ಕ.
16. ರೋಗಿ 689: ಬಾಗಲಕೋಟೆಯ ಬದಾಮಿ ತಾಲೂಕಿನ 10 ವರ್ಷದ ಬಾಲಕ. ರೋಗಿ ನಂಬರ್ 607ರ ಜೊತೆ ಸಂಪರ್ಕ.
17. ರೋಗಿ 690: ಬಾಗಲಕೋಟೆಯ ಬದಾಮಿ ತಾಲೂಕಿನ 32 ವರ್ಷದ ಪುರುಷ.ರೋಗಿ ನಂಬರ್ 607ರ ಜೊತೆ ಸಂಪರ್ಕ.
18. ರೋಗಿ 691: ಬಾಗಲಕೋಟೆಯ ಬದಾಮಿ ತಾಲೂಕಿನ 30 ವರ್ಷದ ಮಹಿಳೆ. ರೋಗಿ ನಂಬರ್ 607ರ ಜೊತೆ ಸಂಪರ್ಕ.
19. ರೋಗಿ 692: ಬಾಗಲಕೋಟೆಯ ಬದಾಮಿ ತಾಲೂಕಿನ 16 ವರ್ಷದ ಬಾಲಕಿ. ರೋಗಿ ನಂಬರ್ 607ರ ಜೊತೆ ಸಂಪರ್ಕ.

Bagalkot danakashiruru Sealdown

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ.

Bagalkot danakashiruru Sealdown 1

ಮೂರು ದಿನಗಳ ಹಿಂದೆ ಡಾಣಕಶಿರೂರು ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದ್ರೆ ಗರ್ಭಿಣಿಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಇದುವರೆಗೂ ಪತ್ತೆಯಾಗಿಲ್ಲ. ಗರ್ಭಿಣಿಗೆ ಸೋಂಕು ತಗುಲಿರುವ ವಿಷಯ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ ಕೆಲವು ದಿನಗಳ ಹಿಂದೆ ನಡೆದ ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮದ ಬಹುತೇಕರು ಭಾಗಿಯಾಗಿದ್ದರು. ಗರ್ಭಿಣಿಯ ಪತಿ ಸಾಂಪ್ರದಾಯಿಕ ಕಜ್ಜಾಯ ಭಿಕ್ಷೆಗಾಗಿ ಗ್ರಾಮದ ಪ್ರತಿ ಪ್ರತಿ ಮನೆಗಳಿಗೂ ತೆರಳಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *