-ಇವತ್ತು ಏಳು ಮಂದಿಗೆ ಕೊರೊನಾ ಸೋಂಕು
-ದಾವಣಗೆರೆಯಲ್ಲಿ ಒಬ್ಬರಿಂದಲೇ 19 ಮಂದಿಗೆ ಸೋಂಕು
-ಮಂಡ್ಯಕ್ಕೆ ತಪ್ಪದ ಮುಂಬೈ ಕಂಟಕ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದ್ದು, ದಾವಣಗೆರೆಯಲ್ಲಿ ಒಬ್ಬರಿಂದಲೇ 19 ಮಂದಿಗೆ ಸೋಂಕು ತಗುಲಿರುವ ಆಘಾತಕಾರಿ ವಿಷಯ ಹೊರ ಬಿದ್ದಿದೆ. ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠು ನಡೆಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲೆಯ 21 ಜನರಿಗೆ ಸೋಂಕು ತಗುಲಿದೆ ಎಂಬುದನ್ನು ದೃಢಪಡಿಸಿದ್ದರು. ಇಂದು ಸೋಂಕಿತರ ಮಾಹಿತಿಯನ್ನು ಆರೋಗ್ಯ ಇಲಾಖೆ ಮಾಧ್ಯಮ ಬುಲೆಟಿನ್ ನಲ್ಲಿ ತಿಳಿಸಿದೆ.
ಇನ್ನುಳಿದಂತೆ ಇಂದು ಮಂಡ್ಯ 2, ಕಲಬುರಗಿಯಲ್ಲಿ 2, ಹಾವೇರಿ, ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಮಂಡ್ಯ ಜಿಲ್ಲೆಯ ಮುಂಬೈ ಕಂಟಕ ಎದುರಾಗಿದ್ದು, ಆಟೋ ಚಾಲಕನ ಸಂಪರ್ಕದಲ್ಲಿದ್ದ ಇಬ್ಬರು ಯುವತಿಯರಿಗೆ ಸೋಂಕು ತಗುಲಿದೆ. ಇನ್ನು ಲಾಕ್‍ಡೌನ್ ಸಡಿಲಿಕೆಯ ಮೊದಲ ದಿನವೇ ಇಷ್ಟು ಗ್ರೀನ್ ಝೋನ್ ನಲ್ಲಿದ್ದ ಹಾವೇರಿಯಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿಯ ಸೋಂಕಿತ ಇಬ್ಬರು ಸ್ನೇಹಿತರ ಜೊತೆ ಮುಂಬೈನಿಂದ ಲಾರಿಯಲ್ಲಿ ಬಂದಿದ್ದನು. ಜಿಲ್ಲಾಡಳಿತ ಇನ್ನಿಬ್ಬರ ವರದಿಗಾಗಿ ಕಾಯುತ್ತಿದೆ.
ಕೋವಿಡ್19: 04/05/2020 ರ ಬೆಳಗ್ಗೆ ವರೆಗಿನ ಮಾಹಿತಿ
ಒಟ್ಟು ದಾಖಲಿತ ಪ್ರಕರಣಗಳು:642
ಮೃತಪಟ್ಟವರು : 26
ಗುಣಮುಖರಾಗಿ ಬಿಡುಗಡೆಗೊಂಡವರು: 304
ಹೊಸ ಪ್ರಕರಣಗಳು: 28#KarnatakaFightsCorona #IndiaFightsCarona pic.twitter.com/Stqx6GvMFo
— B Sriramulu (@sriramulubjp) May 4, 2020
ಸೋಂಕಿತರ ವಿವರ:
1. ರೋಗಿ-615: ದಾವಣಗೆರೆಯ 30 ವರ್ಷದ ಪುರುಷ. ರೋಗಿ 556ರ ಜೊತೆ ಸಂಪರ್ಕದಲ್ಲಿದ್ದರು.
2. ರೋಗಿ-616: ದಾವಣಗೆರೆಯ 52 ವರ್ಷದ ಮಹಿಳೆ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
3. ರೋಗಿ 617: ದಾವಣಗೆರೆಯ 38 ವರ್ಷದ ಪುರುಷ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
4. ರೋಗಿ 618: ದಾವಣಗೆರೆಯ 32 ವರ್ಷದ ಮಹಿಳೆ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
5. ರೋಗಿ 619: ದಾವಣಗೆರೆಯ 35 ವರ್ಷದ ಪುರುಷ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
6. ರೋಗಿ 620: ದಾವಣಗೆರೆಯ 32 ವರ್ಷದ ಮಹಿಳೆ ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
7. ರೋಗಿ 621: ದಾವಣಗೆರೆಯ 12 ವರ್ಷದ ಬಾಲಕಿ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
8. ರೋಗಿ 622: ದಾವಣಗೆರೆಯ 7 ವರ್ಷದ ಬಾಲಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
9. ರೋಗಿ 623: ದಾವಣಗೆರೆಯ 38 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
10. ರೋಗಿ 624: ದಾವಣಗೆರೆಯ 49 ವರ್ಷದ ಮಹಿಳೆ. ರೋಗಿ 556ರ ಜೊತೆ ಸಂಪರ್ಕದಲ್ಲಿದ್ದರು.
11. ರೋಗಿ 625: ದಾವಣಗೆರೆಯ 27 ವರ್ಷದ ಯುವಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
12. ರೋಗಿ 626: ದಾವಣಗೆರೆಯ 25 ವರ್ಷದ ಯುವಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
13. ರೋಗಿ 627: ದಾವಣಗೆರೆಯ 33 ವರ್ಷದ ಪುರುಷ. ರೋೀಗಿ 533ರ ಜೊತೆ ಸಂಪರ್ಕದಲ್ಲಿದ್ದರು.
14. ರೋಗಿ 628: ದಾವಣಗೆರೆಯ 62 ವರ್ಷದ ಮಹಿಳೆ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
15. ರೋಗಿ 629: ದಾವಣಗೆರೆಯ 34 ವರ್ಷದ ಮಹಿಳೆ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
16. ರೋಗಿ 630: ದಾವಣಗೆರೆಯ 20 ವರ್ಷದ ಯುವತಿ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
17. ರೋಗಿ 631: ದಾವಣಗೆರೆಯ 22 ವರ್ಷದ ಯುವಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
18. ರೋಗಿ 632: ದಾವಣಗೆರೆಯ 6 ವರ್ಷದ ಬಾಲಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
19. ರೋಗಿ 633: ದಾವಣಗೆರೆಯ 17 ವರ್ಷದ ಯುವಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
20. ರೋಗಿ 634: ದಾವಣಗೆರೆಯ 42 ವರ್ಷದ ಪುರುಷ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
21. ರೋಗಿ 635: ದಾವಣಗೆರೆಯ 11 ವರ್ಷದ ಬಾಲಕ. ರೋಗಿ 533ರ ಜೊತೆ ಸಂಪರ್ಕದಲ್ಲಿದ್ದರು.
22. ರೋಗಿ 636: ಚಿಕ್ಕಬಳ್ಳಾಪುರದ 30 ವರ್ಷದ ಪುರುಷ. ರೋಗಿ ನಂಬರ್ 586ರ ಜೊತೆ ಸಂಪರ್ಕದಲ್ಲಿದ್ದರು.
23. ರೋಗಿ 637: ಮಂಡ್ಯದ 20 ವರ್ಷದ ಯುವತಿ. ಮುಂಬೈ ಟ್ರಾವೆಲ್ ಹಿಸ್ಟರಿ
24. ರೋಗಿ 638: ಮಂಡ್ಯದ 19 ವರ್ಷದ ಯುವತಿ. ಮುಂಬೈ ಟ್ರಾವೆಲ್ ಹಿಸ್ಟರಿ
25. ರೋಗಿ 639: ಹಾವೇರಿ ಜಿಲ್ಲೆಯ ಸವಣೂರಿನ 32 ವರ್ಷದ ಪುರುಷ. ಮುಂಬೈ ಟ್ರಾವೆಲ್ ಹಿಸ್ಟರಿ.
26. ರೋಗಿ 640: ವಿಜಯಪುರದ 62 ವರ್ಷದ ಮಹಿಳೆ. ರೋಗಿ 228ರ ದ್ವಿತೀಯ ಸಂಪರ್ಕದಲ್ಲಿದ್ದರು.
27. ರೋಗಿ 641: ಕಲಬುರಗಿಯ 36 ವರ್ಷದ ಮಹಿಳೆ. ರೋಗಿ 604ರ ಸಂಪರ್ಕದಲ್ಲಿದ್ದರು.
28. ರೋಗಿ 642: ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯ 37 ವರ್ಷದ ಪುರುಷ. ಹೈದರಾಬಾದ್ ಟ್ರಾವೆಲ್ ಹಿಸ್ಟರಿ.
ಕಲಬುರಗಿ ಜಿಲ್ಲೆಯ 56 ವರ್ಷದ ವ್ಯಕ್ತಿ (ರೋಗಿ ನಂಬರ್ 587) ಇಂದು ನಿಧನ ಹೊಂದಿದ್ದರು. ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ 29.04.2020ರಂದು ಕಲಬುರಗಿಯ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇಂದು ಆಸ್ಪತ್ರೆಯಲ್ಲಿ ಕೊರೊನಾದಿದ ಗುಣಮುಖರಾಗಿ 11 ಮಂದ ಡಿಸ್ಚಾರ್ಜ್ ಆಗಿದ್ದಾರೆ.