ಲಾಕ್‍ಡೌನ್ ಹೊಸ ಗೈಡ್‍ಲೈನ್ಸ್- ಐಟಿ, ಬಿಟಿಯವರು ಪಾಸ್ ಪಡೆಯುವುದು ಕಡ್ಡಾಯ

Public TV
1 Min Read
Police

– ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಸಂಚರಿಸಲು ಮಾತ್ರ ಅವಕಾಶ
– ನೌಕರರು/ಕಾರ್ಮಿಕರಿಗೆ ಮಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಲಾಕ್‍ಡೌನ್ ನಿಯಮಗಳನ್ನು ಪರಿಷ್ಕರಿಸಿದ್ದು, ಹತ್ತು ಹಲವು ಮಾರ್ಪಾಡುಗಳನ್ನು ಮಾಡಿದೆ. ಐಟಿ, ಬಿಟಿ ಕಂಪನಿ ಉದ್ಯೋಗಿಗಳಿಗೆ ಪಾಸ್, ಸಾರ್ವಜನಿಕರ ಸಂಚಾರದ ಸಮಯ ಸೇರಿದಂತೆ ವಿವಿಧ ಬದಲಾವಣೆಗಳನ್ನು ಮಾಡಿದೆ.

LockDown Police 1

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರವನ್ನು ಒಂದೇ ಯೂನಿಟ್ ಎಂದು ಪರಿಗಣಿಸಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಾರ್ವಜನಿಕರಿಗೆ ಸಂಚಾರಕ್ಕೆ ಕಲ್ಪಿಸಿದೆ. ರಾತ್ರಿ ಆಫೀಸ್‍ಗೆ ಹೋಗುವವರು ಕಚೇರಿಯಿಂದ ಲೆಟರ್ ಹೆಡ್ ಹಾಗೂ ಐಡಿ ಕಾರ್ಡ್‍ಗಳನ್ನು ಹೊಂದುವುದು ಕಡ್ಡಾಯವಾಗಿದೆ. ಈ ಜಿಲ್ಲೆಗಳ ನಡುವೆ ಓಡಾಡುವವರಿಗೆ ಅಂತರ್‍ಜಿಲ್ಲೆ ಪಾಸ್‍ಗಳ ಅಗತ್ಯವಿಲ್ಲ. ಇತರೆ ಜಿಲ್ಲೆಗಳಿಗೆ ತೆರಳುವವರು ಪಾಸ್‍ಗಳನ್ನು ಪಡೆಯಬೇಕು. ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಕಫ್ರ್ಯೂ ಜಾರಿಯಲ್ಲಿರಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ರಾತ್ರಿ ವೇಳೆ ಸಂಚರಿಸುವ ಐಟಿ, ಬಿಟಿ ವಲಯದವರು ಆಯಾ ಡಿಸಿಪಿಗಳಿಂದ ಪಾಸ್ ಪಡೆಯಬಹುದು. ಇಲಾಖೆಗಳ ಕಾರ್ಯದರ್ಶಿಗಳ ಶಿಫಾರಸ್ಸಿನ ಮೇರೆಗೆ ಕಮಿಷನರೇಟ್ ನಲ್ಲಿ ಸಂಬಧಪಟ್ಟ ಡಿಸಿಪಿಗಳು, ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಪಾಸ್ ನೀಡುತ್ತಾರೆ.

LockDown Police 2

ಬೆಂಗಳೂರಿಗೆ ಬಿಗ್ ರಿಲೀಫ್
ಈ ಎಲ್ಲ ನಿಯಮಗಳ ಮಧ್ಯೆ ಸಿಲಿಕಾನ್ ಸಿಟಿ ಜನರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಇನ್ನಿತರ ವಲಯಗಳಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಸೇರಿದಂತೆ ರೆಡ್ ಝೋನ್ ನಲ್ಲಿರುವ ಐಟಿ, ಬಿಟಿ ಕೈಗಾರಿಕೆಗಳು ಷರತ್ತಿನೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೆಡ್ ಝೋನ್ ಗೆ ಅನ್ವಯವಾಗುವ ಎಲ್ಲ ನಿಯಮಗಳು ಅನ್ವಯವಾಗಲಿವೆ. ಆದರೆ ಬೆಂಗಳೂರು ನಗರ, ಬೆಂ.ಗ್ರಾ. ರಾಮನಗರ, ಚಿಕ್ಕಬಳ್ಳಾಪುರ, ಕೊಲಾರ ಜಿಲ್ಲೆಗಳಿಗೆ ಓಡಾಲು ಅಂತರ್ ಜಿಲ್ಲೆ ಪಾಸ್ ಅಗತ್ಯ ವಿಲ್ಲ ಎಂದು ತಿಳಿಸಿದೆ. ಆರ್ಥಿಕ ಚಟುವಟಿಕೆ ನಿಟ್ಟಿನಲ್ಲಿ ಇಷ್ಟು ಜಿಲ್ಲೆಗಳನ್ನು ಒಂದು ಯೂನಿಟ್ ನಂತೆ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಉಳಿದಂತೆ ರೆಡ್ ಝೋನ್‍ನ ಎಲ್ಲ ನಿಯಮವಾಳಿಗಳು ಬೆಂಗಳೂರಿಗೂ ಅನ್ವಯವಾಗುತ್ತವೆ.

Share This Article
Leave a Comment

Leave a Reply

Your email address will not be published. Required fields are marked *