ಶೂಟಿಂಗ್ ವೇಳೆ ಶಕೀಲಾ ಕೆನ್ನೆಗೆ ಹೊಡೆದಿದ್ದ ಸಿಲ್ಕ್ ಸ್ಮಿತಾ

Public TV
2 Min Read
Shakila silk smitha 2

ಬೆಂಗಳೂರು: ಶೂಟಿಂಗ್ ವೇಳೆ ಸಿಲ್ಕ್ ಸ್ಮಿತಾ ಅವರು ನನ್ನ ಕೆನ್ನೆಗೆ ಹೊಡೆದಿದ್ದರು ಎಂದು ಮಾದಕ ನಟಿ ಶಕೀಲಾ ಹೇಳಿದ್ದಾರೆ.

90 ದಶಕದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಾದಕ ನಟಿಯರಾದ ಸಿಲ್ಕ್ ಸ್ಮಿತಾ ಮತ್ತು ಶಕೀಲಾ ತನ್ನದೇ ಅದ ಅಭಿಮಾನಿ ಬಳಗವನ್ನು ಇಬ್ಬರು ಹೊಂದಿದ್ದರು. ಆದರೆ ಈ ಇಬ್ಬರು ನಟಿಯರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ ಎಂದು ಸ್ವತಃ ಶಕೀಲಾ ಅವರೇ ಹೇಳಿಕೊಂಡಿದ್ದರು.

Silk Smitha Shakila

ಜೊತೆಗೆ ಸಿಲ್ಕ್ ಸ್ಮಿತಾ ಬಗ್ಗೆ ಮಾತನಾಡುವಾಗ ಅವರಿಬ್ಬರ ಮಧ್ಯೆ ನಡೆದ ಒಂದು ಪ್ರಸಂಗವನ್ನು ಕೂಡ ಶಕೀಲಾ ನೆನಪಿಸಿಕೊಂಡಿದ್ದಾರೆ. ಆಗ ನಾನು ಇನ್ನೂ ಸಿನಿಮಾ ರಂಗಕ್ಕೆ ಹೊಸಬಳು. ಆದರೆ ಸಿಲ್ಕ್ ಸ್ಮಿತಾ ಆಗಾಲೇ ಸಿನಿಮಾರಂಗದಲ್ಲಿ ಬಹಳ ಹೆಸರು ಮಾಡಿದ್ದರು. ಹೀಗಿರುವಾಗ ನಾವಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದೆವು. ಆಗ ಒಂದು ದೃಶ್ಯದ ಚಿತ್ರೀಕರಣದ ಬಗ್ಗೆ ರಿಹರ್ಸಲ್ ಮಾಡೋಣ ಬನ್ನಿ ಎಂದು ನಾನು ಅವರನ್ನು ಕರೆದಿದ್ದೆ. ಆದರೆ ಅವರು ಬರಲಿಲ್ಲ ಎಂದು ಶಕೀಲಾ ಹೇಳಿದ್ದಾರೆ.

Silk Smitha

ಆ ದೃಶ್ಯದಲ್ಲಿ ನನಗೆ ಸಿಲ್ಕ್ ಸ್ಮಿತಾ ಹೊಡೆಯಬೇಕಿತ್ತು. ನಾನು ರಿಹರ್ಸಲ್ ಮಾಡೋಣವೆಂದರೂ ಬೇಡವೆಂದು ಸಿಲ್ಕ್ ಸ್ಮಿತಾ ಶೂಟಿಂಗ್ ಟೈಮ್‍ನಲ್ಲಿ ನಿಜವಾಗಿಯೇ ನನ್ನ ಕೆನ್ನೆಗೆ ಜೋರಾಗಿ ಭಾರಿಸಿದ್ದರು. ಅಂದು ಅವರು ಹೊಡೆದ ರಭಸಕ್ಕೆ ನನ್ನ ಕೆನ್ನೆ ಊದಿತ್ತು. ನಾನು ಶೂಟಿಂಗ್ ಸೆಟ್‍ನಿಂದ ಅಳುತ್ತಲೇ ಮನೆಗೆ ಹೋಗಿದ್ದೆ. ನಂತರ ಎರಡು ದಿನ ಶೂಟಿಂಗ್‍ಗೆ ಬಂದಿರಲಿಲ್ಲ. ಬಳಿಕ ನಿರ್ಮಾಪಕರು ಬಂದು ಸಮಾಧಾನ ಮಾಡಿ ಕರೆದುಕೊಂಡು ಬಂದರು ಎಂದು ಶಕೀಲಾ ತಿಳಿಸಿದ್ದಾರೆ.

Shakeela

ಇದಾದ ನಂತರ ನಾನು ಅವರನ್ನು ಮಾತನಾಡಿಸಲು ಹೋಗಲಿಲ್ಲ. ಅವರು ಇದ್ದ ಕಡೆ ನಾನು ಹೋಗುತ್ತಿರಲಿಲ್ಲ. ಸಿಲ್ಕ್ ಸ್ಮಿತಾ ಅವರು ನಾನು ಅವರ ಜಾಗವನ್ನು ಕಿತ್ತುಕೊಳ್ಳುತ್ತೇನೆ ಎಂಬ ಭಯದಿಂದಲೇ ಹೊಡೆದರು ಎಂದು ಶಕೀಲಾ ತಿಳಿಸಿದ್ದಾರೆ. ಇದಾದ ನಂತರ ಸಿಲ್ಕ್ ಸ್ಮಿತಾ ಅವರೇ ಶಕೀಲಾ ಅವರ ಬಳಿ ಬಂದು ಅಂದು ಹೊಡೆದಿದ್ದಕ್ಕೆ ಕ್ಷಮೆ ಕೇಳಿದ್ದರಂತೆ. ಚಾಕೋಲೆಟ್ ಬಾಕ್ಸ್ ನೀಡಿ ಸ್ವಾರಿ ಎಂದು ಸ್ಮಿತಾ ಹೇಳಿದ್ದರಂತೆ.

Silk Smitha 3

1979ರಲ್ಲಿ ಸಿನಿಮಾಗೆ ಎಂಟ್ರಿಕೊಟ್ಟ ಸಿಲ್ಕ್ ಸ್ಮಿತಾ ನಂತರ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗ ಸೇರಿದಂತೆ ಸೌತ್‍ಸಿನಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಬಿ ಗ್ರೇಡ್ ಸಿನಿಮಾ ಐಟಂ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದ ಸ್ಮಿತಾ, ಅಂದಿನ ಕಾಲದಲ್ಲೇ ಬಹಳ ಬೇಡಿಕೆಯ ನಟಿ ಆಗಿದ್ದರು. ಜೊತೆಗೆ ಬಾಲಿವುಡ್‍ನಲ್ಲೂ ನಟಿಸಿದ್ದ ಸ್ಮಿತಾ 1996ರಲ್ಲಿ ತನ್ನ ಚೆನ್ನೈ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.

shakeela

ಆಂಧ್ರಪ್ರದೇಶ ನೆಲ್ಲೂರಿನಲ್ಲಿ ಜನಿಸಿದ ಶಕೀಲಾ ತನ್ನ 18ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದರು. ಒಂದು ಕಾಲದಲ್ಲಿ ಬಿ ಗ್ರೇಡ್ ಸಿನಿಮಾಗಳಿಗೆ ಸಿಮೀತವಾಗಿದ್ದ ಶಕೀಲಾ, ನಂತರ ನಾನು ವಯಸ್ಕರ ಚಿತ್ರ ಮಾಡುವುದಿಲ್ಲ ಎಂದು ಅದರಿಂದ ಹೊರಗೆ ಬಂದರು. ನಂತರ ಕನ್ನಡ, ಮಲೆಯಾಳಂ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *