ಲೈವ್‍ನಲ್ಲಿ ಅರೆನಗ್ನವಾಗಿ ಬಂದ ಯುವತಿ – ವರದಿಗಾರನ ಅನೈತಿಕ ಸಂಬಂಧ ಬಯಲು

Public TV
1 Min Read
LIVE

ಮ್ಯಾಡ್ರಿಡ್: ಇತ್ತೀಚೆಗೆ ಮಹಿಳಾ ವರದಿಗಾರ್ತಿ ಮನೆಯಿಂದಲೇ ವರದಿ ನೀಡುತ್ತಿದ್ದಾಗ ಆಕೆಯ ತಂದೆ ಟಿ-ಶರ್ಟ್ ಹಾಕಿಕೊಂಡು ಎಂಟ್ರಿಕೊಟ್ಟಿದ್ದರು. ಇದೀಗ ವರದಿಗಾರನೊಬ್ಬ ಲೈವ್ ವರದಿ ನೀಡುತ್ತಿದ್ದಾಗ ಅರೆನಗ್ನವಾಗಿ ಯುವತಿಯೊಬ್ಬಳು ಹೋಗಿದ್ದಾಳೆ. ಈ ಮೂಲಕ ಆತನೇ ತನ್ನ ಅನೈತಿಕ ಸಂಬಂಧವನ್ನು ಸಾರ್ವಜನಿಕವಾಗಿ ಬಯಲು ಮಾಡಿಕೊಂಡಿದ್ದಾನೆ.

ಕೊರೊನಾದಿಂದ ಇಡೀ ಸ್ಪೇನ್ ಲಾಕ್‍ಡೌನ್ ಆಗಿದೆ. ಹೀಗಾಗಿ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಸ್ಪ್ಯಾನಿಶ್ ಪತ್ರಕರ್ತನೊಬ್ಬ ಲೈವ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ಅರೆನಗ್ನವಾಗಿ ಯುವತಿಯೊಬ್ಬಳು ಕೊಠಡಿಯಿಂದ ಹೊರ ಬಂದಿದ್ದಾಳೆ. ಇದನ್ನೂ ಓದಿ: ವರ್ಕ್ ಫ್ರಂ ಹೋಂ ಎಫೆಕ್ಟ್- ಮಗಳು ಲೈವ್ ಮಾಡ್ತಿದ್ದಾಗ ಬಟ್ಟೆ ಹಾಕ್ತಾ ಅಪ್ಪನ ಎಂಟ್ರಿ

LIVE 1

ಅಲ್ಫೊನ್ಸೊ ಮೆರ್ಲೋಸ್ ಸ್ಥಳೀಯ ಸ್ಪೇನ್‍ನಲ್ಲಿ ಪತ್ರಕರ್ತನಾಗಿದ್ದು, ಮಾಡೆಲ್ ಮತ್ತು ಪ್ರಸಿದ್ಧ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಮೆರ್ಲೋಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಅತಿಥಿಯಾಗಿ ಲೈವ್ ಸಂದರ್ಶನದಲ್ಲಿ ಮಾತನಾಡುತ್ತಿದ್ದ. ಆಗ ಅರೆಬೆತ್ತಲೆ ಯುವತಿ ಆಕಸ್ಮಿಕವಾಗಿ ಹೋಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿರುವ ಯುವತಿ ಮೆರ್ಲೋಸ್‍ನ ಗೆಳತಿ ಮಾರ್ಟ್ ಲೋಪೆಜ್ ಅಲ್ಲ. ಆದರೆ ಆಕೆಯನ್ನು ಅಲೆಕ್ಸಿಯಾ ರಿವಾಸ್ ಎಂದು ಗುರುತಿಸಲಾಗಿದೆ. ಆಕೆಯೂ ಕೂಡ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವರದಿಗಾರ ಬಹಿರಂಗವಾಗಿ ಕ್ಷಮೆ ಕೇಳಿದ್ದಾನೆ.

https://www.instagram.com/p/B_NT6uFIB8d/

ಲೋಪೆಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಅಲೆಕ್ಸಿಯಾ ರಿವಾಸ್ ತನ್ನ ಗೆಳೆಯನೊಂದಿಗೆ ಬ್ರೇಕ್ ಮಾಡಿಕೊಂಡ ನೋವಿನಲ್ಲಿದ್ದಳು. ಆದರೆ ಮೆರ್ಲೋಸ್ ನೊಂದಿಗಿನ ನಾಚಿಕೆಗೇಡು ಕೆಲಸ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಮೆರ್ಲೋಸ್, ಲೋಪೆಜ್‍ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ.

ಇತ್ತೀಚೆಗೆ ಫ್ಲೋರಿಡಾದ ಜೆಸ್ಸಿಕಾ ಲ್ಯಾಂಗ್ ಎಂಬಾಕೆ ಅಡುಗೆ ಮನೆಯಿಂದ ಲೈವ್ ಬಂದಿದ್ದಳು. ಹೀಗೆ ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಂದೆ ಟಿ-ಶರ್ಟ್ ಹಾಕಿಕೊಂಡು ಒಳಗಡೆಯಿಂದ ಎಂಟ್ರಿ ಕೊಟ್ಟಿದ್ದರು. ಕೂಡಲೇ ಎಚ್ಚೆತ್ತು ಒಳಗಡೆ ತೆರಳಿದ್ದರು. ಈ ವಿಚಾರ ಮಗಳಿಗೂ ಗೊತ್ತಾಗಿ ಅಯ್ಯೋ ಡ್ಯಾಡಿ ಎಂದು ಒಂದು ಕ್ಷಣ ದಂಗಾಗಿದ್ದಳು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

https://twitter.com/kr3at0r/status/1253644846751002624

 

Share This Article
Leave a Comment

Leave a Reply

Your email address will not be published. Required fields are marked *