ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಮಧ್ಯಾಹ್ನ 2:41 ನಂತರ ಅಷ್ಟಮಿ ತಿಥಿ,
ಗುರುವಾರ, ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:54 ರಿಂದ 3:28
ಗುಳಿಕಕಾಲ: ಬೆಳಗ್ಗೆ 9:12 ರಿಂದ 10:46
ಯಮಗಂಡಕಾಲ: ಬೆಳಗ್ಗೆ 6:03 ರಿಂದ 7:38
ಮೇಷ: ನೌಕರರಿಗೆ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಭವಿಷ್ಯದ ಬಗ್ಗೆ ಆಲೋಚನೆ, ಸರ್ಕಾರಿ ಉದ್ಯೋಗದ ಹಂಬಲ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ಆತ್ಮ ಸಂಕಟ, ಮನಸ್ಸಿಗೆ ಬೇಸರ, ಆಸೆ ಆಕಾಂಕ್ಷೆ ಭಾವನೆಗಳಿಗೆ ಧಕ್ಕೆ, ಅಕ್ರಮ ಸಂಪಾದನೆಗೆ ಮುಂದಾಗುವಿರಿ, ಅಧಿಕ ಉಷ್ಣ, ತಲೆನೋವು, ಪಿತ್ತಬಾಧೆ.
ವೃಷಭ: ಉದ್ಯೋಗ ನಷ್ಟವಾಗುವ ಭೀತಿ, ಆತ್ಮ ಸಂಕಟ, ಭಯ, ಗಾಬರಿ, ಸ್ಥಿರಾಸ್ತಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಧಿಕಾರಿ-ರಾಜಕೀಯ ವ್ಯಕ್ತಿಗಳಿಂದ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣಕ್ಕೆ ವಿಘ್ನಗಳಿಂದ ಬೇಸರ, ನೆರೆಹೊರೆ-ಬಂಧುಗಳಿಂದ ನೋವು.
ಮಿಥುನ: ಹಣಕಾಸು ವಿಚಾರದಲ್ಲಿ ನಷ್ಟ, ಆತ್ಮೀಯರಿಂದ ಹಣ ಬೇಡಿಕೆ, ದೂರ ಪ್ರಯಾಣಕ್ಕೆ ವಿಘ್ನಗಳು, ಮಿತ್ರರಿಂದ ಸಹಕಾರ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ ಆರೋಗ್ಯ-ಆಯುಷ್ಯದ ಆತಂಕ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಹಿರಿಯರಿಂದ ಧನ ಸಹಾಯ, ಗ್ಯಾಸ್ಟ್ರಿಕ್ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಕಟಕ: ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಸಂಗಾತಿಯ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಉತ್ತಮ ಭರವಸೆ, ತಂದೆಯಿಂದ ಧನಸಹಾಯ, ಹೇಳಿಕೆ ಮಾತಿನಿಂದ ಸಂಸಾರದಲ್ಲಿ ಅಶಾಂತಿ, ನೆಮ್ಮದಿಗೆ ಭಂಗ, ಕಾಲು ನೋವು, ಬಾಯಿ ಹುಣ್ಣು.
ಸಿಂಹ: ಸ್ವಯಂಕೃತ ಅಹಂಭಾವದಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ನಷ್ಟ, ಸಂಬಂಧಿಕರೇ ಶತ್ರುಗಳಾಗುವರು, ಕೆಲಸಗಾರರ ಕೊರತೆ, ಶತ್ರುಗಳ ದಮನ, ಮನೋರೋಗದಿಂದ ನಿದ್ರಾಭಂಗ.
ಕನ್ಯಾ: ಮಕ್ಕಳಿಗಾಗಿ ಅಧಿಕ ಖರ್ಚು, ದುಶ್ಚಟಗಳಿಂದ ತೊಂದರೆ, ಭಾವನಾತ್ಮಕ ವಿಚಾರಗಳಿಂದ ನೋವು, ಸೋಲು, ನಷ್ಟ, ನಿರಾಸೆ, ವೇದನೆ, ಸಂತಾನ ದೋಷ, ಪ್ರಗತಿಯಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ನೇಹಿತರಿಂದ ಬೇಸರ, ಕೋರ್ಟ್ ಕೇಸ್‍ಗಳಲ್ಲಿ ಸಮಸ್ಯೆ.
ತುಲಾ: ಆಧ್ಯಾತ್ಮಿಕ ಆಸಕ್ತಿಯಿಂದ ಸಮಾಧಾನ, ಸಂಗಾತಿ ನಡವಳಿಕೆಯಿಂದ ಕೋಪ, ಮನೆ ವಾತಾವರಣದಲ್ಲಿ ಆತಂಕ, ಸ್ಥಿರಾಸ್ತಿಯಿಂದ ಅನುಕೂಲ, ಉದ್ಯೋಗದ ಚಿಂತೆ, ಸಂಪಾದನೆಯಲ್ಲಿ ಕುಂಠಿತವಾಗುವ ಆತಂಕ, ದೈವ ಶಾಪ, ತಂತ್ರದ ಭೀತಿ, ಹಣಕಾಸು ವಿಚಾರದಲ್ಲಿ ಯೋಚನೆ.
ವೃಶ್ಚಿಕ: ಕಾರ್ಯ ನಿಮಿತ್ತ ಪ್ರಯಾಣದ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ, ಹಿರಿಯರಿಂದ ಬೈಗುಳ, ಉಷ್ಣ, ಕಿವಿ ನೋವು, ಬೆನ್ನು ಸೆಳೆತ, ಸೇವಾವೃತ್ತಿಯ ಉದ್ಯೋಗಸ್ಥರಿಗೆ ಅಲ್ಪ ಲಾಭ, ಆತ್ಮವಿಶ್ವಾಸದಿಂದ ಗೆಲ್ಲುವ ಭರವಸೆ, ಸಂಬಂಧಗಳಲ್ಲಿ ಬಿರುಕು.
ಧನಸ್ಸು: ತಂದೆ, ಬಂಧುಗಳಿಂದ ಧನ ಸಹಾಯ, ಮಕ್ಕಳಲ್ಲಿ ಗೆಲ್ಲುವ ಉತ್ಸಾಹ, ಹಿಂದಿನ ಕಷ್ಟ ನಷ್ಟಗಳ ನೆನಪು, ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಪೆಟ್ಟಾಗುವ ಸಾಧ್ಯತೆ ಎಚ್ಚರ, ಉದ್ಯೋಗ ಬಡ್ತಿಗಾಗಿ ಪ್ರಯತ್ನ.
ಮಕರ: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಆರೋಗ್ಯ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಸಂಶಯಗಳು ಸುಳಿದಾಟ, ವಾಹನ ಚಾಲನೆಯಿಂದ ತೊಂದರೆ, ಆತ್ಮ ಸಂಕಟ, ಮಾನಸಿಕ ವ್ಯಥೆ, ಗೌರವ, ಕೀರ್ತಿ ಪ್ರತಿಷ್ಠೆಗೆ ಧಕ್ಕೆ.
ಕುಂಭ: ದೂರದ ವ್ಯಕ್ತಿಗಳಿಂದ ಉದ್ಯೋಗ ಭರವಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗದಲ್ಲಿ ಒತ್ತಡ ನಿದ್ರಾಭಂಗ, ಮೇಲಾಧಿಕಾರಿಗಳಿಗಾಗಿ ಖರ್ಚು, ಮಕ್ಕಳ ಸಂಸಾರದಲ್ಲಿ ವ್ಯತ್ಯಾಸ, ನೊರೆಹೊರೆಯವರಿಂದ ಮೋಸ, ಅವಮಾನ.
ಮೀನ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಸಾಲ ದೊರೆಯುವ ಭರವಸೆ, ನೀವಾಡಿದ ಮಾತಿನಿಂದ ಸಮಸ್ಯೆ, ಪೂರ್ವಿಕರಿಂದ ಶುಭ ಫಲ ಯೋಗ, ಉದ್ಯೋಗದಲ್ಲಿ ಯಶಸ್ಸು, ಪಿತ್ತಬಾಧೆ, ಬಾಯಿ ಹುಣ್ಣು, ಕೆಲಸಗಾರರ ಕೊರತೆ ನಿವಾರಣೆ.