ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆ

Public TV
1 Min Read
corona 9 1

ಬೆಂಗಳೂರು: ರಾಜ್ಯದಲ್ಲಿ ಇಂದು 9 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ.

ಇಂದು ಬೆಳಗ್ಗೆ ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಕಲಬುರಗಿಯಲ್ಲಿ ರೋಗಿ ನಂಬರ್ 425ರ ಮಹಿಳೆಯಿಂದ ನಾಲ್ವರಿಗೆ ಕೊರೊನಾ ಹಬ್ಬಿದ್ದು, ಜಿಲ್ಲೆಯಲ್ಲಿ ಒಟ್ಟು 8 ಮಂದಿಗೆ ಹಾಗೂ ಬೆಳಗಾವಿಯಲ್ಲಿ 12 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಈವರಗೆ 20 ಮಂದಿ ಮೃತಪಟ್ಟಿದ್ದು, 215 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Corona A 2

ರೋಗಿಗಳ ಮಾಹಿತಿ:
ರೋಗಿ- 524: ಬೆಳಗಾವಿ ಹುಕ್ಕೇರಿಯ 12 ವರ್ಷದ ಬಾಲಕ- ರೋಗಿ 293ರ ಸಂಪರ್ಕ
ರೋಗಿ 525: ಕಲಬುರಗಿಯ ನಾಲ್ಕೂವರೆ ವರ್ಷದ ಬಾಲಕಿ- ರೋಗಿ 395ರ ಸಂಪರ್ಕ
ರೋಗಿ- 526: ಕಲಬುರಗಿಯ 28 ವರ್ಷದ ಯುವಕ- ರೋಗಿ 515ರ ಸಂಪರ್ಕ
ರೋಗಿ- 527: ಕಲಬುರಗಿಯ 14 ವರ್ಷದ ಬಾಲಕಿ- ರೋಗಿ 425ರ ಸಂಪರ್ಕ

ರೋಗಿ- 528: ಕಲಬುರಗಿಯ 22 ವರ್ಷದ ಯುವಕ- ರೋಗಿ 205ರ ಸಂಪರ್ಕ
ರೋಗಿ- 529: ಕಲಬುರಗಿ 40 ವರ್ಷದ ಮಹಿಳೆ- ರೋಗಿ 425ರ ಸಂಪರ್ಕ
ರೋಗಿ 530: ಕಲಬುರಗಿಯ 20 ವರ್ಷದ ಯುವಕ- ರೋಗಿ 205ರ ಸಂಪರ್ಕ
ರೋಗಿ-531: ಕಲಬುರಗಿ 17 ವರ್ಷದ ಬಾಲಕಿ- ರೋಗಿ 425ರ ಸಂಪರ್ಕ
ರೋಗಿ- 532: ಕಲಬುರಗಿಯ 12 ವರ್ಷದ ಬಾಲಕಿ- ರೋಗಿ 425ರ ಸಂಪರ್ಕ

Corona 26

Share This Article
Leave a Comment

Leave a Reply

Your email address will not be published. Required fields are marked *