– ನಿಜ ನೀನು ತುಂಬ ಕಿರಿಕಿರಿ ಮಾಡ್ತಿಯಾ
ನವದೆಹಲಿ: ನೀನು ತುಂಬ ಕಿರಿಕಿರಿ ಮಾಡುತ್ತೀಯಾ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಟೀಕಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಚಹಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಎಲ್ಲರನ್ನೂ ಕಾಲೆಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಗೇಲ್ ನೀನು ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ ಮಾಡುತ್ತಿದ್ದೀಯ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ಚಹಲ್‍ಗೆ ವ್ಯಂಗ್ಯವಾಡಿದ್ದಾರೆ.
ಕೊರೊನಾ ಲಾಕ್‍ಡೌನ್‍ನಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಒಂದು ಕಾಲದ ಆರ್.ಸಿ.ಬಿ ಸಹ ಆಟಗಾರರಾದ ಚಹಲ್ ಮತ್ತು ಗೇಲ್ ಲೈವ್ ಬಂದು ಮಾತನಾಡಿದ್ದಾರೆ.
https://www.instagram.com/p/B_HyhuGhfbn/
ಈ ವೇಳೆ ಗೇಲ್, ನಾನು ಟಿಕ್‍ಟಾಕ್ ಕಂಪನಿಯವರಿಗೆ ನಿನ್ನನ್ನು ಬ್ಲಾಕ್ ಮಾಡಲು ಮನವಿ ಮಾಡುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ನೀನು ಸಖತ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದೀಯಾ. ನೀನು ಈಗಲೇ ಸಾಮಾಜಿಕ ಜಾಲತಾಣದಿಂದ ಹೊರಗೆ ಹೋಗಬೇಕು. ನಮಗೆ ಸಾಕಾಗಿದೆ ಚಹಲ್ ಮತ್ತೆ ನಿನ್ನನ್ನು ನನ್ನ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೋಡಲು ಇಷ್ಟವಿಲ್ಲ. ನಾನು ನಿನ್ನನ್ನು ಬ್ಲಾಕ್ ಮಾಡುತ್ತೇನೆ ಎಂದು ಚಹಲ್ ಅವರನ್ನು ಟೀಕಿಸಿದ್ದಾರೆ.
ಕ್ರಿಸ್ ಗೇಲ್ ಮತ್ತು ಚಹಲ್ ಅವರು ಒಂದು ಕಾಲದಲ್ಲಿ ಆರ್.ಸಿ.ಬಿ ಸಹ ಆಟಗಾರಗಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ಫನ್ನಿಯಾಗಿ ಆಡುತ್ತಿದ್ದ ಗೇಲ್ ಮತ್ತು ಚಹಲ್ ಜೋಡಿ ನೋಡುಗರಿಗೆ ಉತ್ತಮ ಮನರಂಜನೆ ನೀಡುತ್ತಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸದಾ ಸಕ್ರಿಯವಾಗಿ ಇರುತ್ತಿದ್ದರು.