ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ದಿವಂಗತ ಡಾ.ರಾಜ್ ಕುಟುಂಬದ ಇನ್ನೊಂದು ಕುಡಿ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಡೋದಕ್ಕೆ ಸಿದ್ಧವಾಗುತ್ತಿದೆ.
ನಿಮ್ಮ ಮುಂದೆ ಫಸ್ಟ್ ಲುಕ್ ಪೋಸ್ಟರ್ .. ಪ್ರೀತಿಸಿ , ಆಶೀರ್ವದಿಸಿ ????????
First Look of my upcoming movie .. @puneeth_rudranag @sanketh_mys @chethandsouza @ravibasrur @kesari_bath ???????????? #Yuvarajkumar #Yuva01 #YR01
Credits in the poster. pic.twitter.com/eqyfLFzzGt
— YuvaRajkumar (@yuva_rajkumar) April 24, 2020
ರಾಘವೇಂದ್ರ ರಾಜ್ ಕುಮಾರ್ ಅವರ ದ್ವಿತೀಯ ಪುತ್ರ ಯುವರಾಜ್ ಕುಮಾರ್ ಯುವ-01 ಚಿತ್ರದ ಮೂಲ ಚಂದನವನಕ್ಕೆ ಬಲಗಾಲಿಟ್ಟು ಬರುತ್ತಿದ್ದಾರೆ. ತಾತನ ಹುಟ್ಟು ಹಬ್ಬದಂದು ಮೊಮ್ಮಗನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.
ನಟ ಯುವರಾಜ್ ಕುಮಾರ್ ಖಡಕ್ ಲುಕ್‍ಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಯುವರಾಜ್ ಕುಮಾರ್ ಲುಕ್‍ಗೆ ಫಿದಾ ಆಗಿದ್ದಾರೆ. ಇನ್ನು ಹೆಸರಿಡದ ಚಿತ್ರಕ್ಕೆ ಯುವ-01 ಪ್ರೊಡಕ್ಷನ್ ಹೆಸರಿಟ್ಟಿದ್ದು, ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕೊರೊನಾ ಭೀತಿ ಹಿನ್ನೆಲೆ ಚಿತ್ರೀಕರಣ ಆರಂಭವಾಗಿಲ್ಲ. ಕೇವಲ ಪೋಸ್ಟರ್ ಮಾತ್ರ ರಿಲೀಸ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಯುವರಾಜ್ ಪೋಸ್ಟರ್ ಭಾರೀ ವೈರಲ್ ಆಗಿದೆ. ಮೊದಲ ಬಾರಿಗೆ ಯುವರಾಜ್ ಕುಮಾರ್‍ಗೆ ನಿರ್ದೇಶಕ ಪುನೀತ್ ರುದ್ರಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಯುವರಾಜ್ ಕುಮಾರ್ ಲುಕ್ ಆ್ಯಂಡ್ ಕಥೆಗಾಗಿ ಸಾಥ್ ನೀಡಿದ್ದಾರೆ.