ಲಾಕ್‍ಡೌನ್‍ನಿಂದ ಕಂಗೆಟ್ಟ ಜನ್ರಿಗೆ ಸಿಹಿಸುದ್ದಿ- ಏಪ್ರಿಲ್ 20ರ ನಂತ್ರ ಒಂದಷ್ಟು ವಿನಾಯ್ತಿ

Public TV
2 Min Read
LOCKDOWN

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಯವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಹೊರಡಿಸಿದ ಆದೇಶವನ್ನು ಮೇ.3ರವರೆಗೆ ವಿಸ್ತರಿಸಲಾಗಿದೆ. ಸದ್ಯ ಲಾಕ್ ಡೌನ್ ನಿಂದ ಕಂಗೆಟ್ಟಿದ್ದ ಜನರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ಆದರೆ ಎಣ್ಣೆ ಪ್ರಿಯರಿಗೆ ಯಾವುದೇ ವಿನಾಯ್ತಿ ಇಲ್ಲ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

LOCKDOWN 1 1

ಏ.20ರ ನಂತರ ಯಾವುದಕ್ಕೆಲ್ಲ ವಿನಾಯ್ತಿ?
* ರಾಜ್ಯ, ಅಂತರ್‍ರಾಜ್ಯ ಸರಕು ಸಾಗಾಣಿಗೆ ಅನುಮತಿ (ವಾಹನಗಳು, ವಿಮಾನ, ರೈಲು, ಹಡಗುಗಳ ಮೂಲಕ ಸಾಗಾಣಿಕೆಗೆ ಅವಕಾಶ)
* ಸರಕು ಸಾಗಾಣೆ ವಾಹನಗಳಲ್ಲಿ ಇಬ್ಬರು ಡ್ರೈವರ್, ಒಬ್ಬರು ಹೆಲ್ಪರ್‍ಗೆ ಮಾತ್ರ ಅವಕಾಶ
* ಹೋಲ್‍ಸೇಲ್, ರಿಟೇಲ್, ಅಂಗಡಿಗಳ ಅಗತ್ಯ ವಸ್ತುಗಳ ಪೂರೈಕೆಗೆ ಅನುಮತಿ
* ಹೆದ್ದಾರಿ ಬದಿಯ ಟ್ರಕ್ ರಿಪೇರಿ ಶಾಪ್‍ಗಳಿಗೆ ಅನುಮತಿ
* ತುರ್ತು ವೈದ್ಯಕೀಯ ಸೇವೆಗಾಗಿ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ
* ಕಾರಿನಲ್ಲಿ ಇಬ್ಬರು, ಬೈಕ್‍ನಲ್ಲಿ ಒಬ್ಬರೇ ಸಂಚರಿಸಬೇಕು

LOCKDOWN 2 1

* ಆನ್‍ಲೈನ್ ಶಿಕ್ಷಣ, ಟ್ರೈನಿಂಗ್, ಕೋಚಿಂಗ್‍ಗೆ ಅನುಮತಿ
* ಎಪಿಎಂಸಿ, ಕೃಷಿ ಸಲಕರಣೆ, ರಸಗೊಬ್ಬರ, ಬಿತ್ತನೆ ಬೀಜಗಳ ಮಾರಾಟ ಕೇಂದ್ರಗಳಿಗೆ ಅನುಮತಿ
* ಟೀ, ಕಾಫಿ, ರಬ್ಬರ್ ತೋಟಗಳಲ್ಲಿ ಶೇ.50ರಷ್ಟು ಕಾರ್ಮಿಕರೊಂದಿಗೆ ಕೆಲಸ ಮಾಡಲು ಅನುಮತಿ
* ಮೀನುಗಾರಿಕೆ, ಪಶುಸಂಗೋಪನೆಗೆ ಅನುಮತಿ
* ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಖನೆ ತೆರೆಯಲು ಅವಕಾಶ
* ಅಗತ್ಯ ವಸ್ತುಗಳ ತಯಾರಿಕಾ ಘಟಕಗಳು, ರಸ್ತೆ ಕಾಮಗಾರಿಗಳಿಗೆ ಅನುಮತಿ

LOCKDOWN 3 1

ಏ.20ರ ನಂತ್ರ ಯಾವುದಕ್ಕೆಲ್ಲಾ ನಿರ್ಬಂಧ?
* ಹಾಟ್‍ಸ್ಪಾಟ್‍ಗಳಲ್ಲಿ ಲಾಕ್‍ಡೌನ್ ಗೈಡ್‍ಲೈನ್ಸ್ ಮುಂದುವರಿಕೆ
* ಮದ್ಯ, ಗುಟ್ಕಾ, ಸಿಗರೇಟ್ ಮಾರಾಟ ಬಂದ್
* ರೈಲು, ಬಸ್, ಮೆಟ್ರೋ, ಟ್ಯಾಕ್ಸಿ, ವಿಮಾನ ಸಂಚಾರ ಇರಲ್ಲ
* ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಟ್ರೈನಿಂಗ್, ಕೋಚಿಂಗ್ ಸಂಸ್ಥೆಗಳು ಬಂದ್
* ಸಿನಿಮಾ ಥಿಯೇಟರ್, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಧಾರ್ಮಿಕ ಸ್ಥಳಗಳು ತೆರೆಯುವಂತಿಲ್ಲ
* ಸಾಮಾಜಿಕ, ಮನೋರಂಜನೆ, ಕ್ರೀಡಾ ಚಟುವಟಿಕೆಗಳು ಇರಲ್ಲ

LOCKDOWN 4 1

ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕು..?
* ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
* 5 ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ
* ಮದುವೆ, ಅಂತ್ಯಕ್ರಿಯೆ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡ ವಿಧಿಸಲಾಗುವುದು

Share This Article
Leave a Comment

Leave a Reply

Your email address will not be published. Required fields are marked *