ಕೊರೊನಾಗೆ ಬೆಳಗಾವಿಯಲ್ಲಿ ಮೊದಲ ಬಲಿ- ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

Public TV
3 Min Read
Belagavi City 1

– ಒಂದೇ ದಿನ 19 ಜನರಿಗೆ ಕೊರೊನಾ

ಬೆಳಗಾವಿ: ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಏಪ್ರಿಲ್ 13ರಂದು ಮೃತಪಟ್ಟಿದ್ದರು. ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಮೃತ ವೃದ್ಧೆಯ ಥ್ರೋಟ್ ಸ್ವ್ಯಾಬ್‍ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರಿಪೋರ್ಟ್ ಸದ್ಯ ಹೊರ ಬಿದ್ದಿದ್ದು, ವೃದ್ಧೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

Corona 4

ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಬೆಳಗಾವಿಯ ವ್ಯಕ್ತಿ (ರೋಗಿ ನಂಬರ್-128)ಗೆ ಕೊರೊನಾ ಸೋಂಕು ತಗುಲಿತ್ತು. ಅವರಿಂದ ರೋಗಿ 244ಗೆ ಸೋಂಕು ಹರಡಿತ್ತು. ಬಳಿಕ ಈ ವ್ಯಕ್ತಿ (ರೋಗಿ-244) ಸಂಪರ್ಕದಲ್ಲಿದ್ದ ವೃದ್ಧೆಗೆ ಕೊರೊನಾ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ವೃದ್ಧೆ ಮೃತಪಟ್ಟಿದ್ದರು. ಇತ್ತ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೊನಾ ಸೋಂಕಿತ 6 ಜನ ರೋಗಿಗಳು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ್ಕೆ ಇಂದು ಕರಾಳ ದಿನವಾಗಿ ಪರಿಣಮಿಸಿದೆ. ಏಕೆಂದರೆ ಬುಧವಾರ ಒಂದೇ ದಿನದಲ್ಲಿ ಇಬ್ಬರು ಮೃತಪಟ್ಟರೆ, 19 ಜನರಿಗೆ ಸೋಂಕು ತಗುಲಿದೆ. ಚಿಕ್ಕಬಳ್ಳಾಪುರ ನಿವಾಸಿ 65 ವರ್ಷದ ರೋಗಿ-250 ಬೆಂಗಳೂರಿನಲ್ಲಿ ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು.

gdg corona death 1

ನಂಜನಗೂಡು ಫಾರ್ಮಾ ಕಂಪನಿಯ 9 ಮಂದಿ ನೌಕರರಿಗೆ ಪಾಸಿಟಿವ್ ಬಂದಿದೆ. ಬಾಗಲಕೋಟೆಯ ಮುದೋಳದಲ್ಲಿ ಕರ್ತವ್ಯದ ಹಿನ್ನೆಲೆಯಲ್ಲಿ ಮಸೀದಿಗೆ ತೆರಳಿದ್ದ ಪೊಲೀಸ್ ಪೇದೆಗೆ ಕೊರೊನಾ ಬಂದಿದ್ದರೆ ಕಲಬುರಗಿಯ ಒಂದು ವರ್ಷದ ಗಂಡು ಮಗುವಿಗೆ ಪಾಸಿಟಿವ್ ಬಂದಿದೆ. ವಿಜಯಪುರ ಮೂವರಿಗೆ, ಬಾಗಲಕೋಟೆ ಮತ್ತು ಬೆಂಗಳೂರಿನ ಇಬ್ಬರಿಗೆ ಕೊರೊನಾ ಬಂದಿದೆ. ಒಟ್ಟು ಕರ್ನಾಟಕದಲ್ಲಿ 12 ಮಂದಿ ಮೃತಪಟ್ಟಿದ್ದು, 80 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ರೋಗಿಗಳ ವಿವರ:
ರೋಗಿ 261 – 59 ವರ್ಷ, ಅನಂತಪುರದಿಂದ ಮರಳಿದ್ದ ಬೆಂಗಳೂರಿನ ವ್ಯಕ್ತಿ, ಉಸಿರಾಟದ ಸಮಸ್ಯೆ.
ರೋಗಿ 262 – ಬಾಗಲಕೋಟೆಯ 52 ವರ್ಷ ವ್ಯಕ್ತಿ ರೋಗಿ 186ರ ಸಂಪರ್ಕ.
ರೋಗಿ 263 – 39 ವರ್ಷದ ಬಾಗಲಕೋಟೆಯ ಪೊಲೀಸ್ ಪೇದೆ, ಮುದೋಳ ಮಸೀದಿಯಲ್ಲಿ ಕರ್ತವ್ಯ.
ರೋಗಿ 264 – 41 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 265 – 30 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 266 – 27 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 267 – 35 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.

Baby corona 1

ರೋಗಿ 268 – 26 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 269 – 23 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 270 – 35 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 271 – 28 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 272 – 32 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 273 – 72 ವರ್ಷದ ಮೈಸೂರಿನ ವೃದ್ಧ, ಉಸಿರಾಟದ ಸಮಸ್ಯೆ.

Corona news

ರೋಗಿ 274 – ಕಲಬುರಗಿಯ ಒಂದು ವರ್ಷ ಗಂಡು ಮಗು, ಅನಾರೋಗ್ಯ.
ರೋಗಿ 275 – ವಿಜಯಪುರದ 38 ವರ್ಷದ ಮಹಿಳೆ, ರೋಗಿ 221ರ ಸಂಪರ್ಕ.
ರೋಗಿ 276 – ವಿಜಯಪುರದ 25 ವರ್ಷದ ವ್ಯಕ್ತಿ, ರೋಗಿ 221ರ ಸಂಪರ್ಕ.
ರೋಗಿ 277 – ಬೆಂಗಳೂರಿನ 32 ವರ್ಷದ ಮಹಿಳೆ, ರೋಗಿ 252ರ ಸಂಪರ್ಕ.
ರೋಗಿ 278- ವಿಜಯಪುರದ 28 ವರ್ಷದ ಮಹಿಳೆ, ರೋಗಿ 221ರ ಸಂಪರ್ಕ.
ರೋಗಿ 279- ಬೆಳಗಾವಿ ಜಿಲ್ಲೆ ಹೀರೆಬಾಗೇವಾಡಿಯ 80 ವರ್ಷದ ವೃದ್ಧೆ, ರೋಗಿ 244ರ ಸಂಪರ್ಕ.

Share This Article
Leave a Comment

Leave a Reply

Your email address will not be published. Required fields are marked *