ಲಾಕ್‍ಡೌನ್ ಪಾಲಿಸದಿದ್ರೆ ಸೀಲ್‍ಡೌನ್: ಸಿಎಂ ಎಚ್ಚರಿಕೆ

Public TV
2 Min Read
CM BSY Press Meet

– 15 ದಿನ ಲಾಕ್‍ಡೌನ್ ಆನಿವಾರ್ಯ
– ಮೀನುಗಾರಿಕೆ, ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ಕೊಂಚ ರಿಲೀಫ್

ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಂಬಂಧ ಕರ್ನಾಟಕದಲ್ಲಿ 15 ದಿನ ಲಾಕ್‍ಡೌನ್ ವಿಸ್ತರಿಸಲಾಗಿದೆ. ಮುಂದಿನ 2 ವಾರ ಲಾಕ್‍ಡೌನ್ ಬಹಳ ಕಠಿಣವಾಗಿರುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಪ್ರಧಾನಿ ಮೋದಿ ನಾಲ್ಕು ಗಂಟೆಗಳ ಕಾಲ ಸಂವಾದ ನಡೆಸಿದ್ದಾರೆ. ಕೊರೊನಾ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2.44 ಲಕ್ಷ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್, ಮಾಸ್ಕ್ ಗಳನ್ನ ಪೊರೈಸಲಾಗುವುದು, ಏಪ್ರಿಲ್ 30ರ ಒಳಗೆ 300 ಲ್ಯಾಬ್ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಲಾಕ್‍ಡೌನ್‍ನಿಂದ ಮೀನುಗಾರಿಕೆ, ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ಕೊಂಚ ರಿಲೀಫ್ ಸಿಕ್ಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಚಟುವಟಿಗೆ ನಡೆಸಬಹುದುದಾಗಿದೆ. ಉಳಿದವರು ಲಾಕ್‍ಡೌನ್ ಪಾಲಿಸದೇ ಇದ್ದರೆ ಸೀಲ್‍ಡೌನ್ ಜಾರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರವಾಸಿಗಳನ್ನು ಹಳ್ಳಿಗಳಿಗೆ ಕಳುಹಿಸಬಾರದು. ಮೀನುಗಾರಿಕೆಗೆ ವಿನಾಯ್ತಿ ನೀಡಿದ್ದಾರೆ. ಆರೋಗ್ಯ ಸೇತು ಮೊಬೈಲ್ ಆಪ್ ಜನಪ್ರಿಯಗೊಳಿಸಲು ಪ್ರಧಾನಿ ಸಲಹೆ ನೀಡಿದ್ದಾರೆ. ಆದರೆ ಲಾಕ್‍ಡೌನ್ ಸಡಿಲ ಮಾಡಬಾರದು. ಮುಂದಿನ 15 ದಿನ ಲಾಕ್‍ಡೌನ್ ಅನಿವಾರ್ಯವಾಗಿದೆ, ಏಪ್ರಿಲ್ 30ರ ತನಕ ಲಾಕ್‍ಡೌನ್ ಮಾರ್ಗಸೂಚಿ ಹೊರಡಿಸ್ತಾರೆ ಎಂದು ಸಿಎಂ ಹೇಳಿದರು.

Farmer

ಮುಂದಿನ ಎರಡು ವಾರ ಲಾಕ್‍ಡೌನ್ ವಿಭಿನ್ನವಾಗಿರುತ್ತೆ. ಕೃಷಿ, ಕೈಗಾರಿಕಾ, ಕಾರ್ಮಿಕರಿಗೆ ತೊಂದರೆ ಆಗದಂತೆ ಮಾರ್ಗಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ಸರ್ಕಾರಿ ಕಚೇರಿಗಳು ಸಹ ಭಾಗಶಃ ತೆರಯಲು ಸೂಚಿಸಿದ್ದಾರೆ. ಏ.15ರಿಂದ ಸರ್ಕಾರಿ ಕಚೇರಿಗಳ ಓಪನ್ ಇರಬೇಕು ಹಾಗೆ ಅರ್ಧದಷ್ಟು ಸಿಬ್ಬಂದಿ ಮಾತ್ರ ಇರಬೇಕು ಅಂತ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಇಲ್ಲಿವರೆಗೆ ಒಟ್ಟು 217 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಇದ್ದ ಕರ್ನಾಟಕ ಈಗ ಹನ್ನೊಂದನೇ ಸ್ಥಾನಕ್ಕೆ ಇಳಿದಿದ್ದು ಕೊಂಚ ರಿಲೀಫ್ ನೀಡಿದೆ. ಪರಿಸ್ಥಿತಿ ನೋಡಿಕೊಂಡು ಕೆಲವು ಕಡೆ ಸೀಲ್‍ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Bengaluru Lockdown 3

ಕೃಷಿಕರು ಬೆಳೆದ ಯಾವುದೇ ಉತ್ಪನ್ನಗಳನ್ನು ಟೋಲ್‍ಗಳಲ್ಲಿ ತಡೆಯಬಾರದು. ಒಂದು ವೇಳೆ ತಡೆದರೆ, ಅಂತಹ ವರ ಮೇಲೆ ದಂಡ ವಿಧಿಸಲಾಗುವುದು. ದೇಶದ ನಾನಾ ಭಾಗಗಳಲ್ಲಿ ಏನೇ ಸ್ಥಿತಿ ಇರಬಹುದು ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದರು.

ರಾಜ್ಯದಲ್ಲಿ ರೆಡ್, ಗ್ರೀನ್, ಎಲ್ಲೋ ಅಂತ ಝೋನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆ ಬಗ್ಗೆ ಪ್ರಧಾನಿಗಳು ಗಮನಹರಿಸುತ್ತಾರೆ. ಅವರು ಮಾರ್ಗಸೂಚಿ ಕಳುಹಿಸುತ್ತಾರೆ. ಅದರಂತೆ ನಿಮಯ ಜಾರಿಗೆ ತರಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಪ್ರಧಾನಿ ಮೋದಿ ಜನರಲ್ ಆಗಿ ಎಲ್ಲ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಪ್ರಕರಣ ಹೆಚ್ಚು ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮಾತನಾಡಿದರು. ಹೀಗಾಗಿ ಕರ್ನಾಟಕ ರಾಜ್ಯದ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ ಎಂದರು.

ಒಟ್ಟು 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು 801 ತಬ್ಲಿಘಿರನ್ನು ಕ್ವಾರೆಂಟೈನ್ ಮಾಡಲಾಗಿದೆ. ಬೆಂಗಳೂರಿನಲ್ಲಿ 269, ಇತರ ಜಿಲ್ಲೆಗಳಲ್ಲಿ 472 ತಬ್ಲಿಘಿಗರ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *