ಕುಟುಂಬದ ಜೊತೆ ಪಗಡೆ ಆಡೋದ್ರಲ್ಲಿ ಸರ್ಜಾ ಬ್ರದರ್ಸ್ ಬ್ಯುಸಿ – ವಿಡಿಯೋ ವೈರಲ್

Public TV
2 Min Read
chiranjeevi dhruva sarja

ಬೆಂಗಳೂರು: ಸದ್ಯ ಕೊರೊನಾ ವೈರಸ್ ಅಟ್ಟಹಾಸಕ್ಕೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಜನರು ಮನೆಯಿಂದ ಹೊರ ಬರದೆ ಕುಟುಂಬದ ಜೊತೆ ಮನೆಯಲ್ಲಿಯೆ ಸಮಯ ಕಳೆಯುತ್ತಿದ್ದಾರೆ. ಇತ್ತ ಸಿನಿ ಸೆಲೆಬ್ರಿಟಿಗಳು ಕೂಡ ತಮ್ಮ ಕ್ವಾರಂಟೈನ್ ಸಮಯವನ್ನು ಕುಟುಂಬದ ಜೊತೆ ಇದ್ದು ಎಂಜಾಯ್ ಮಾಡುತ್ತಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಇಬ್ಬರೂ ಕುಟುಂಬದ ಜೊತೆ ಮನೆಯಲ್ಲಿಯೇ ಆಟಗಳನ್ನು ಆಡುತ್ತಾ ಮಸ್ತಿ ಮಾಡುತ್ತಿದ್ದಾರೆ.

chiranjeevi dhruva sarja 1

ಧ್ರುವ ಮತ್ತು ಚಿರಂಜೀವಿ ಇಬ್ಬರೂ ಮನೆ ಮಂದಿ ಜೊತೆ ಪಗಡೆ ಆಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದಾ ಶೂಟಿಂಗ್ ಬ್ಯುಸಿ ಶೆಡ್ಯೂಲ್‍ನಲ್ಲಿ ಬ್ಯುಸಿ ಇರುತ್ತಿದ್ದ ಧ್ರುವ, ಚಿರು ಈಗ ಕ್ವಾರಂಟೈನ್ ಟೈಮ್‍ನಲ್ಲಿ ಕುಟುಂಬದ ಜೊತೆ ಮಸ್ತಿ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಅಜ್ಜಿ ಹಾಗೂ ಕುಟುಂಬದ ಇತರೇ ಸದಸ್ಯರೊಂದಿಗೆ ಸರ್ಜಾ ಬ್ರದರ್ಸ್ ಪಗಡೆ ಆಡಿರುವ ವಿಡಿಯೋ ಅಭಿಮಾನಿಗಳ ಮನಗೆದ್ದಿದೆ.

https://www.instagram.com/p/B-EVKUzHHfX/

ಈ ಅಪರೂಪದ ವಿಡಿಯೋವನ್ನು ಚಿರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದು, “ಕ್ವಾರಂಟೈನ್ ಸಮಯವು ಕುಟುಂಬದ ಜೊತೆ ಅಮೂಲ್ಯವಾದ ಸಮಯವಾಗಿದೆ” ಎಂದು ಕ್ಯಾಪ್ಷನ್ ಬರೆದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಕುಟುಂಬದ ಜೊತೆ ಧ್ರುವ ಮತ್ತು ಚಿರಂಜೀವಿಗೆ ಪ್ರೇರಣಾ ಮತ್ತು ನಟಿ ಮೇಘನಾ ರಾಜ್ ಸಹ ಸಾಥ್ ಕೊಟ್ಟಿದ್ದಾರೆ. ಒಂದೆಡೆ ಧ್ರುವ, ಚಿರು ಎಲ್ಲರೂ ಪಗಡೆ ಆಡುತ್ತಾ ಖುಷಿ ಪಡುತ್ತಿದ್ದರೆ, ಇನ್ನೊಂದೆಡೆ ಮೇಘನಾ ಮತ್ತು ಪ್ರೇರಣಾ ಇಬ್ಬರೇ ಸೇರಿ ಮತ್ತೊಂದು ಆಟ ಆಡುತ್ತಾ ಕುಳಿತಿರುವ ದೃಶ್ಯಗಳು, ಪಗಡೆಯಲ್ಲಿ ಗೆದ್ದಾಗ ಚಿರು ಸಂಭ್ರಮಿಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

chiranjeevi dhruva sarja 3

ಈ ವೈರಲ್ ವಿಡಿಯೋದಲ್ಲಿ ಸರ್ಜಾ ಕುಟುಂಬದ ಅನ್ಯೋನ್ಯತೆ ಮತ್ತು ಸರಳತೆಗೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲಾಕ್‍ಡೌನ್‍ನಲ್ಲಿ ಮನೆಯಲ್ಲಿಯೇ ಹೇಗಪ್ಪ ಇರೋದು ಎಂದು ಅನೇಕರು ಯೋಚಿಸುತ್ತಿರುತ್ತಾರೆ. ಇನ್ನೂ ಕೆಲವರು ಇದು ಕುಟುಂಬದ ಜೊತೆ ಇರಲು ಸಿಕ್ಕ ಅಮೂಲ್ಯವಾದ ಸಮಯ ಎಂದು ಎಂಜಾಯ್ ಮಾಡುತ್ತಿದ್ದಾರೆ.

chiranjeevi dhruva sarja 2

ಸದ್ಯ ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರದ ಟ್ರೈಲರ್ ಮತ್ತು ಒಂದು ಹಾಡು ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತ ಚಿರು ಸರ್ಜಾ ಕೈಯಲ್ಲಿ ಆದ್ಯ, ಖಾಕಿ, ಏಪ್ರಿಲ್, ರಣಂ, ಕ್ಷತ್ರಿಯ ಹೀಗೆ ಸಾಲು ಸಾಲು ಸಿನಿಮಾಗಳಿವೆ. ಲಾಕ್‍ಡೌನ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಸರ್ಜಾ ಬ್ರದರ್ಸ್ ಬ್ಯುಸಿಯಾಗಲಿದ್ದು, ಸದ್ಯ ತಮಗೆ ಸಿಕ್ಕ ಸಮಯವನ್ನು ಖುಷಿಯಿಂದ ಮನೆಮಂದಿ ಜೊತೆ ಕಳೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *