ಹೈದರಾಬಾದ್: ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರನ್ನು ಭದ್ರತೆಯ ದೃಷ್ಟಿಯಿಂದ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಇಂತಹ ಪರಿಸ್ಥಿತಿ ತೆಲಂಗಾಣದಲ್ಲೂ ಇದೆ. ಆದರೆ ಅಲ್ಲಿನ ಆಸ್ಪತ್ರೆಯಲ್ಲೇ ಮುಸ್ಲಿಂ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಹೈದರಾಬಾದ್‍ನ ಗಾಂಧಿ ಆಸ್ಪತ್ರೆಯ ಪರಿಸ್ಥಿತಿ ಇದಾಗಿದ್ದು, ಕ್ವಾರಂಟೈನ್‍ನಲ್ಲಿರು ಕೊರೊನಾ ಶಂಕಿತ ಕೆಲವು ಮುಸ್ಲಿಮರು ಆಸ್ಪತ್ರೆಯಲ್ಲಿ ಇಂದು ನಮಾಜ್ ಮಾಡಿದ್ದಾರೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಯಾವುದೇ ರೀತಿಯ ಸಭೆಯ ಮೇಲೆ ಸರ್ಕಾರ ನಿಷೇಧ ಹೇರಿದೆ. ಹೀಗಿದ್ದರೂ ಕೆಲ ಮುಸ್ಲಿಮರು ಆಸ್ಪತ್ರೆಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?
Telangana: People who are under quarantine at Gandhi Hospital in Hyderabad offer namaaz. #COVID19 pic.twitter.com/oT2i3OmW5J
— ANI (@ANI) April 2, 2020
ಇದೇ ಆಸ್ಪತ್ರೆಯಲ್ಲಿ ಬುಧವಾರ ಕೊರೊನಾ ಸೋಂಕಿತ 49 ವರ್ಷದ ರೋಗಿಯು ಸಾವನ್ನಪ್ಪಿದ್ದರು. ಈ ಕುರಿತು ಮಾಹಿತಿ ನೀಡಿದ್ದ ಆಸ್ಪತ್ರೆ ಅಧೀಕ್ಷಕ ಶ್ರವಣ್ ಕುಮಾರ್, ಐದು ದಿನಗಳ ಹಿಂದೆ ಅವರನ್ನು ದಾಖಲಿಸಲಾಗಿತ್ತು. ಮೃತರು ದೆಹಲಿಗೆ ಪ್ರಯಾಣಿಸಿದ್ದರು ಎಂದು ತಿಳಿಸಿದ್ದರು. ಇದನ್ನೂ ಓದಿ: ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್‍ಗಳು
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಇದುವರೆಗೆ ಕೊರೊನಾ ಸೋಂಕಿತರ ಸಂಖ್ಯೆ 1,966ಕ್ಕೆ ತಲುಪಿದೆ. ಅವರಲ್ಲಿ 1764 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದರೆ, 150 ಮಂದಿ ಗುಣಮುಖರಾಗಿದ್ದಾರೆ. 50 ಜನರು ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ.