Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗಂಗೂಲಿಯಂತೆ ಕೊಹ್ಲಿ, ಧೋನಿ ನನಗೆ ಸಪೋರ್ಟ್ ಮಾಡಲಿಲ್ಲ: ಯುವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಗಂಗೂಲಿಯಂತೆ ಕೊಹ್ಲಿ, ಧೋನಿ ನನಗೆ ಸಪೋರ್ಟ್ ಮಾಡಲಿಲ್ಲ: ಯುವಿ

Cricket

ಗಂಗೂಲಿಯಂತೆ ಕೊಹ್ಲಿ, ಧೋನಿ ನನಗೆ ಸಪೋರ್ಟ್ ಮಾಡಲಿಲ್ಲ: ಯುವಿ

Public TV
Last updated: April 1, 2020 1:21 pm
Public TV
Share
2 Min Read
yuvaraj
SHARE

– ಕ್ಯಾನ್ಸರ್ ಬಂದಾಗ ನನಗೂ ಭಯವಾಗಿತ್ತು

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯಂತೆ ನನಗೆ ಈಗಿನ ನಾಯಕ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರು ಸಪೋರ್ಟ್ ಮಾಡಲಿಲ್ಲ ಎಂದು ಮಾಜಿ ಆಟಗಾರ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹೇಳಿದ್ದಾರೆ.

ಸೌರವ್ ಗಂಗೂಲಿ ಅವರ ನಾಯಕ್ವದಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಯುವಿ, ನಂತರ ರಾಹುಲ್ ದ್ರಾವಿಡ್, ಸೆಹ್ವಾಗ್, ಗಂಭೀರ್, ಕೊಹ್ಲಿ, ಧೋನಿ ಅವರ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೊಹ್ಲಿ ಹಾಗೂ ಧೋನಿ ಅವರಿಗೆ ಹೋಲಿಸಿಕೊಂಡರೆ ನನಗೆ ಸೌರವ್ ಗಂಗೂಲಿ ಅವರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಯುವರಾಜ್ ತಿಳಿಸಿದ್ದಾರೆ.

yuvaraj singh a

ನಾನು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಬಹಳ ಪಂದ್ಯಗಳನ್ನು ಆಡಿದ್ದೇನೆ. ಅವರು ನನಗೆ ಬಹಳ ಸಪೋರ್ಟ್ ಮಾಡಿದ್ದಾರೆ. ಅವರ ನಂತರ ಧೋನಿ ಅವರು ನಾಯಕತ್ವ ತೆಗೆದುಕೊಂಡರು. ಧೋನಿ ಮತ್ತು ಸೌರವ್ ನಡುವೆ ಒಬ್ಬರನ್ನು ಆಯ್ಕೆ ಮಾಡಲು ಬಹಳ ಕಷ್ಟವಾಗುತ್ತದೆ. ನನಗೆ ಸೌರವ್ ಅವರ ನಾಯಕತ್ವದಲ್ಲಿ ಬಹಳ ಒಳ್ಳೆಯ ನೆನಪುಗಳಿವೆ ಯಾಕೆಂದರೆ ಅವರು ನನಗೆ ಬಹಳ ಬೆಂಬಲ ನೀಡಿದ್ದಾರೆ. ಆದರೆ ಧೋನಿ ಮತ್ತು ಕೊಹ್ಲಿ ಅವರಿಂದ ನನಗೆ ಆ ರೀತಿಯ ಬೆಂಬಲ ಸಿಗಲಿಲ್ಲ ಎಂದು ಯುವಿ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

YUVI

ಈಗ ಸದ್ಯಕ್ಕೆ ಭಾರತ ತಂಡಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಬೇಕು. ಆತ ಆಟಗಾರರ ಜೊತೆ ಮೈದಾನದ ಹೊರಗಿನ ವಿಚಾರಗಳ ಬಗ್ಗೆಯೂ ಮಾತನಾಡಬೇಕು. ಯಾಕೆಂದರೆ ಅವರ ಮೈದಾನದ ಹೊರಗಿನ ಕೆಲ ಸಮಸ್ಯೆಗಳು ಮೈದಾನದ ಒಳಗಿನ ಪ್ರದರ್ಶನವನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಒಬ್ಬ ವ್ಯಕ್ತಿ ಆಟಗಾರರ ವೈಯಕ್ತಿಕ ವಿಚಾರಗಳಲ್ಲಿ ಮಾರ್ಗದರ್ಶನ ನೀಡಬಲ್ಲರು ಎಂದು ಯುವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

dhoni and ganguly

ಆಟಗಾರ ಜೊತೆ ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತನಾಡಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ನಮ್ಮ ಸಮಯದಲ್ಲಿ ನಮಗೆ ಪ್ಯಾಡಿ ಅಪ್ಟನ್ ಅವರು ಇದ್ದರು ಅವರು, ಭಯ, ವೈಫಲ್ಯದಂತ ಮೈದಾನ ಹೊರಗಿನ ವಿಚಾರಗಳ ಬಗ್ಗೆ ನಮ್ಮ ಬಳಿ ಮಾತನಾಡಿ ತುಂಬಾ ಸಹಾಯ ಮಾಡುತ್ತಿದ್ದರು. ಈಗಿನ ಭಾರತ ತಂಡಕ್ಕೆ ಪ್ಯಾಡಿಯಂತವರು ಬೇಕಾಗಿದ್ದಾರೆ ಎಂದು ಯುವರಾಜ್ ತಿಳಿಸಿದ್ದಾರೆ.

Virat Kohli Sourav Ganguly

ಇದೇ ವೇಳೆ ಲಾಕ್‍ಡೌನ್ ಬಗ್ಗೆ ಮಾತನಾಡಿರುವ ಯುವರಾಜ್ ಅವರು, ಇದರಿಂದ ಅನುಕೂಲ ಮತ್ತು ಅನಾನುಕೂಲ ಎರಡು ಇದೆ. ವಿಶ್ವದಾದ್ಯಂತ ಕೊರೊನಾದಿಂದ ಬಹಳ ಜನರು ಸಾಯುತ್ತಿರುವುದನ್ನು ನೋಡಿದರೆ ನೋವು ಆಗುತ್ತೆ. ಈ ಸೋಂಕು ಬಹಳ ಬೇಗ ಹರಡುತ್ತಿದೆ. ಜನರು ಇದಕ್ಕೆ ಹೆದರದೆ ಸೂಕ್ತ ಹೆಲ್ತ್ ವೈಬ್‍ಸೈಟ್‍ಗಳಿಗೆ ಹೋಗಿ ಚೆಕ್ ಮಾಡಿ ಸೋಂಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯುವರಾಜ್ ಸಲಹೆ ನೀಡಿದ್ದಾರೆ.

yuvi

ನನಗೂ ಕ್ಯಾನ್ಸರ್ ಬಂದಾಗ ನಾನೂ ಕೂಡ ತುಂಬಾ ಭಯಪಟ್ಟಿದೆ. ಆದರೆ ನಂತರ ಅದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡೆ. ಸರಿಯಾದ ಆಸ್ಪತ್ರೆಗೆ ಹೋಗಿ ಗುಣಮುಖನಾದೆ. ಹಾಗೆ ಕೊರೊನಾ ವಿಚಾರವಾಗಿಯೂ ಯಾರೂ ಭಯಪಡಬೇಡಿ ಸರ್ಕಾರಿ ಹೆಲ್ತ್ ವೆಬ್‍ಸೈಟಿಗೆ ಹೋಗಿ ಮಾಹಿತಿ ಪಡೆಯಿರಿ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಯುವಿ ಹೇಳಿದ್ದಾರೆ.

yuvraj singh

ಒಟ್ಟು ಭಾರತದ ಪರ 304 ಏಕದಿನ ಪಂದ್ಯಗಳನ್ನು ಆಡಿರುವ ಯುವಿ, ಗಂಗೂಲಿ ನಾಯಕತ್ವದಲ್ಲಿ 110 ಪಂದ್ಯ ಹಾಗೂ ಧೋನಿ ನಾಯಕತ್ವದಲ್ಲಿ 104 ಪಂದ್ಯಗಳನ್ನು ಆಡಿದ್ದಾರೆ. ಯುವರಾಜ್ ಅವರು ಕಳೆದ ವರ್ಷ ಎಲ್ಲಾ ಮಾದರಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಅನ್ನು ಭಾರತ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರವಹಿಸಿದ್ದರು.

TAGGED:ms dhoniNew DelhiPublic TVsourav gangulyvirat kohliYuvraj Singhಎಂಎಸ್ ಧೋನಿನವದೆಹಲಿಪಬ್ಲಿಕ್ ಟಿವಿಯುವರಾಜ್ ಸಿಂಗ್ವಿರಾಟ್ ಕೊಹ್ಲಿಸೌರವ್ ಗಂಗೂಲಿ
Share This Article
Facebook Whatsapp Whatsapp Telegram

Cinema news

Sangeeth Sagar
ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಂಗೀತ್‌ ಸಾಗರ್‌ ಸಾವು
Cinema Latest Main Post Sandalwood Shivamogga
Dhanya Ramkumar
ಶಾರುಖ್ ಪುತ್ರನ ಜೊತೆ ಧನ್ಯಾ ರಾಮ್‌ಕುಮಾರ್; ಬಾಲಿವುಡ್‌ ಪ್ಲ್ಯಾನ್‌ನಲ್ಲಿದ್ದಾರಾ?
Bollywood Cinema Latest Sandalwood Top Stories
Jai Lalitha Serial
ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ
Cinema Latest Top Stories TV Shows
Arjun Janya
ಅರ್ಜುನ್ ಜನ್ಯ ಸಂಯೋಜನೆಯಲ್ಲಿ ʻಮಹಾಗುರು ಮಹಾದೇವʼ ಆಲ್ಬಂ
Cinema Latest Sandalwood

You Might Also Like

Police Theft
Bengaluru City

ಕಮಿಷನರ್‌ ಕಚೇರಿ ಆವರಣದಲ್ಲೇ ಹಣ ದೋಚಿದ ಪೊಲೀಸಪ್ಪ – ಆರೋಪಿ ಕಾರಿನಲ್ಲಿದ್ದ 11 ಲಕ್ಷ ಕಳವು!

Public TV
By Public TV
4 minutes ago
Bengaluru City Police
Bengaluru City

ಸಿಎಂ ಕಾವೇರಿ ನಿವಾಸದ ಬಂದೋಬಸ್ತ್‌ಗೆ ಬಾರದ ಸಿಬ್ಬಂದಿ ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್‌

Public TV
By Public TV
14 minutes ago
Vokkaliga Sangha Dubai
Latest

ಯಶಸ್ವಿಯಾಗಿ ನಡೆದ ಒಕ್ಕಲಿಗರ ಸಂಘದ Dubai UAE `ಸ್ನೇಹ ಸಮ್ಮಿಲನ’

Public TV
By Public TV
40 minutes ago
itc maurya delhi presidential suite 3
Latest

ಟ್ರಂಪ್‌ ತಂಗಿದ್ದ ಹೋಟೆಲಿನಲ್ಲಿ ಪುಟಿನ್‌ ವಾಸ್ತವ್ಯ – ಈ ಸೂಟ್‌ ವಿಶೇಷತೆ ಏನು? 1 ರಾತ್ರಿಗೆ ದರ ಎಷ್ಟು?

Public TV
By Public TV
54 minutes ago
US F16
Latest

ಅಮೆರಿಕ ವಾಯುಪಡೆಯ F-16 ಫೈಟರ್‌ ಜೆಟ್‌ ಪತನ – ಇಡೀ ವಿಮಾನ ಬೆಂಕಿಗಾಹುತಿ, ಇಬ್ಬರು ಪೈಲಟ್‌ ಸೇಫ್‌

Public TV
By Public TV
1 hour ago
Kanneri Shri 1
Belgaum

ಸಿಎಂಗೆ ಲಿಂಗಾಯತ ಸಮಾಜ ಒಡೆಯಬೇಕಿದೆ – ಕನ್ನೇರಿ ಶ್ರೀ ಗಂಭೀರ ಆರೋಪ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?