ಪ್ರಜ್ಞೆ ತಪ್ಪಿ ಬಿದ್ದರೆ ಕೊರೊನಾ ಎಂದು ಯಾರೂ ನೆರವಿಗೆ ಧಾವಿಸಿಲ್ಲ!

Public TV
1 Min Read
MDK 1 3

ಮಡಿಕೇರಿ: ಸ್ನಾನ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಪ್ರಜ್ಞೆತಪ್ಪಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಉಂಜಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ ಉಂಜಿಗನಹಳ್ಳಿ ಗ್ರಾಮದ ನಿವಾಸಿ ರೋಷನ್(41) ಮೃತ ವ್ಯಕ್ತಿ. ಇವರು ಬಾತ್ ರೂಮ್‍ನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

police 1 e1585506284178

ಈ ವೇಳೆ ಸಹಾಯ ಮಾಡುವಂತೆ ರೋಷನ್ ತಾಯಿ ಕೂಗಿಕೊಂಡರೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮನೆಯ ಅಕ್ಕ-ಪಕ್ಕದವರು ಯಾರು ಕೂಡ ನೆರವಿಗೆ ಧಾವಿಸಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಪರೀಕ್ಷೆ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.

ರೋಷನ್ ಮಾರ್ಚ್ 20 ರಂದು ಮಂಗಳೂರಿನಿಂದ ಊರಿಗೆ ಬಂದಿದ್ದರು. ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *