ದಿನಗೂಲಿ ಕಾರ್ಮಿಕರಿಗೆ ಬಾಡಿಗೆ, ಇಡೀ ತಿಂಗ್ಳ ರೇಷನ್ ವಿತರಣೆ – ಶೈನ್ ಶೆಟ್ಟಿ

Public TV
2 Min Read
shine copy

– ವೈದ್ಯಕೀಯ ಸೇವೆಗೆ ಫೋನ್ ಮಾಡಿ
– ದಿನಗೂಲಿ, ಬೀದಿ ಬದಿ ವ್ಯಾಪಾರಿಗಳ ಸಹಾಯಕ್ಕೆ ಶೈನ್ ತಂಡ ಸಿದ್ಧ

ಬೆಂಗಳೂರು: ಕೊರೊನಾ ವೈರಸ್‍ಗೆ ಈಗಾಗಲೇ ಜನರು ತತ್ತರಿಸಿ ಹೋಗುತ್ತಿದ್ದಾರೆ. ಹೀಗಾಗಿ ನಟ-ನಟಿಯರು ಕೊರೊನಾ ವಿರುದ್ಧ ಹೋರಾಟಕ್ಕಾಗಿ ಸಾಕಷ್ಟು ದೇಣಿಗೆ ನೀಡುವ ಮೂಲಕ ಸಹಾಯದ ಹಸ್ತ ಚಾಚುತ್ತಿದ್ದಾರೆ. ಇದೀಗ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್ ಶೆಟ್ಟಿ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.

ಶೈನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಇತರರಿಗೂ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Corona Virus 2 1

ವಿಡಿಯೋದಲ್ಲಿ ಶೈನ್ ಹೇಳಿದ್ದೇನು?
‘ಬೀದಿ ಬದಿಯ ವ್ಯಾಪಾರಿ ನಾನು, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಫುಡ್‍ಟ್ರಕ್ ಇಟ್ಟುಕೊಂಡು ತಿಂಗಳು ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೆ. ಜೊತೆಗೆ ನಟನಾಗಬೇಕೆಂದು ಕನಸು ಕಂಡಿದ್ದೆ. ಆದರೆ ಬಿಗ್‍ಬಾಸ್ ಆಗದಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು? ಬಾಡಿಗೆ, ಊಟಕ್ಕೆ ಏನು ಮಾಡಬೇಕಿತ್ತು? ಎಷ್ಟು ಕಷ್ಟಗಳು ಎದುರಿಸಬೇಕಾಗಿತ್ತು? ನನ್ನ ಜೊತೆ ಕೆಲಸಗಾರರಿದ್ದಾರೆ, ಅವರಿಗೆ ಸಂಬಳ ಹೇಗೆ ಕೊಡುವುದು, ಅವರನ್ನು ಊರಿಗೆ ಕಳಿಸುವುದಕ್ಕೆ ಆಗಲ್ಲ? ಮುಂತಾದ ಪ್ರಶ್ನೆ ಮೂಡಿದಾಗ ನನಗೊಂದು ಯೋಚನೆ ಬಂತು.

ಹೀಗಾಗಿ ಐರನ್ ಅಂಗಡಿ, ಎಳನೀರು, ಹೂ ಮಾಡುವವರು, ಫುಡ್‍ಟ್ರಕ್ ಇಟ್ಟುಕೊಂಡಿರುವವರು, ಬೀದಿ ಬದಿ ವ್ಯಾಪಾರಿಗಳು, ಬೋಂಡ-ಬಜ್ಜಿ ಮಾರುವವರು, ದಿನಗೂಲಿಯವರು, ಗಾರೆ ಕೆಲಸಕ್ಕೆ ಹೋಗುವವರ ಬಗ್ಗೆ ಯೋಚನೆ ಮಾಡಿದಾಗ ಅವರ ಪರಿಸ್ಥಿತಿ ಭಯವಾಗುತ್ತದೆ. ಇಡೀ ತಿಂಗಳ ರೇಷನ್, ಸಾಲಕ್ಕೆ ಬಡ್ಡಿ, ಊಟದ ಯೋಚನೆ ಬಂದಾಗ ನಾನು ನನ್ನ ತಂಡವರು ಸೇರಿಕೊಂಡು ಇರೋವಷ್ಟು ದುಡ್ಡು ಒಟ್ಟುಹಾಕಿ. ಇವರಿಗೆಲ್ಲ ಸಹಾಯ ಮಾಡುವುದಕ್ಕೆ ಯೋಚನೆ ಮಾಡಿದ್ದೇವೆ.

shine shetty cinema

ಸದ್ಯಕ್ಕೆ ಬನಶಂಕರಿ ಮತ್ತು ಚೆನ್ನಮ್ಮನ ಕೆರೆ ಪೊಲೀಸ್ ಸಿಬ್ಬಂದಿಯ ಸಹಾಯ ಪಡೆದು, ದಿನಗೂಲಿ ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರ ನೀಡುತ್ತಿದ್ದೇವೆ. ಅವರಿಗೆ ಇಡೀ ತಿಂಗಳ ಮನೆ ರೇಷನ್ ಮತ್ತು ಬಾಡಿಗೆ ಕೊಡುವ ಮೂಲಕ ಸಹಾಯ ಮಾಡುತ್ತಿದ್ದೇವೆ.

ಇನ್ನೂ ಮನೆಗಳನ್ನು ಬಾಡಿಗೆ ನೀಡುವವರಿಗೆ ನಾನೊಂದು ಮನವಿ, ನಿಮ್ಮಿಂದ ಎಷ್ಟೂ ಕಡಿಮೆ ಮಾಡುವುದಕ್ಕೆ ಆಗುತ್ತೋ ಅಷ್ಟು ಮನೆ ಬಾಡಿಗೆಯನ್ನು ಕಡಿಮೆ ಮಾಡಿ. ಯಾಕೆಂದರೆ ನಮ್ಮ ದೇಶದಲ್ಲಿ ಕೊರೊನಾ ವೈರಸ್‍ನಿಂದಾಗಿ ಜನರು ತುಂಬಾ ಕುಗ್ಗಿದ್ದಾರೆ. ಹೀಗಾಗಿ ಅವರಿಗೆ ಒತ್ತಡ ಕೊಡಬೇಡಿ. ನಿಮ್ಮಿಂದ ಎಷ್ಟು ಸಹಕಾರ ಕೊಡಲು ಸಾಧ್ಯವೋ ಕೊಡಿ ಎಂದಿದ್ದಾರೆ.

ನಾನು ನಮ್ಮ ತಂಡದಿಂದ ಏನೂ ಸಾಧ್ಯವೋ ಅದನ್ನು ಮಾಡುತ್ತೇವೆ. ತುಂಬಾ ಜನರು ಅನವಶ್ಯಕವಾಗಿ ಮನೆಯಿಂದ ಹೊರ ಬರುತ್ತಿದ್ದೀರಾ. ದಯವಿಟ್ಟು ಮನೆಯಿಂದ ಹೊರ ಬರಬೇಡಿ. ಬನಶಂಕರಿ, ಕತ್ರಿಗುಪ್ಪೆ ಸುತ್ತಾಮುತ್ತ ಇರುವ ಹಿರಿಯ ನಾಗರಿಕರು ಮತ್ತು ಮನೆಯಿಂದ ಹೊರಗೆ ಬರಲು ಸಾಧ್ಯವಾಗದಿರುವವರಿಗೆ ನಮ್ಮ ತಂಡವರು ವೈದ್ಯಕೀಯ ತುರ್ತು ವ್ಯವಸ್ಥೆ ಮಾಡುತ್ತಾರೆ.

ಮೆಡಿಸಿನ್ ಅಥವಾ ಇನ್ನಿತರೆ ತುರ್ತಾಗಿ ಏನಾದರೂ ಬೇಕಾದರೆ 9632258998 ಈ ಫೋನ್ ನಂಬರಿಗೆ ಫೋನ್ ಮಾಡಿ ತಿಳಿಸಿ. ನಾವು ನಿಮ್ಮ ಮನೆಗೆ ತಲುಪಿಸುತ್ತೇವೆ. ನೀವು ಮನೆಯಿಂದ ಹೊರ ಬರುತ್ತಿದ್ದೀರಾ, ಹಾಗಾಗಿ ನಾವೇ ನಿಮ್ಮ ಮನೆಗೆ ಬರುತ್ತೇವೆ. ದಯವಿಟ್ಟು ಮನೆಯಿಂದ ಯಾರೂ ಹೊರ ಬರಬೇಡಿ ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *