ಮುಂಬೈ: ಕೊರೊನಾ ವೈರಸ್ ಭೀತಿಯಿಂದ 50 ವರ್ಷದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ.
ಶನಿವಾರ ತನ್ನ ಮನೆಯ ಸಮೀಪ ಇರುವ ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ತನಿಖೆ ಆರಂಭಿಸಿದಾಗ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದೆ.
ಈ ಡೆತ್ ನೋಟ್‍ನಲ್ಲಿ ಕೊರೊನಾ ಭಯಕ್ಕೆ ಹೆದರಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಹಿಳೆ ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈಗ ಡೆತ್ ನೋಟಿನಲ್ಲಿರುವ ಬರಹ ಮಹಿಳೆಯದ್ದೋ ಅಥವಾ ಬೇರೆಯವರು ಬರೆದಿದ್ದಾರೋ ಎನ್ನುವುದನ್ನು ತಿಳಿಯಲು ಕೈ ಬರಹ ತಜ್ಞರ ಮೊರೆ ಹೋಗಿದ್ದಾರೆ.
Two states, Kerala and Maharashtra, now have more than 100 cases each. Kerala has reported 14 new cases since 5:45 p.m. last evening, increasing its total to 108. Maharashtra now has 101 cases after it detected 12 new ones. #COVID19 #CoronavirusOutbreak pic.twitter.com/JxZXu4Lf2E
— IndiaSpend (@IndiaSpend) March 25, 2020
ಈ ಮಹಿಳೆಗೆ ಕೊರೊನಾ ಬಂದಿರಲಿಲ್ಲ ಮತ್ತು ಕೊರೊನಾ ಪೀಡಿತರ ಜೊತೆ ಸಂಪರ್ಕಕ್ಕೂ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾ.25ರವರೆಗೆ ಮಹಾರಾಷ್ಟ್ರದಲ್ಲಿ 101 ಮಂದಿಗೆ ಕೊರೊನಾ ಬಂದಿದ್ದರೆ, ಕೇರಳದಲ್ಲಿ 105 ಮಂದಿಗೆ ಕೊರೊನಾ ಬಂದಿದೆ.