ಕೊರೊನಾ ಎಫೆಕ್ಟ್‌ನಿಂದ ಸೆಲೆಬ್ರಿಟಿಗಳ ಸ್ಥಿತಿ ಹಿಂಗಾಗಿದೆ ನೋಡಿ

Public TV
2 Min Read
Kamal Haasan

ಮುಂಬೈ: ಕೊರೊನಾ ವೈರಸ್‍ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಜನರು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಇತ್ತ ಸಿನಿಮಾ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳ ಶೂಟಿಂಗ್ ರದ್ದುಗೊಂಡಿವೆ. ಇದರಿಂದಾಗಿ ಸೆಲೆಬ್ರಿಟಿಗಳು ಸಹ ಮನೆಯಲ್ಲಿಯೇ ಇದ್ದು ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ.

ಅನೇಕ ಸೆಲೆಬ್ರಿಟಿಗಳು ಕುಟುಂಬದ ದೈನಂದಿನ ಕೆಲಸದಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವರು ಅಡುಗೆಯಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದರೆ, ಕೆಲವರು ಸ್ವಚ್ಛತೆ ಹಾಗೂ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

https://www.instagram.com/tv/B-AGMHJpQHM/?utm_source=ig_embed

ಬಾಲಿವುಡ್ ನಟಿ ಹೀನಾ ಖಾನ್ ಅವರು ತಾವು ಮನೆಯ ಕೆಲಸ ಮಾಡಿದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹೀನಾ ಖಾನ್ ನೆಲವನ್ನು ಸ್ವಚ್ಛಗೊಳಿಸಿದರೆ, ಸಹೋದರ ಪಾತ್ರೆ ತೊಳೆಯುತ್ತಾರೆ. ಅಷ್ಟೇ ಅಲ್ಲದೆ ಹೀನಾ ಅವರ ತಂದೆ ಬಾತ್‍ರೂಮ್‍ಅನ್ನು ಸ್ವಚ್ಛಗೊಳಿಸುತ್ತಾರೆ.

ತಾಯಿ ಮನೆಯಲ್ಲಿ ಎಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎನ್ನುವುದನ್ನು ಈ ವಿಡಿಯೋ ತಿಳಿಸುತ್ತದೆ. ಮನೆಯಲ್ಲಿದ್ದು ವಿಶ್ರಾಂತಿ ಪಡೆಯುತ್ತಾರೆ ಎಂದು ಹೇಳುವುದು ಸುಲಭವಲ್ಲ ಎಂದು ಹೇಳುವ ಮೂಲಕ ತಾಯಿಯ ಸೇವೆಯನ್ನು ನೆನೆದಿದ್ದಾರೆ.

https://www.instagram.com/p/B-ET0FsAFUa/?utm_source=ig_embed

ಕಿರುತೆರೆ ನಟ ಕರಣ್ವೀರ್ ಬೊಹ್ರಾ ಅವರು ಪೊರಕೆ ಹಿಡಿದು ನಿಂತ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ಮಕ್ಕಳಿಗೆ ಊಟ ಮಾಡಿಸುತ್ತಾರೆ. ಪತ್ನಿ ಎಷ್ಟೆಲ್ಲಾ ಕೆಲಸ ಮಾಡುತ್ತಾರೆ ಅಲ್ವಾ? ಇಂದು ನಾನು ಪತ್ನಿಯ ಕೆಲಸವನ್ನು ಹಂಚಿಕೊಂಡು ಆಕೆಗೆ ಸಹಾಯ ಮಾಡುತ್ತಿರುವೆ’ ಎಂದು ಬೊಹ್ರಾ ಬರೆದುಕೊಂಡಿದ್ದಾರೆ.

ನಟಿ ಕರಿಷ್ಮಾ ತನ್ನಾ ಮನೆ ಕೆಲಸ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇಸ್ಟಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ‘ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವುದು ಉತ್ತಮ. ಹೀಗಾಗಿ ಇಂದು ನಾನು ಮ್ಯಾಗಿ ಮಾಡುತ್ತಿರುವೆ. ಅದಕ್ಕೆ ವಿವಿಧ ತರಕಾರಿ ಕಟ್ ಮಾಡಿ ಅದರಲ್ಲಿ ಹಾಕುತ್ತಿರುವೆ. ನನ್ನ ತಾಯಿಗೆ ಸಹಾಯ ಮಾಡುದಕ್ಕಾಗಿ ನಾನು ಕೆಲಸ ಮಾಡುತ್ತಿರುವೆ’ ಎಂದು ಕರಿಷ್ಮಾ ಹೇಳಿದ್ದಾರೆ. ಜೊತೆಗೆ ಮ್ಯಾಗಿ ತಯಾರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

https://www.instagram.com/p/B-FBrGIn6rA/?utm_source=ig_embed

ಕಿರುತೆರೆ ನಟ ಅರ್ಜುನ್ ಬಿಜ್ಲಾನಿ ಅವರು ತಮ್ಮ ಬಿಡುವಿನ ವೇಳೆ ಮಗನಿಗೆ ಚಿತ್ರಕಲೆ ಕಲಿಸಿದ್ದಾರೆ. ಅರ್ಜುನ್ ಬಿಜ್ಲಾನಿ ಪಾಠ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *