-‘ಕುಟ್ಟಿ ತಲಾ’ಗೆ ವೆಲ್‍ಕಮ್ ಎಂದ ಸಿಎಸ್‍ಕೆ
ಮುಂಬೈ: ಟೀಂ ಇಂಡಿಯಾ ಅನುಭವಿ ಆಟಗಾರ ಸುರೇಶ್ ರೈನಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ರೈನಾ ಪತ್ನಿ ಪ್ರಿಯಾಂಕಾ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕುಟ್ಟಿ ತಲಾಗೆ ಸ್ವಾಗತ ಕೋರಿದೆ.
ರೈನಾ ದಂಪತಿಗೆ 2016ರಲ್ಲಿ ಹೆಣ್ಣು ಮಗುವಾಗಿತ್ತು. ಈಗ ರೈನಾ ಪತ್ನಿ ಪ್ರಿಯಾಂಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ರೈನಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿಮಾನಿಗಳು ರೈನಾ ದಂಪತಿಗೆ ಶುಭಕೋರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
The beginning of all things – wonder, hope, possibilities and a better world! We are proud to welcome our son & Gracia’s little brother – Rio Raina. May he flows beyond boundaries, bringing peace, renewal & prosperity to everyone’s life. pic.twitter.com/SLR9FPutdx
— Suresh Raina???????? (@ImRaina) March 23, 2020
ಸುರೇಶ್ ರೈನಾ ಸ್ವತಃ ತಾವು 2ನೇ ಬಾರಿ ತಂದೆಯಾಗಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದು, ಗಂಡು ಮಗುವಾಗಿದೆ ಎಂದಿದ್ದಾರೆ. ಅಲ್ಲದೇ ಪುತ್ರನ ಹೆಸರನ್ನು ರೈನಾ ರಿವೀಲ್ ಮಾಡಿದ್ದಾರೆ. ಗ್ರೇಸಿಯಾ ರೈನಾಗೆ ಸಹೋದರ ರಿಯೊ ರೈನಾ ಎಂದು ತಿಳಿಸಿದ್ದಾರೆ. ರೈನಾ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್ ದಂಪತಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
ರೈನಾಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇತ್ತ ಶುಭಕೋರಿರುವ ಪತ್ರಕರ್ತ ಬೋರಿಯ ಮಜುಂದಾರ್, ರೈನಾ ತಂದೆಯಾಗಿರುವುದಕ್ಕೆ ಅಭಿನಂದನೆಗಳು. ದೇವರ ದಯೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
Kutti Thala is here! Lots of #Yellove and #WhistlePodu to @_PriyankaCRaina and @ImRaina for the newest addition to the #superfamily. ???????? pic.twitter.com/Uz2SYEKHGR
— Chennai Super Kings (@ChennaiIPL) March 23, 2020
2018ರ ಜುಲೈನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವಾಡಿರುವ ರೈನಾ 2020ರ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಭರವಸೆಯಲ್ಲಿದ್ದರು. 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ಭಾಗಿದ್ದ ರೈನಾ, 2019ರಲ್ಲಿ ಗಾಯದ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2020ರ ಐಪಿಎಲ್ ಆವೃತ್ತಿಯ ಸಿಎಸ್‍ಕೆ ತರಬೇತಿಗೆ ಹಾಜರಾಗಿದ್ದ ರೈನಾ ಕೊರೊನಾದಿಂದ ಟೂರ್ನಿ ರದ್ದಾಗುತ್ತಿದ್ದಂತೆ ತವರಿಗೆ ವಾಪಸ್ ಆಗಿದ್ದರು. ಕೋವಿಡ್-18 ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಭಾನುವಾರ ಧನ್ಯವಾದ ತಿಳಿಸಿ ರೈನಾ ಟ್ವೀಟ್ ಮಾಡಿದ್ದರು.